ಪ್ರಜಾ ನಾಯಕ ಸುದ್ದಿ ಜಗಳೂರು :- ಪ್ರಸಕ್ತವಾಗಿ ಎಸ್ಇಪಿ ಟಿಎಸ್ ಪಿ ಯೋಜನೆಯಡಿ ₹50 ಲಕ್ಷ ವೆಚ್ಚದ ಕಟ್ಟಡ ಕಾಮಗಾರಿ ಪ್ರಗತಿ ಯಲ್ಲಿದೆ.ಮುಂದಿನ ದಿನಗಳಲ್ಲಿ ₹1.75 ಕೋಟಿ ವೆಚ್ಚದಲ್ಲಿ ಕಾಲೇಜು ಅಭಿವೃದ್ದಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಬಿ.ದೆವೇಂದ್ರಪ್ಪ ಭರವಸೆ ನೀಡಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ, ಎನ್ ಎಸ್ ಎಸ್,ಯುವರೆಡ್ ಕ್ರಾಸ್,ರೋವರ್ಸ್,ಐಕ್ಯೂ ಎಸಿ,ಸಮಾರೋಪ ಸಮಾರಂಭ,ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣಕ್ಕೆ ಬಡತನ ಅಡ್ಡಿಯಲ್ಲ.ಪ್ರತಿಭೆಗಳು ಅರಳವುದು ಗುಡಿಸಲಿ ನಲ್ಲಿ ಸರಕಾರದ ಸೌಲಭ್ಯಗಳನ್ನು ಸದುಪಯೋಗಡೆದು ಕೊಂಡು ಉತ್ತಮ ಸಂಸ್ಕಾರಯುತ ಶಿಕ್ಷಣ ಪಡೆಯಿರಿ.ಹಂತಹಂತವಾಗಿ ಸಂಸ್ಕಾರಗೊಂಡು ಪರಿವರ್ತನೆಗೊಳ್ಳುವ ತುಪ್ಪ,ಮಜ್ಜಿಗೆ,ಮೊಸರು ಗಳು ಹಾಲಿನ ಉತ್ಪನ್ನಗಳಾದರೆ ಸಂಪತ್ತು,ವಿನಯ,ಗೌರವ,ವಿದ್ಯೆ ಯ ಉತ್ಪನ್ನಗಳಾಗಿವೆ ಎಂದು ನಿದರ್ಶನ ನೀಡಿದರು.
ನಾನೊಬ್ಬ ಶಾಸಕ ದೇವೇಂದ್ರಪ್ಪನಲ್ಲ ಸೇವಕ ದೇವೇಂದ್ರಪ್ಪ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವೆ :- ಪ್ರತಿಯೊಬ್ಬರೂ ಜೀವನದಲ್ಲಿ ಮನುಷ್ಯತ್ವವನ್ನು ಮೈಗೂಡಿಸಿಕೊಂಡು ಎಲ್ಲರನೊಡ ನೆ ಬೆರೆತು ಸೇವಾಮನೋಭಾವದಿಂದ ಸಮಾಜದ ಅಭಿವೃದ್ದಿಗೆ ಶ್ರಮಿಸೋಣ ಎಂದು ಕರೆ ನೀಡಿದರು.ಮೊಬೈಲ್ ಬಳಕೆ ಮಿತವಾಗಿ ರಲಿ ತಮ್ಮ ಉಜ್ವಲ ಭವಿಷ್ಯಕ್ಕೆ ಮಾರಕ ವಾಗದೆ ಶಿಕ್ಷಣಕ್ಕೆ ಪೂರಕ ವಾಗಲಿ.ನಿಮ್ಮ ಭವಿಷ್ಯ ತಮ್ಮ ಕೈಯಲ್ಲಿದೆ.ನನ್ನ ಪುತ್ರನಂತೆ ತಮ್ಮಲ್ಲಿ ಯೂ ಐಎಎಸ್ ಐಆರ್ ಎಸ್ ಐಪಿಎಸ್ ನಂತಹ ಹುದ್ದೆಗಳನ್ನು ಅಲಂಕರಿಸಿ ತಾಲೂಕಿನ ಕೀರ್ತಿ ಹೆಚ್ಚಿಸಿ ಎಂದು ಹಾರೈಸಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತ ನಾಡಿ,ವಿದ್ಯಾರ್ಥಿದೆಸೆಯಲ್ಲಿ ಹೆಚ್ಚು ಹೆಚ್ಚು ಪುಸ್ತಕಗಳನ್ನು ಅಭ್ಯಾಸ ಮಾಡಬೇಕು. ನೀರಾವರಿ ,ಗಣಿಗಾರಿಕೆ,ಮೂಲಗಳಿಲ್ಲದ ತಾಲೂಕಿ ನಲ್ಲಿ ಶಿಕ್ಷಣವನ್ನು ಆಸ್ತಿಯನ್ನಾಗಿಸಬೇಕಿದೆ.ವಿದ್ಯಾರ್ಥಿಗಳು ಆಸಕ್ತಿ ಯುಳ್ಳ ಕೋರ್ಸ್ ನಲ್ಲಿ ಉತ್ತಮ ವ್ಯಾಸಂಗದೊಂದಿಗೆ ಉನ್ನತ ಹುದ್ದೆ ಅಲಂಕರಿಸಬೇಕು ಹಾಗೂ ಸರಕಾರಿ ಶಾಲಾಕಾಲೇಜುಗಳ ಲ್ಲಿನ ಕುಂದು ಕೊರತೆಗಳನ್ನು ಶಾಸಕರು ಶೀಘ್ರದಲ್ಲಿ ಪರಿಹರಿಸ ಬೇಕು ಎಂದು ಹೇಳಿದರು
ಚಿತ್ರದುರ್ಗದ ಸರಕಾರಿ ಕಲಾ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾ ಪಕ ಕರಿಯಪ್ಪ ಮಾಳಗಿ ವಿಶೇಷ ಉಪನ್ಯಾಸ ನೀಡಿ,ಆಧುನಿಕತೆಯ ಡಿಜಿಟಲ್ ಕಾಲಘಟ್ಟದಲ್ಲಿ ಪ್ರತಿಯೊಬ್ಬರ ವ್ಯಕ್ತಿತ್ವ,ಆಲೋಚನೆ, ಸ್ಪರ್ಧಾತ್ಮಕ ಮನೋಭಾವನೆಗಳು ಬದಲಾಗಬೇಕಿದೆ.ಇಂದು ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ.ಶಿಕ್ಷಣ ಜ್ಞಾನ ನೀಡಿದರೆ ಕೌಶಲ್ಯ ಬದುಕು ಕಲ್ಪಿಸುತ್ತದೆ.ಸದುಪಯೋಗ ಪಡೆದುಕೊಂಡು ಭವಿಷ್ಯದಲ್ಲಿ ಸುಂದರವಾದ ಬದುಕು ನಿರ್ಮಾಣ ಮಾಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಕೊರೊನ ಕರಿಛಾಯೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಪರಿ ಣಾಮ ಬೀರಿ ಆತಂಕ ಮೂಡಿಸಿತ್ತು.ಇದರಿಂದ ಆಂತರಿಕ ಪ್ರತಿಭೆ ಮೌನವಾಗಿಸಿತು.ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್ ಏಕಾಂಗಿತನ ಉಂಟುಮಾಡುತ್ತಿದೆ.ಓದುವ ಸುಖ ಕಿತ್ತುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.ಯುವ ಸಮೂಹ ಬುದ್ದ ,ಬಸವಣ್ಣ, ಅಂಬೇಡ್ಕರ್ ,ಸ್ವಾಮಿ ವಿವೇಕಾನಂದರ ಅವರಂತಹ ಮಹಾನೀ ಯರ ಜೀವನ ಚರಿತ್ರೆ ಓದಬೇಕಿದೆ.ಇಲ್ಲವಾದರೆ ಕ್ರಮೇಣವಾಗಿ ಮಾನವೀಯ ಮೌಲ್ಯ ಗಳು ಕ್ಷೀಣಿಸುತ್ತವೆ ಎಂದು ಕಳವಳ ಗೊಂಡರು.
ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ ರಾವ್ ಮಾತನಾಡಿ,ಸರಕಾರಿ ಶಾಲೆಗಳಲ್ಲಿ ಅಭ್ಯಾಸಮಾಡಿದವರು ದೇಶದ ರಕ್ಷಣೆಗೆ ಅಭಿವೃದ್ದಿಗೆ ಸೇವೆಗೈಯುತ್ತಿದ್ದಾರೆ.ಆದರೆ ಖಾಸಗಿ ಶಾಲೆಗಳಲ್ಲಿ ಹಣಭರಿಸಿ ವ್ಯಾಮೋಹದಿಂದ ಅಭ್ಯಾಸಮಾಡಿದವರು ವಿದೇಶಿಗಳಲ್ಲಿ ದುಡಿಮೆ ಗೆ ಸೀಮಿತ.ಸರಕಾರಿ ಕಾಲೇಜಿನಲ್ಲಿ ಅಭ್ಯಾಸಮಾಡುವವರಿಗೆ ಕೀಳಿರಿಮೆ ಮನೋಭಾವ ಸಲ್ಲದು ಎಂದರು.
ಸಂದರ್ಭದಲ್ಲಿ ಪ್ರಾಂಶುಪಾಲರಾದ ರಾಜೇಶ್ವರಿ ಪೂಜಾರ್, ನಲಂದ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿಗಳಾದ ಶ್ವೇತಾ ಮಧು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಸಿಡಿಸಿ ಸದಸ್ಯ ರಾದ ಪ್ರಶಾಂತ್,ಶ್ವೇತಾ ಮಧು,ಸಿ.ತಿಪ್ಪೇಸ್ವಾಮಿ,ಖಲಂದರ್, ಜಯಶೀಲರೆಡ್ಡಿ,ಓಮಣ್ಣ,ಪ್ಯಾರಿಜಾನ್,ಷಂಷುದ್ದೀನ್,ಲೊಕೇಶ್ಎಂ.ವೀರಣ್ಣ,ನಂಜುಂಡಸ್ವಾಮಿ,ಮಹಮ್ಮದ್ ಗೌಸ್ .ಸಣ್ಣಸೂರಯ್ಯ, ಸಾವಿತ್ರಮ್ಮ, ಶರಣಪ್ಪ, ಮೋಹನ್,ಜಗದೀಶ್, ಪ್ರಾಧ್ಯಾಪಕರಾದ ಚೈತ್ರಾ, ಸಲ್ಮಾ ಬಾನು,ಮಲ್ಲಿ ಕಾರ್ಜುನ್ ಕಪ್ಪಿ. ಮುಖಂಡರಾದ ಪಲ್ಲಾಗಟ್ಟೆ ಶೇಖ ರಪ್ಪ,ಸಣ್ಣಸೂರಯ್ಯ, ,ಅಜಾ ಮುಲ್ಲಾ,ಅಹಮ್ಮದ್ ಅಲಿ, ಸೇರಿದಂತೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.