ಪ್ರಜಾ ನಾಯಕ ಸುದ್ದಿ ಜಗಳೂರು :- ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಮೊದಲ ಆದ್ಯತೆ ನೀಡುವೆ ಎಂದು ಶಾಸಕ ಬಿ. ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾಂಸ್ಕೃತಿಕ,ಕ್ರೀಡಾ,ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಅವರ ಆಡಳಿತಾವಧಿ ಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು.ಅವರು ಜಾರಿ ಗೊಳಿಸಿದ ಸಿಇಟಿ ಅರ್ಹತಾ ಪರೀಕ್ಷೆಯಿಂದ ಪ್ರತಿಭಾವಂತರಿಗೆ ಅವಕಾಶ ದೊರೆತ ಫಲವಾಗಿ ಕಾಲೇಜಿನ ಡಿ ದರ್ಜೆಯ ಪುತ್ರ ಎಂಬಿಬಿಎಸ್ ಪ್ರವೇಶಪಡೆದು ಪಾಸಾಗಿ ವೈದ್ಯ ವೃತ್ತಿ ಆರಂಭಿಸಿದ ನಂತರ ಐಆರ್ ಎಸ್ ಅಧಿಕಾರಿಯಾಗಿದ್ದಾನೆ ಎಂದು ಸ್ಮರಿಸಿದರು.
ನಾನು ನನ್ನ ಪುತ್ರರು ವ್ಯಾಸಂಗಮಾಡಿದ ಕಾಲೇಜು:-1976-79 ರವರೆಗೆ ನಾನು ಓದಿದ್ದು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ. ಅಲ್ಲದೆ ನನ್ನ ಇಬ್ಬರು ಪುತ್ರರು ವ್ಯಾಸಂಗಮಾಡಿದ ಕಾಲೇಜಾಗಿದ್ದು. ಐಆರ್ ಎಸ್ ಅಧಿಕಾರಿ ಡಾ.ವಿಜಯ್ ಕುಮಾರ್ ಅವರಂತಹ, ನೂರಾರು ಐಎಎಸ್ ಅಧಿಕಾರಿಗಳು ಹೊರಹೊಮ್ಮಲಿ ಎಂದು ಶುಭಕೋರಿದರು.
ವಿದ್ಯೆಗೆ ವಿನಯವೇ ಭೂಷಣ.ಶಿಕ್ಷಣಪಡೆದಲ್ಲಿ ಗೌರವ ಲಭಿ ಸುವುದು ಸಾಮಾಜಿಕ ಬದಲಾವಣೆ ಸಾಧ್ಯ.ಉನ್ನತ ಶಿಕ್ಷಣ ಪಡೆದು ಪೋಷಕರಿಗೆ ಕಾಲೇಜಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಪಟ್ಟಣದಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ದೇಶಿಯ ಕಲೆಯಾಗಿ ರುವ ಭರತ ನಾಟ್ಯ ತರಬೇತಿ ಕೇಂದ್ರ ತೆರೆಯಲಾಗುವುದು.ಅಲ್ಲದೆ ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಾಗುವುದು ಸದುಪ ಯೋಗ ಪಡೆದುಕೊಂಡು ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಸಕ್ತ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಬೇಕು ದೇಶಕ್ಕೆ ಸತ್ಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಸಿಪಿಐ ಶ್ರೀನಿವಾಸ್ ರಾವ್ ಮಾತನಾಡಿ,ಕಾಲೇಜು ಹಂತದಲ್ಲಿ ಆಕರ್ಷಣೆಗೊಳಗಾಗಿ ಪ್ರೀತಿ ಪ್ರೇಮದ ವ್ಯಾಮೋಹಕ್ಕೊಳಗಾಗ ದೆ.ಭವಿಷ್ಯದ ಕನಸ್ಸನ್ನು ಹೊಂದಿರುವ ಬಡವರ್ಗದ ಪೋಷಕರನ್ನು ಪ್ರೀತಿಸಿ,ಗೌರವಿಸಿ.ಕಾಲೇಜು ಹಂತದಲ್ಲಿ ದುಡುಕಿ ಫೊಕ್ಸೋ ಪ್ರರಣಕ್ಕೆ ಬಲಿಯಾಗಬೇಡಿ.ವಿದ್ಯಾರ್ಥಿ ಜೀವನದಲ್ಲಿ ಜ್ಞಾನಾರ್ಹನೆ ಅಗತ್ಯ ಯಾರೂ ಕದಿಯಲಾರದ ಸಂಪತ್ತು ವಿದ್ಯೆಯಾಗಿದೆ. ಮೊಬೈಲ್ ಗಳು ತೊರೆಯಬೇಕು ಎಂದು ಸಲಹೆ ನೀಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ. ಶಿವರಾಜ್ ಮಾತನಾಡಿ,ಪದವಿಪೂರ್ವ ಕಾಲೇಜು ಹಂತ ಭವಿಷ್ಯದ ಮೆಟ್ಟಿಲು. ಉನ್ನತ ವ್ಯಾಸಂಗದೊಂದಿಗೆ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಾಧನೆಗೈಯಬೇಕು.ಸರಕಾರಿ ಕಾಲೇಜುಗಳಲ್ಲಿ ಉದಯೋನ್ಮುಖ ಪ್ರತಿಭೆಗಳು ಹೊರಹೊಮ್ಮಲಿ ಎಂದರು.
ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ದ್ವಿತೀಯ ವರ್ಷದ ವಿದ್ಯಾರ್ಥಿ ಗಳು ಸ್ವಾಗತಕೋರಿದರು.ಕಲಾವಿದ ಮಹಮ್ಮದ್ ಅಲಿ.ಸಾಂಸ್ಕೃತಿ ಕ ಕಾರ್ಯಕ್ರಮ ಜರುಗಿದವು.
ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಪಲ್ಲಾ ಗಟ್ಟೆ ಶೇಖರಪ್ಪ.ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಪ್ರಭಾರ ಬಿಇಓ ಸುರೇಶ್ ರೆಡ್ಡಿ, ಪ್ರಾಂಶುಪಾಲ ಜಗದೀಶ್,ಉಪಪ್ರಾಂಶು ಪಾಲ ಡಿಡಿ ಹಾಲಪ್ಪ, ಪ.ಪಂ ಸದಸ್ಯರಾದ ಶಕೀಲ್ ಅಹಮ್ಮದ್, ಕಾಲೇಜು ಅಭಿವೃದ್ದಿ ಮಂಡಳಿ ಸದಸ್ಯ ಶ್ರೀನಿವಾಸ್,ಷಂಷುದ್ದೀನ್, ಉಪನ್ಯಾಸಕ ಮಂಜು ನಾಥ್ ರೆಡ್ಡಿ,ಸೇರಿದಂತೆ ಇದ್ದರು.