ಪ್ರಜಾ ನಾಯಕ ಸುದ್ದಿ ಜಗಳೂರು :- ನಿರುದ್ಯೋಗಿ ಪದವೀಧರ ಯವಕರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಡಿಜಿಟಲ್ ಗ್ರಂಥಾಲಯ ಸಹಕಾರಿಯಾಗಲಿದ್ದು.ನಿರ್ವಹಣೆಗೆ ವೈಯಕ್ತಿಕ ಗೌರವಧನ ಭರಿಸಿ ಸಂಪನ್ಮೂಲ ವ್ಯಕ್ತಿಯನ್ನು ನಿಯೋಜಿಸುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು
ಪಟ್ಟಣದ ಜನಸಂಪರ್ಕ ಕೇಂದ್ರದಲ್ಲಿ ನೂತನ ಶಾಖಾ ಗ್ರಂಥಾಲ ಯ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ನನ್ನ ಆಡಳಿತಾವಧಿಯಲ್ಲಿ ಶಿಕ್ಷಣ,ಆರೋಗ್ಯಕ್ಕೆ ಒತ್ತು ನೀಡುವೆ.ಪಟ್ಟಣದ ಹೃದಯ ಭಾಗದಲ್ಲಿರುವ ಸುಸಜ್ಜಿತ ಗ್ರಂಥಾಲ ಯ ನಿವೃತ್ತ ನೌಕರರು ಸಮಯ ಕಳೆಯಲು ವರದಾನವಾಗಲಿದೆ. ಯಾರೊಬ್ಬರೂ ಒತ್ತಡಗಳಿಂದ ಗತಿಗೆಟ್ಟರೂ ಮತಿಗೆಡಬಾರದು ಎಂಬುದು ನನ್ನ ಆಶಯ ಎಂದರು.
ಪಟ್ಟಣದಲ್ಲಿನ ಅನಾಥ,ಬಡ,ವರ್ಗದವರ ಶವ ಸಂಸ್ಕಾರಕ್ಕಾಗಿ ಒಂದು ಮುಕ್ತಿವಾಹನ,ಹಾಗೂ ಅಪಘಾತಕ್ಕೀಡಾದ ಬಡ ಅನಾಥ ದೇಹಗಳನ್ನು ಆಸ್ಪತ್ರೆಗೆ ಸಾಗಿಸಲು ಒಂದು ತುರ್ತು ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ವಿದ್ಯೆಯಿಂದ ವಿನಯ,ಸಂಪತ್ತು ಸರ್ವಸ್ವವನ್ನೂ ಗಳಿಸಬಹುದು. ಕಷ್ಟ ಕಾಲದಲ್ಲಿ ಮನುಷ್ಯನಿಗೆ ಪುಸ್ತಕಗಳು ಪೋಷಿಸುತ್ತವೆ ಎಂದು ತಿಳಿಸಿದರು.
ಕೇಂದ್ರ ಗ್ರಂಥಾಲಯ ಇಲಾಖೆ ನಿರ್ದೇಶಕ ಎಸ್.ಸತೀಶ್ ಕುಮಾ ರ್ ಮಾತನಾಡಿ,ಗ್ರಂಥಾಲಯ ಜನಕ ಡಾ.ಎಸ್.ಆರ್.ರಂಗನಾಥ್ ಅವರ ಜಯಂತಿದಿನವನ್ನು ರಾಜ್ಯದಲ್ಲಿ ಗ್ರಂಥಪಾಲಕರ ದಿನಾಚರ ಣೆಯನ್ನಗಿ ಆಚರಿಸಲಾಗುತ್ತಿದೆ.ಪುಸ್ತಕಗಳನ್ನು ಓದುವ ಹವ್ಯಾಸ ವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳ ಬೇಕು.ಗ್ರಂಥಾಲ ಯದ ಬಗ್ಗೆ ಶಾಸಕರು ಹೊಂದಿದ ಕಾಳಜಿ ಶ್ಲಾಘನೀಯ.ರಾಜ್ಯದಲ್ಲಿ ಕೋವಿಡ್ ಸಂದರ್ಭದಲ್ಲಿ ಡಿಜಿಟಲ್ ಗ್ರಂಥಾಲಯದ ಮೂಲಕ ಓದುಗರ ಮನೆಬಾಗಿಲಿಗೆ ಪುಸ್ತಕ ತಲುಪಿಸಲಾಗಿತ್ತು.
ರಾಜ್ಯದಲ್ಲಿ 7000 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಜಗಳೂರು ತಾಲೂಕಿನಲ್ಲಿ 40000 ಜನ ಆನ್ ಲೈನ್ ನಲ್ಲಿ ನೊಂದಣಿಯಾಗಿದ್ದಾರೆ ಎಂದು ಪ್ರಶಂಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲ ಯ್ಯ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷುದ್ದೀನ್,ಸಿಪಿಐ ಶ್ರೀನಿವಾಸ್,ಸಭಾಪತಿ ನಿಕಟಪೂರ್ವ ಆಪ್ತ ಸಹಾಯಕ ತಿಪ್ಪೇಸ್ವಾಮಿ,ಪ ಪಂ ಸದಸ್ಯ ರಾದ ರಮೇಶ್ ರೆಡ್ಡಿ,ಶಕೀಲ್ ಅಹಮ್ಮದ್,ಲುಕ್ಮಾನ್ಖಾ ನ್,ರವಿಕುಮಾರ್. ಹಿರಿಯ ಸಾಹಿತಿಗಳಾದ ಎನ್.ಟಿ ಎರಿಸ್ವಾಮಿ ಮುಖಂಡರಾದ ಸಿ ತಿಪ್ಪೇಸ್ವಾಮಿ. ಪಲ್ಲಾ ಗಟ್ಟೆ ಶೇಖರಪ್ಪ. ಮಹ ಮ್ಮದ್ ಗೌಸ್. ಗ್ರಂಥ ಪಾಲಕ ಶರಣ ಪ್ಪ,ಪ.ಪಂ ಮುಖ್ಯಾ ಧಿಕಾರಿ ಲೊಕ್ಯಾ ನಾಯ್ಕ, ಸರಕಾರಿ ನೌಕರರ ಸಂಘದ ಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಜಾತಮ್ಮ. ಕಾರ್ಯದರ್ಶಿ ಗೀತಾ ಮಂಜು.ಮಾರಪ್ಪ ಸಂಘಟನಾ ಕಾರ್ಯದರ್ಶಿ ಕಲ್ಲೇ ದೇವರಪುರ ಕೃಷ್ಣಮೂರ್ತಿ. ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಭಾಗವಹಿಸಿ ದ್ದರು.