ಪ್ರಜಾ ನಾಯಕ ಸುದ್ದಿ ಜಗಳೂರು -: ತಾಲ್ಲೂಕಿನಲ್ಲಿ ಮಳೆ ಕೊರೆತೆ ಯಿಂದ ತತ್ತರಿಸಿದ ಅನ್ನದಾತ ತಾಲೂಕಿನಲ್ಲಿ 90% ಬೆಳೆ ಹಾನಿ ಬರ ಸಮೀಕ್ಷೆ ಮಳೆ ಕೊರತೆ ಯಿಂದ ಅನ್ನದಾತ ನಲುಗಿದ್ದು,ಶಾಶ್ವತ ಬರದ ನಾಡು ಜಗಳೂರು ತಾಲೂಕನ್ನು ತೀವ್ರ ಬರ ಪ್ರದೇಶ ಪಟ್ಟಿಗೆ ಸೇರಿಸಲು ಜಿಲ್ಲಾ ಉಸ್ತುವಾರಿ ಸಚಿವರದ ಎಸ್.ಎಸ್ ಮಲ್ಲಿಕಾರ್ಜು ನ್,ಕಂದಾಯ ಇಲಾಖೆಯ ಸಚಿವರ ಗಮನಕ್ಕೆ ತಂದು ತೀವ್ರ ಬರ ಪ್ರದೇಶ ಮೊದಲನೇ ಪಟ್ಟಿಗೆ ಸೇರಿಸಲಾಗುವುದು ಶಾಸಕ ಬಿ. ದೇವೇಂದ್ರಪ್ಪ ಭರವಸೆ ನೀಡಿದರು.
ಜಗಳೂರು ತಾಲೂಕನ್ನು ಮಧ್ಯಮ ಬರಪೀಡಿತ ಪಟ್ಟಿಗೆ ಸೇರಿಸಿದ ಹಿನ್ನಲೆ ಭಾನುವಾರ ಕಸಬಾ ಹೋಬಳಿಯ ಜಗಳೂರು ಗೊಲ್ಲರಟ್ಟಿ. ಭರಮಸಮುದ್ರ. ಮುಸ್ಟೂರು ಸೇರಿದಂತೆ, ಬಿಳಿಚೋಡು, ಸೊಕ್ಕೆ, ಹೋಬಳಿಗಳ ಕೆಲವು ಹಳ್ಳಿಗಳಲ್ಲಿ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ತಾಲೂಕು ಆಡಳಿತದಿಂದ ಜಂಟಿ ಸಮೀಕ್ಷೆ ಕೈಗೊಂಡಿದ್ದು, ಅಧಿಕಾರಿಗಳ ತಂಡದೊಂದಿಗೆ ಶಾಸಕ ದೇವೇಂದ್ರಪ್ಪ ಅನಾವೃಷ್ಟಿ ವಿಕ್ಷೀಸಿ ನಂತರ ಮಾತನಾಡಿದರು.
ಜಗಳೂರು ತಾಲೂಕಿನಲ್ಲಿ ಶೇಕಡ 51% ಪ್ರದೇಶ ದಲ್ಲಿ ಮೆಕ್ಕೆ ಜೋಳ,ಶೇಂಗಾ, ರಾಗಿ,ಸೂರ್ಯಕಾಂತಿ, ತೊಗರಿ ಹೀಗೆ ವಿವಿಧ ರೀತಿಯಾಗಿ ಬಿತ್ತನೆ ಮಾಡಲಾಗಿದೆ ಅಲ್ಲದೆ ಆಗಸ್ಟ್ ಅಂತ್ಯಕ್ಕೆ 57 ಮಿ.ಮಿ ವಾಡಿಕೆ ಮಳೆಯಾಗಬೇಕಿತ್ತು ಆದರೆ 15.ಮಿ.ಮಿ ಮಳೆ ಯಾಗಿ 70% ಮಳೆ ಕೊರತೆಯಿಂದ ಪ್ರಮುಖ ಬೆಳೆಗಳಾದ ಮೆಕ್ಕೆ ಜೋಳ, ಶೇಂಗಾ, ಸೂರ್ಯಕಾಂತಿ, ಬೆಳೆಗಳ ಲ್ಲದೆ ವಿವಿಧ ಬೆಳೆ ಗಳು ಸಂಪೂರ್ಣ ಬಾಡಿ ಒಣಗಿದ್ದು, ನಮ್ಮ ರೈತರು ಹಾಕಿದ ಬಂಡ ವಾಳ ಕಾಣದೆ ಸಾಲವನ್ನು ಹೊತ್ತಕೊಳ್ಳು ವ ಪರಿಸ್ಥಿತಿ ಬಂದೊದಗಿ ದ್ದು ಮಳೆ ಇಲ್ಲದೆ ಆಕಾಶದತ್ತ ಮುಗಿಲು ನೋಡಿ ರೈತರು ವಿಚಲಿತ ರಾಗಿದ್ದಾರೆ.
ಕೃಷಿ.ತೋಟಗಾರಿಕೆ ಮತ್ತು ತಾಲೂಕ ಆಡಳಿತದ ಅಧಿಕಾರಿಗಳು ಇಲ್ಲಿನ ನೈಜ್ಯ ಪರಿಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ತಾಲೂಕಿನ ವಾಸ್ತವ ಪರಿಸ್ಥಿತಿಯನ್ನು ರವಾನಿಸಿ ಎಂದು ಸೂಚಿಸಿದರಲ್ಲದೆ ರೈತ ರಿಗೆ ಅನುಕೂಲವಾಗುವಂತೆ ತೀವ್ರ ಬರ ಪ್ರದೇಶವೆಂದು ಘೋಷಿಸ ಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಕಂದಾಯ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ಜಗಳೂರು ತಾಲೂಕಿನಲ್ಲಿ ಯಾವುದೇ ನದಿ ಜಲ ಮೂಲ ವಿಲ್ಲ ಆದ ರೂ ಈ ಹಿಂದೆ ಅಧಿಕಾರಿಗಳು ಸರ್ವೆ ರಿಪೋರ್ಟ್ ಎಡವಟ್ಟೊ ಮಾಡಿ ದ್ದರೊ ಗೊತ್ತಿಲ್ಲ ನದಿ ಮೂಲವಿರುವ ಪಕ್ಕದ ಹೊನ್ನಾಳಿಯ ನ್ನು ತೀವ್ರ ಬರ ಪ್ರದೇಶ ಎಂದು ಸೇರಿಸಲಾಗಿದೆ ಆದರೆ ನಂಜುಂಡ ಪ್ಪ ವರದಿ ಪ್ರಕಾರ ಶಾಶ್ವತ ಬರ ಪ್ರದೇಶವಾದ ಜಗಳೂರು ದಾವಣ ಗೆರೆ ಜಿಲ್ಲೆಯಲ್ಲಿ ಪ್ರತಿ ಭಾರಿಯು ಬರ ಎದರಿಸುತ್ತದೆ ಆದರೂ ಮಧ್ಯ ಮ ಬರ ಪ್ರದೇಶದ ಪಟ್ಟಿಗೆ ಸೇರಿಸಿರುವುದು ಅಘಾತ ಉಂಟು ಮಾಡಿ ದೆ ಈ ಕುರಿತು ಪರಿಶೀಲಿಸಲು ಉನ್ನತ ಮಟ್ಟದ ಅಧಿಕಾರಿ ಗಳು ಹಾಗೂ ಜಿಲ್ಲಾ ಉಸ್ತುವಾರಿ. ಕಂದಾಯ ಸಚಿವರ ಹಾಗೂ ಮುಖ್ಯಮಂತ್ರಿ. ಉಪಮುಖ್ಯಮಂತ್ರಿ ಇವರ ಗಮನಕ್ಕೆ ತರಲಾಗುವು ದು ಎಂದು ಹೇಳಿದರು.
” 70% ಮಳೆ ಕೊರತೆಯಿಂದ 90% ಬೆಳೆ ಹಾನಿ:- ಜಗಳೂರು ತಾಲೂಕಿನಲ್ಲಿ 51 ಸಾವಿರ ಹೆಕ್ಟೇರ್ ನಲ್ಲಿ ಬಿತ್ತನೆಯಾಗಿದ್ದು, 70% ಮಳೆ ಕೊರತೆಯಿಂದ ಪ್ರಮುಖ ಬೆಳೆಗಳಾದ ಮೆಕ್ಕೆ ಜೋಳ, ಸೂರ್ಯ ಕಾಂತಿ, ಶೇಂಗಾ, ತೊಗರಿ, ರಾಗಿ ಹೀಗೆ 90% ಬೆಳೆ ಹಾನಿಯಾಗಿದೆ”
ನಂತರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮವತ್ ಮಾತನಾಡಿ,ರಾಜ್ಯದಲ್ಲಿ 113 ತಾಲೂಕು ಗಳನ್ನು ಬರ ಪೀಡಿತ ತಾಲೂಕು ಗಳಾಗಿ ಘೋಷಣೆ ಮಾಡಲಾಗಿದ್ದು, ಜಗಳೂರು ಸಹ ಪಟ್ಟಿಯಲ್ಲಿ ಇರುವುದ್ದರಿಂದ ತಾಲೂಕಿನಲ್ಲಿ 19 ಗ್ರಾಮಗಳ ಹೊಲ ಗಳಿಗೆ ತೆರಳಿ ಬೆಳೆ ಸಮೀಕ್ಷೆ ಮಾಡಿ ಜಿಲ್ಲಾಧಿಕಾರಿ ಗಳಿಗೆ ಮತ್ತು ಸಂಬಂಧಪಟ್ಟ ಮೇಲಾಧಿ ಕಾರಿಗಳಿಗೆ ವರದಿ ತಯಾರಿಸಿ ಕಳುಹಿಸ ಬೇಕಿದೆ ಆದ್ದರಿಂದ ತೋಟಗಾರಿಗೆ ಇಲಾಖೆ.ಕೃಷಿ ಇಲಾಖೆ ತಾಲೂ ಕು ಆಡಳಿತ ಜಂಟಿ ಸರ್ವೆ ಮಾಡಲಾಗುತ್ತಿದ್ದು, ನೈಜ್ಯ ಪರಿ ಸ್ಥಿತಿ ಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಅಲ್ಲದೆ ರೈತರಿ ಗೆ ಎನ್.ಡಿ.ಆರ್.ಎಫ್ ನಿರ್ದೇಶನದಂತೆ ಪರಿಹಾರವನ್ನು ಒದಗಿಸ ಲಾಗು ತ್ತದೆ ಅಲ್ಲದೆ ಬೆಳೆ ವಿಮೆ ಮಾಡಿಸಿದವರಿಗೆ ಇನ್ಸ್ಯೂ ರೇನ್ಸ್ ಕಂಪನಿಯಿಂದ 25% ಮಧ್ಯಾಂತರ ಪರಿಹಾರ ವನ್ನು ನೀಡಲು ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತೋಟದಯ್ಯ,ಆರ್.ಐ ಧನಂಜಯ್, ಕೀರ್ತಿ. ಕೃಷಿ ಇಲಾಖೆ ಎ.ಡಿ. ಎ ಜೀವಿತಾ, ಪ್ರಸನ್ನ ಕುಮಾರ್, ವೆಂಕಟೇಶ್ ನಾಯ್ಕ್, ಶಾಸಕರ ಆಪ್ತ ಸಹಾಯಕರಾದ ಶಿವಕುಮಾರ್. ಪಲ್ಲಾಗಟ್ಟೆ ಶೇಖರಪ್ಪ. ಕಾಂಗ್ರೆಸ್ ಮುಖಂಡರಾದ ಸುಧೀರ್ ರೆಡ್ಡಿ.ಅನುಪ್ ರೆಡ್ಡಿ. ಜಗ ಳೂರು ಗೊಲ್ಲರಟ್ಟಿ ರಮೇಶ್.ಪ್ರಕಾಶ್ ರೆಡ್ಡಿ.ಹರೀಶ್ ಸೇರಿದಂತೆ ಅನೇಕರಿದ್ದರು.