ಪ್ರಜಾ ನಾಯಕ ಸುದ್ದಿ ಬೆಂಗಳೂರು-: ಎರಡನೇ ಸಲ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯನವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ. ಡಿ.ಕೆ. ಶಿವಕುಮಾರ್ ರವರು ಉಪಮುಖ್ಯ ಮಂತ್ರಿ ಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದು ಗಂಗಾಧರ ಅಜ್ಜಯ್ಯ ನ ಹೆಸರಲ್ಲಿ! ಆಗಲೇ ಕರ್ನಾಟಕದ ಬಹುತೇಕ ಜನರಲ್ಲಿ ಯಾರು ಈ ಅಜ್ಜಯ್ಯ? ಎಂಬ ಪ್ರಶ್ನೆ ಮೂಡಿತು. ಮಾಮೂಲಾಗಿ ರಾಜಕೀ ಯ ಆಸಕ್ತಿ ಇರುವವರಿಗೆ ಅಥವಾ ಡಿಕೆಶಿ ಬೆಂಬಲಿಗರಿಗೆ ಅಜ್ಜಯ್ಯ ನ ಪರಿಚಯ ಇದ್ದೇ ಇರುತ್ತದೆ, ಸಾಮಾನ್ಯ ಜನರಿಗೆ ಇವರ ಪರಿಚಯ ಅಷ್ಟಾಗಿಲ್ಲ.
ವಾಸ್ತವವಾಗಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಕೇಂದ್ರ ಸ್ಥಳದಿಂದ 15 ಕಿ.ಮಿ ದೂರದಲ್ಲಿದೆ ಒಂದು ನೊಣವಿಕೆರೆ ಎಂಬ ಗ್ರಾಮ ಇದೆ. ಈ ಗ್ರಾಮದಲ್ಲಿ ಒಂದು ಕಾಡಸಿದ್ದೇಶ್ವರ ಮಠ ಎಂಬ ಪುರಾತನ ಮಠ ಇದೆ. ಮಾಹಿತಿಯ ಪ್ರಕಾರ ಈ ಮಠಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ! ಅಂಥ ಮಠದ ಪಕ್ಕಾ ಭಕ್ತರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್. ಆ ಮಠದ ಈಗಿನ ಪೀಠಾಧಿಪತಿ 70 ವರ್ಷ ಆಸುಪಾಸಿನ ಶ್ರೀ ವೃಷಭ ದೇಶಿ ಕೇಂದ್ರ ಸ್ವಾಮೀಜಿ. ಡಿ.ಕೆ ಶಿವಕುಮಾರ್ ತಮಗೆ ಕಷ್ಟ ಬಂದಾಗ ಲೆಲ್ಲ ಮೊರೆ ಹೋಗುವುದು ಇದೇ ಸ್ವಾಮಿಜಿಯನ್ನು.
ಅವರಷ್ಟೇ ಅಲ್ಲದೇ ತುಮಕೂರು ಜಿಲ್ಲೆಯತುಂಬಾ ರಾಜಕಾರಣಿ ಗಳು ಶ್ರೀಮಠಕ್ಕೆ ಭೇಟಿ ಕೊಟ್ಟು ಸ್ವಾಮೀಗಳ ಆಶಿರ್ವಾದ ಪಡೆ ಯುತ್ತಾರೆ. ಶ್ರೀ ಎಸ್.ಎಂ.ಕೃಷ್ಣರವರು ಮಹಾರಾಷ್ಟ್ರದ ರಾಜ್ಯಪಾಲ ರಾಗಿದ್ದಾಗ ಈ ಮಠಕ್ಕೆ ಭೇಟಿ ನೀಡಿದ್ದರು. ಈ ಸ್ವಾಮೀಯವರ ಭವಿಷ್ಯವನ್ನು ತುಂಬಾ ಜನ ನಂಬುತ್ತಾರೆ. ಡಿ.ಕೆ. ಶಿವಕುಮಾರ್ ಕೂಡ ಹಲವು ವರ್ಷಗಳಿಂದ ಸ್ವಾಮಿಜಿಯನ್ನು ಭೇಟಿಯಾಗುತ್ತ ಬಂದಿದ್ದಾರೆ. ಯಾವುದೇ ಕಷ್ಟ ಕಾರ್ಪಣ್ಯ ಬರಲಿ ಅಥವಾ ಶುಭ ಸಂದರ್ಭ ಬರಲಿ ಅವರು ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬರುತ್ತಾರೆ.
ಐಟಿ, ಇಡಿ ದಾಳಿಗೊಳಗಾಗಿ ಬಂಧನವಾದಾಗ ಡಿ.ಕೆ.ಶಿವಕುಮಾರ್ ತೀವ್ರ ಕುಗ್ಗಿ ಹೋಗಿದ್ದರು. ಆಮೇಲೆ ಬಿಡುಗಡೆಯಾದ ನಂತರ ಅವರು ಸೀದಾ ಬಂದಿದ್ದು ಈ ನೊಣವಿನ ಕೆರೆ ಅಜ್ಜಯ್ಯನವರ ಮಠಕ್ಕೆ. ಎಲ್ಲ ಕಷ್ಟಗಳು ಕರಗಿ ಮುಖ್ಯಮಂತ್ರಿ ಕೂಡ ಆಗುತ್ತೀರಿ ಎಂದು ಆಗ ಅಜ್ಜಯ್ಯನವರು ಡಿಕೆಶಿಗೆ ಸಮಾದಾನ ಮಾಡಿದ್ದರು. ಇದಾದ ನಂತರ ಮಗಳ ಮದುವೆ ಸೇರಿದಂತೆ ಹಲವು ಶುಭ ಸಂದರ್ಭ ಮತ್ತು ಇತರೆ ಕಾರಣಗಳಿಗಾಗಿ ಡಿಕೆಶಿ ಸ್ವಾಮೀಜಿಯನ್ನು ಭೇಟಿ ಮಾಡುತ್ತಲೇ ಇದ್ದರು.
“ನೊಣವಿನಕೆರೆಯ ಕಾಡಸಿದ್ಧೇಶ್ವರ ಮಠ ನನಗೆ ದೈವ ಕ್ಷೇತ್ರ ಇದ್ದಹಾಗೆ. ಗಂಗಾಧರ ಅಜ್ಜ ನನಗೆ ಹಲವು ಸಲ ಮಾರ್ಗದರ್ಶನ ಮಾಡಿದ್ದಾರೆ. ನಾನು ಅಧ್ಯಕ್ಷನಾಗಿ ಅಧಿಕಾರ ತೆಗೆದುಕೊಂಡಾಗಿ ನಿಂದಲೂ, ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಟಿಕೆಟ್ ಕೊಡಬಾರದು ಎಂಬುದನ್ನು ಸಹ ಇಲ್ಲಿಯೇ ಮಾರ್ಗದರ್ಶನ ಪಡೆದು ನಿರ್ಧಾರ ಮಾಡಿದ್ದೇನೆ” ಎಂದು ಡಿ.ಕೆ ಶಿವಕುಮಾರ್ ಸುದ್ದಿಗಾರರ ಮುಂದೆ ಮೊನ್ನೆ 14 ನೇ ತಾರಿಖಿನಂದು ಚುನಾವಣೆ ಯಲ್ಲಿ ಜಯಭೇರಿ ಭಾರಿಸಿದ ಬಳಿಕ ಹೇಳಿದ್ದರು.
ಈ ಬಾರಿ ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್ ಭಾರೀ ಬಹುಮತ ಬರುತ್ತಿದ್ದಂತೆ ತಮ್ಮನ್ನು ಭೇಟಿಯಾದ ಡಿಕೆಶಿಯವರಿಗೆ ಸ್ವಾಮೀಜಿ ಅವರು “ನಿಮಗೆ ಉತ್ತಮ ಸ್ಥಾನ ದೊರೆಯಲಿದೆ” ಎನ್ನುವ ಅಭಯವನ್ನೂ ನೀಡಿದ್ದರು. ಅದರಂತೆ ಈಗ ಡಿಕೆಶಿ ಉಪಮುಖ್ಯಮಂತ್ರಿಯಾಗಿದ್ದಾರೆ. ಹಲವು ವರ್ಷಗಳಿಂದ ಬೆಳೆದು ಬಂದಿರುವ ಈ ನಂಟು, ಹಾಗೂ ಅಜ್ಜಯ್ಯನವರ ಮೇಲೆ ಡಿಕೆಶಿಗೆ ಇರುವ ನಂಬಿಕೆಯ ಕಾರಣಕ್ಕೇ ಡಿಕೆಶಿಯವರು ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.