ಪ್ರಜಾ ನಾಯಕ ಸುದ್ದಿ ಜಗಳೂರು :- ಇತ್ತೀಚಿನ ವರ್ಷಗಳಲ್ಲಿ ಗ್ರಾಮೀ ಣ ಪ್ರದೇಶದಲ್ಲೂ ಖಾಸಗಿ ಶಾಲೆಗಳ ಭರಾಟೆಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆತಂಕಕಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಸರ್ಕಾರದ ಅನುದಾನದ ಕೊರತೆ ಯಿಂದ ಮೂಲ ಸೌಕರ್ಯಗಳಿಲ್ಲದೆ ಹಳ್ಳಿಗಾಡಿನ ಸರ್ಕಾರಿ ಶಾಲೆ ಗಳು ಸೊರಗಿರುವ ಸಂದರ್ಭದಲ್ಲಿ ಶಿಕ್ಷಕರೊಬ್ಬರು ತಮ್ಮ ಪ್ರಾಮಾ ಣಿಕ ಪ್ರಯತ್ನದಿಂದ ಕಾರ್ಪೋರೇಟ್ ಕಂಪನಿಗಳ ಲಕ್ಷಗಟ್ಟಲೆ ನೆರವು ಸರ್ಕಾರಿ ಶಾಲೆಗಳತ್ತ ಹರಿದು ಬರಲು ಕಾರಣರಾಗಿದ್ದಾರೆ.
ಯಾವುದೇ ಪ್ರಚಾರವಿಲ್ಲದೆ ಶಾಲೆಯಲ್ಲಿ ಕೇವಲ ಪಾಠ ಪ್ರವಚನ ಗಳಿಗೆ ಸೀಮಿತವಾಗದೆ ಸರ್ಕಾರಿ ಶಾಲೆಗಳ ಬಗೆಗಿನ ಕಾಳಜಿ ಹಾಗೂ ವೈಯಕ್ತಿಕ ಆಸಕ್ತಿಯಿಂದ ಆಸುಪಾಸಿನ ಐದು ಹಳ್ಳಿಗಳ ಸರ್ಕಾರಿ ಶಾಲೆಗಳ ಚಿತ್ರಣವೇ ಬದಲಾಗಲು ಶ್ರಮಿಸಿದ ಜಗಳೂರು ತಾಲ್ಲೂಕಿ ನ ಬಸವನಕೋಟೆ ಗ್ರಾಮದ ವಿಜ್ಞಾನ ಶಿಕ್ಷಕ ಬಿ.ಕೆ. ಸತೀಶ್ ಅವರ ಅಪರೂಪದ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ “ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
20-25 ವರ್ಷದಿಂದ ಸುಣ್ಣ ಬಣ್ಣ ಕಾಣದೆ ಪಾಳು ಕಟ್ಟಡಗಳಾ ಗಿದ್ದ ತಾಲ್ಲೂಕಿನ ಗಡಿ ಗ್ರಾಮಗಳಾದ ಬಸವನಕೋಟೆ, ಉದ್ದ ಬೋರನಳ್ಳಿ, ಜಾಡನಕಟ್ಟೆ, ಉಜ್ಜಪ್ಪೊಡೆಯರಹಳ್ಳಿ, ಅಗಸನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆಗಳು ಇಂದು ಚಿತ್ತಾಕರ್ಷಕ ಬಣ್ಣಗಳು, ಚಿತ್ರಗಳಿಂದ ಅಲಂಕೃತವಾಗಿ ಸುಂದರವಾಗಿ ನಳನಳಿ ಸುತ್ತಿದೆ. ಕಸಕಡ್ಡಿ ಧೂಳು ತುಂಬಿದ್ದ ಕೊಠಡಿಗಳಲ್ಲಿ ವಿಜ್ಞಾನದ ಲ್ಯಾಬ್ ಗಳು ತಲೆ ಎತ್ತಿವೆ. ಸುಸಜ್ಜಿತ ಗ್ರಂಥಾಲಯ ಸ್ಥಾಪನೆ, ದುಬಾ ರಿ ಬೆಲೆಯ ಶುದ್ಧ ನೀರಿನ ಘಟಕಗಳು, ಗ್ರೀನ್ ಬೋರ್ಡ್ ಗಳು , ಪ್ರೊಜೆಕ್ಟರ್ ಗಳು, ಎಲ್ಲಾ ಕೊಠಡಿಗಳಿಗೆ ವಿದ್ಯುತ್ ಸಂಪರ್ಕ, ಫ್ಯಾನ್ ಅಳವಡಿಕೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಕ್ , ನೋಟ್ ಪುಸ್ತಕ ಸೇರಿದಂತೆ ಸವಲತ್ತುಗಳ ಮಹಾಪೂರವೇ ಕು ಗ್ರಾಮದ ಸರ್ಕಾರಿ ಶಾಲೆಗಳತ್ತ ಹರಿದು ಬರುವಲ್ಲಿ ಶಿಕ್ಷಕ ಸತೀಶ್ ಶ್ರಮ ಸಾಕಷ್ಟಿದೆ.
ತಾವು ಕಾರ್ಯನಿರ್ವಹಿಸುತ್ತಿರುವ ಬಸವನಕೋಟೆ ಮತ್ತು ಅಕ್ಕ ಪಕ್ಕದ ಸರ್ಕಾರಿ ಶಾಲೆಗಳ ಹೆಸರಿನಲ್ಲಿ ಫೇಸ್ ಬುಕ್ ನಲ್ಲಿ ಖಾತೆಗಳ ನ್ನು ತೆರೆದು ಶಾಲೆಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.ತಮ್ಮ ಬಿಡುವಿನ ವೇಳೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ‘ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ’ ಶಿರೋನಾಮೆಯಡಿ ಗ್ರಾಮೀಣ ಭಾಗ ದ ಶಾಲೆಗಳಲ್ಲಿ ಮೂಸೌಕರ್ಯಗಳ ಕೊರತೆಯ ಬಗ್ಗೆ ಕಾರ್ಪೋರೇಟ್ ವಲಯದ ದೇಣಿಗೆದಾರ ಕಂಪನಿಗಳಿಗೆ ಟ್ಯಾಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇದರಿಂದಾಗಿ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿ.ಎಸ್.ಆರ್) ತಾಲ್ಲೂಕಿ ನ ಸರ್ಕಾರಿ ಶಾಲೆಗಳಿಗೆ ಹರಿದು ಬರಲು ಕಾರಣವಾಗಿದೆ. ದಶಕಗಳಿಂದ ಧೂಳಿನಲ್ಲಿ ಮಿಂದುಹೋಗಿದ್ದ ಶಾಲಾ ಕೊಠಡಿಗಳು, ಕಾಂಪೌಂಡ್ ಗೋಡೆಗಳು ಇಂದು ಬಗೆಬಗೆಯ ಚಿತ್ರಗಳಿಂದ ಕಂಗೊಳಿಸುತ್ತಿವೆ.
“20 ವರ್ಷದಿಂದ ನಮ್ಮ ಶಾಲೆಯ ಗೋಡೆಗಳಿಗೆ ಸುಣ್ಣಬಣ್ಣವಾಗಿ ರಲಿಲ್ಲ. ತರಗತಿಗಳಲ್ಲಿ ಮೂಲಸೌಕರ್ಯಗಳ ಸಮಸ್ಯೆ ಇತ್ತು. ಇದನ್ನು ಗಮನಿಸಿದ ನಾನು ಸಾಮಾಜಿಕ ಜಾಲತಾಣದಲ್ಲಿ ಶಾಲೆ ಹೆಸರಿನಲ್ಲಿ ಖಾತೆ ತೆರೆದು ದೊಡ್ಡ ಕಂಪನಿಗಳ ಗಮನ ಸೆಳೆದಿದ್ದು, ಸಿ.ಎಸ್.ಆರ್. ಅನುದಾನ ಹರಿದು ಬಂದಿದೆ. ನಮ್ಮ ಅಕ್ಕಪಕ್ಕದ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಸೇರಿಸಿದ್ದೆ. ಇದರಿಂದ ಶಾಲೆಗಳ ಲ್ಲಿ ಸಾಕಷ್ಟು ಸುಧಾರಣೆಯಾಗಿದೆ.ಮಕ್ಕಳ ಹಾಜರಾತಿಯ್ಲಲೂ ಗಣ ನೀಯ ಹೆಚ್ಚಳ ಸಾಧ್ಯವಾಗಿದೆ. ನನ್ನ ಅಲ್ಪ ಸೇವೆಯನ್ನು ಗುರತಿಸಿ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ.’ ಎನ್ನುತ್ತಾರೆ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಕೆ.ಸತೀಶ್.
“ನಾನು ಶಿಕ್ಷಣವನ್ನು ಪ್ರೀತಿಸುವವನು ಅದರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಅನೇಕ ಮಾನದಂಡಗಳನ್ನು ಇಟ್ಟುಕೊಂಡು ಇಂತಹ ಉತ್ತಮ ಶಿಕ್ಷಕನನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರು ವುದು ನನಗೆ ಹೆಮ್ಮೆಯ ಸಂಗತಿ ಈ ಶಿಕ್ಷಕನನ್ನು ವರ್ಣಿಸಲು ಪದಗಳೇ ಇಲ್ಲ ಹಾಗಾಗಿ ಈ ಶಿಕ್ಷಕನನ್ನು ನೋಡಿ ಬೇರೆ ಶಿಕ್ಷಕರು ಇಂತಹ ಅನೇಕ ಪ್ರಶಸ್ತಿಗೆ ಭಾಜನರಾಗಬೇಕು ಎಂದು ಅಭಿನಂದನೆ ಸಲ್ಲಿಸುತ್ತೇನೆ”