ಪ್ರಜಾ ನಾಯಕ ಸುದ್ದಿ ಜಗಳೂರು :- 2023ರ ವಿಧಾನಸಭಾ ಚುನಾ ವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಡಿಮೆ ಅಂತರ ದಿoದ ಸೋತಿರ ಬಹುದು, ನೈತಿಕವಾಗಿ ಕ್ಷೇತ್ರದ ಜನರ ಮನಸ್ಸು, ಹೃದಯ ದಲ್ಲಿ ಗೆದ್ದಿರುವೆ.ಯಾರು ಎದೆಗುಂದ ಬಾರದು ನಾನು ನಿಮ್ಮೊಂದಿ ಗಿರುವೆ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಸ್ವಾಮಿಮಾನಿ ಕಾರ್ಯಕರ್ತರು, ಅಭಿಮಾನಿಗಳಿಗೆ ಭರವಸೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ಸ್ವಾಭಿಮಾನಿ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಹಾಗೂ ಅಭಿಮಾನಿ ಗಳು ಎಚ್.ಪಿ.ರಾಜೇಶ್ ನೇತೃತ್ವದಲ್ಲಿ ಸಮಾ ಲೋಚನಾ ಹಾಗೂ ಮತದಾರರಿಗೆ ಹಮ್ಮಿಕೊಂಡಿದ್ದ ಕೃತಜ್ಞತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಬಲಿಸಿದ ಕ್ಷೇತ್ರದ ಜನರ ನೆನೆದು ಕಣ್ಣೀರು ಹಾಕಿದ ರಾಜೇಶ್ ಕಾಂಗ್ರೆಸ್ ಪಕ್ಷದಿಂದ ದುಡಿದು ಪಕ್ಷ ಕಟ್ಟಿ ಬೆಳೆಸಿದ ನನಗೆ ಟಿಕೆಟ್ ಸಿಗದ ಬೇರೆಯವರಿಗೆ ಟಿಕೆಟ್ ನೀಡಿದ ಹಿನ್ನೆಲೆ ಯಲ್ಲಿ ಪಕ್ಷೇತರ ನಾಗಿ ಸ್ಪರ್ಧಿಸಿದ ನನಗೆ ಕಾಂಗ್ರೆಸ್ ಪಕ್ಷ ತೊರೆದು ಬಹುತೇಕ ಮುಖಂಡರುಗಳು, ಕಾರ್ಯಕರ್ತರು, ನನ್ನ ಜೊತೆಗೆ ಬಂದರು, ಬಿಜೆಪಿ ಪಕ್ಷದವರು, ಅಭಿಮಾನಿಗಳು, ಕ್ಷೇತ್ರದ ಸ್ವಾಭಿ ಮಾನಿ ಮತದಾರರ ಮತ ನೀಡಿದ್ದಾರೆ.ಅಪಾರ ಜನಬೆಂಬಲ ದೊರೆ ತರೂ ಮತಗಳಿಕೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ ಗಳಿಗೆ ಬೆವರಿಳಿಸುವಕೆಲಸವನ್ನು ಸ್ವಾಭಿಮಾನಿ ಮತದಾರರು ಮಾಡಿ ಕೆಲವೇ ಮತಗಳ ಹಂತರದಿoದ ನನಗೆ ಸೋಲಾಯಿತು. ಅತಿಯಾದ ಆತ್ಮ ವಿಶ್ವಾಸ ಕಾರಣವಿರಬಹುದು. ನನಗೆ ಬೆಂಬಲ ನಿಂತ ನಿಮಗೆ ಅಭಾರಿಯಾಗಿರುವೆ ಎಂದು ಕಣ್ಣೀರು ಹಾಕಿದರು.
ಸೋತರೂ ಮನೆಯಲ್ಲಿ ಕೂರೋದಿಲ್ಲ ಕ್ಷೇತ್ರದಲ್ಲಿ ಜನರ ಕಷ್ಟ ಸುಖಗಳಲ್ಲಿ ಭಾಗವಹಿಸುತ್ತೇನೆ, ಕಾರ್ಯಕರ್ತರು ತಮಗೇ ಏನೇ ಕಷ್ಟವಿದ್ದರೂ ನನ್ನನ್ನು ಸಂಪರ್ಕಿಸಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯತುಂಬಿದರು.
ಪಕ್ಷ ಬಿಟ್ಟು ಕೇವಲ 15 ದಿನಗಳಲ್ಲಿ ಹೋರಾಟ ಮಾಡಿ ಇಷ್ಟು ಮತ ಗಳನ್ನು ಪಡೆದುಕೊಂಡಿದ್ದೇವೆ, ಎಷ್ಟೋ ಮಹಿಳೆಯರು ಗೊತ್ತಿಲ್ಲದೇ ರಾಜೇಶ್ ಕಾಂಗ್ರೇಸ್ ಪಕ್ಷದವರೆಂದು ಮತ ನೀಡಿದ್ದಾರೆ, ಇದರ ಜೊತೆ ನೋಟಕ್ಕೆ ಮತ ಬಿದ್ದ ಕಾರಣ ಹಿನ್ನಡೆಯಾಗಿದೆ, ಇಲ್ಲದಿದ್ದರೆ ಗೆಲುವು ನಮ್ಮದಾಗುತ್ತಿದ್ದು ಎಂದು ಬೇಸರ ವ್ಯಕ್ತಪಡಿಸಿದರು.
ನಿರಂತರ ಹೋರಾಟ ಮಾಡುವೆ:-ಇಲ್ಲಿವರೆಗೂ ನಾನು 5 ಚುನಾ ವಣೆ ಮಾಡಿದ್ದೇನೆ ಆದರೆ ಒಂದು ಬಾರಿ ಗೆದ್ದು 5 ವರ್ಷ ಮಾತ್ರ ಅಧಿಕಾರ ನಡೆಸಿದ್ದೇನೆ, ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದೇನೆ, ನೀರಾ ವರಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡ ವರ್ಗದವ ರಿಗೆ 15 ಸಾವಿರ ಮನೆ ಸೇರಿದಂತೆ ಸಾಕಷ್ಟು ಅಭಿವೃದ್ದಿ ಕಾರ್ಯಗಳ ನ್ನು ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ದಿಗಾಗಿ ನಿರಂತರ ಹೋರಾಟ ಮಾಡುತ್ತೇನೆ ಎಂದರು.
ಹುತ್ತ ಕಟ್ಟಿದ್ದು ನಾವು, ಲಾಭ ಪಡೆದಿದ್ದು ಇನ್ನೊಬ್ಬರು:- ಚುನಾವಣೆ ಫಲಿತಾಂಶದ ದಿನ ಮತ ಎಣಿಕೆ ಕೇಂದ್ರಕ್ಕೆ ಸೋಲುವ ಭೀತಿಯಿಂ ದ ಯಾವೊಬ್ಬರು ಬಂದಿರಲಿಲ್ಲ, ಆದರೆ ನನಗೆ ಗೆಲ್ಲುವ ಆತ್ಮವಿಶ್ವಾ ಸವಿತ್ತು ನಾನೊಬ್ಬನೇ ಹೋಗಿದ್ದೆ, ಆದರೆ ನನಗೆ ಗೆಲ್ಲುವ ಅದೃಷ್ಟ ದೊರೆಯಲಿಲ್ಲ. ಎರಡೂ ರಾಷ್ಟಿಯ ಯ ಪಕ್ಷಗಳನ್ನು ಮೀರಿಸುವ ಷ್ಟು ಶ್ರಮ ಹಾಕಲಾ ಗಿತ್ತು, ಫಲಿತಾಂಶಕ್ಕೂ ಹಿಂದಿನ ದಿನ ನನಗೆ ಹಾಲಿ-ಮಾಜಿ ಮುಖ್ಯಮಂತ್ರಿಗಳು ಕರೆ ಮಾಡಿ ಮಾತನಾಡಿದ್ದರು. ಅಷ್ಟು ಆತ್ಮವಿಶ್ವಾಸವಿತ್ತು. ಪ್ರತಿಯೊಂದು ಬೂತ್ನಲ್ಲಿ ಪ್ರಮಾಣಿಕ ವಾಗಿ ಕೆಲಸ ಮಾಡಿದ್ದೀರಿ, ನನ್ನ ನಂಬಿಕೊoಡು ಕಾಂಗ್ರೇಸ್ ಪಕ್ಷದ ದೊಡ್ಡ ದೊಡ್ಡ ಮುಖಂಡರು ನನ್ನ ಜೊತೆ ಕೈ ಜೋಡಿಸಿದರು, ಆದ ರೆ ಹುತ್ತ ಕಟ್ಟಿದ್ದು ನಾವು ಲಾಭ ಪಡೆದಿದ್ದು ಬೇರೆಯವರು ಎಂದು ಅಸಮಧಾನ ವ್ಯಕ್ತಪಡಿಸಿದರು.
ಏನೇ ಸಮಸ್ಯೆ ಇದ್ದರೂ ನನಗೆ ಕರೆ ಮಾಡಿ:-ಸಾಕಷ್ಟು ಅವಕಾಶ ಇದಾವೆ ನಮ್ಮಲ್ಲಿ ಶಕ್ತಿ ಇದೆ, ಇದನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ, ಸ್ವಾಭಿಮಾನವನ್ನು ಮುಂದುವರೆಸಿಕೊoಡು ಹೋಗೋ ಣ, ಯಾರೂ ಗೊಂದಲ ಮಾಡಿಕೊಳ್ಳಬೇಡಿ, ಸದಾ ಕಾಲ ನಿಮ್ಮ ಜೊತೆಗೆ ಇರುತ್ತೇನೆ, ಯಾರೂ ಕಾನೂನು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ, ನಮ್ಮ ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ, ಏನೇ ಸಮಸ್ಯೆ ಇದ್ದರೂ ನನಗೆ ಕರೆ ಮಾಡಿ ತಿಳಿಸಿ ನಿಮ್ಮ ಜೊತೆ ನಾನಿದ್ದೇನೆ ಎಂದು ಕಾರ್ಯಕರ್ತರಿಗೆ ದೈರ್ಯ ತುಂಬಿದರು.
ನೀವು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ:- ಮಾಜಿ ತಾ.ಪಂ. ಅಧ್ಯಕ್ಷ ಯು.ಜಿ.ಶಿವಕುಮಾರ, ಜಿ.ಪಂ.ಮಾಜಿ ಸದಸ್ಯ ಎಸ್.ಕೆ. ರಾಮರೆಡ್ಡಿ, ತಿಪ್ಪೇಸ್ವಾಮಿಗೌಡ, ಮಾತನಾಡಿ ನಮ್ಮ ಅತೀಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣವಾಯಿತು ಎಂದು ಅನಿಸುತ್ತಿದೆ, ರಾಜೇಶ್ 5 ವರ್ಷ ಕಾಲ ಪಕ್ಷವನ್ನು ಸಂಘಟಿಸಿ ಕಾರ್ಯಕ್ರಮ ಗಳನ್ನು ಮಾಡಿಕೊಂಡರು, ಆದರೂ ಅದರ ಫಲ ಪಡೆದವರೇ ಬೇರೆಯವರು, ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲೂಕು ಪಂಚಾ ಯ್ತಿ ಚುನಾವಣೆ ಇವೆ.ರಾಜೇಶ್ ಅವರ ತೀರ್ಮಾನಕ್ಕೆ ಬದ್ದರಿದ್ದೇವೆ ಎಂದರು
ಪoಚಮಸಾಲಿ ಸಮಾಜದ ಮುಖಂಡ ಎಂ.ಎಸ್.ಪಟೇಲ್ ಮಾತ ನಾಡಿ ಸ್ವಾಭಿಮಾನ ಪಕ್ಷದ ಅಭ್ಯರ್ಥಿಯಾಗಿ ರಾಜೇಶ್ ಸ್ಪರ್ಧಿಸಿ ಸ್ವಲ್ಪ ಮತಗಳಿಂದ ಸೋಲು ಅನುಭವಿಸುವಂತಾಗಿದೆ. ನಿಜವಾಗಿಯೂ ಇದು ಸೋಲಲ್ಲ. ತಾಂತ್ರಿಕ ವ್ಯವಸ್ಥೆಯಿಂದ ಸೋಲಾಗಿದೆ, ಕೊನೆ ಕೊನೆ ಎಂದು ಹೇಳಿದ ತಪ್ಪು ಸಂದೇಶ ಇಂದು ದೊಡ್ಡ ಪೆಟ್ಟು ನೀಡಿದೆ, ಯಾವುದೇ ಚುನಾವಣೆ ಮಾಡುವಾಗ ಬಹಳ ಮುನ್ನೆಚ್ಚ ರಿಕೆಯಿಂದ ಮಾಡಬೇಕು. ತಾಲೂಕಿನಲ್ಲೇ ರಾಜೇಶ್ ಗೆಲುವು ನಿಶ್ಚಿತ ಎಂದು ಬರೆದಾಗಿತ್ತು, ಫಲಿತಾಂಶ ಬಂದಾಗ ಅದೃಷ್ಟವಿಲ್ಲ. ರಾಜೇಶ್ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ, ಧೈರ್ಯದಿಂದ ಮುನ್ನಡೆಯಬೇಕು ಎಂದರು.
ಎಪಿಎoಸಿ ಮಾಜಿ ಅಧ್ಯಕ್ಷ ಎನ್.ಎಸ್.ರಾಜು, ಮಾತನಾಡಿ ಈ ಹಿಂದೆ ಜೆಡಿಎಸ್ಗೆ ಬೆಂಬಲಿಸಿ ದೇವೇಂದ್ರಪ್ಪ ಸೋತರು,ಈ ಬಾರಿ ರಾಜೇಶ್ಗೆ ಬೆಂಬಲಿಸಿ ಅವರೂ ಸೋತರು, ನನಗೆ ರಾಜಕೀಯ ಆಸಕ್ತಿ ಇದೆ, ದೊಣ್ಣೆಹಳ್ಳಿಗೆ ಕ್ಷೇತ್ರಕ್ಕೆ ಆಕಾಂಕ್ಷಿ ಯಾಗಿದ್ದೆ ಆದರೆ ರಾಜಕೀಯವನೇ ನಿವೃತ್ತಿ ಆಗಬೇಕು ಅನಿಸಿದೆ. ಈ ಬಾರಿ ಗೆದ್ದರೆ ಸಚಿವ ಸ್ಥಾನದ ಆಸೆ ಇತ್ತು ಈಡೇರಲಿಲ್ಲ, ನಮ್ಮ ಜೊತೆಗೆ ಇದ್ದವ ರನ್ನು ಮನವೋಲಿಸುವ ಕೆಲಸವನ್ನು ವಿರೋಧ ಪಕ್ಷದವರು ಮಾಡಿ ದ್ದರಿಂದ ಸೋಲು ಅನುಭವಿಸುವಂತಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಗಿರೀಶ್ ಒಡೆಯರ್, ತಿಪ್ಪೇಸ್ವಾಮಿಗೌಡ,ತಾ. ಪಂ.ಮಾಜಿ ಸದಸ್ಯ ಮರೇನಹಳ್ಳಿ ಬಸವರಾಜ,ವೈ. ಎನ್.ಮಂಜು ನಾಥ್,ಹನುಮoತಾಪುರ ಬಸವರಾಜ್, ಲೋಕೇಶ್, ಕುಬೇರಪ್ಪ, ಸೂರಲಿಂಗಪ್ಪ, ಶ್ರೀನಿವಾಸ್, ರೇವಣ್ಣ, ಮಾಗಡಿ ಹನುಮಂತಪ್ಪ ಸಿದ್ದಪ್ಪ,ಕಣ್ವಕುಪ್ಪೆ ಶರಣಮ್ಮ ಸೇರಿದಂತೆ ಇತರರು ಉಪಸ್ಥಿತರಿ ದ್ದರು.