ಪ್ರಜಾ ನಾಯಕ ಸುದ್ದಿ ಜಗಳೂರು -: ಪೊಲೀಸ್ ಇಲಾಖೆ ವತಿ ಯಿಂದ “ತೆರೆದ ಮನೆ ” ಎಂಬ ಕಾರ್ಯಕ್ರಮವನ್ನು ರಸ್ತೆ ಮಾಚಿ ಕೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್ ಮಾತನಾಡಿ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಪ್ರತಿ ತಿಂಗಳ ಗುರುವಾರ ಈ ಕಾರ್ಯಕ್ರಮವನ್ನು ಶಾಲೆ ನಮ್ಮ ಪೊಲೀಸ್ ಠಾಣೆ ಯಲ್ಲಿ ಮಾಡ ಲಾಗುತ್ತದೆ ಶಾಲಾ ಮಕ್ಕಳಲ್ಲಿರುವ ಆತಂಕ ವನ್ನು ದೂರ ಮಾಡುವ ಉದ್ದೇಶ ಇಟ್ಟುಕೊಂಡು ಸಿನಿಮಾ ಮತ್ತು ಟಿವಿಗಳಲ್ಲಿ ತೋರಿಸುವ ಪೊಲೀಸರಿಗೆ ಮತ್ತು ಹೊರ ಗಡೆ ನೆಡೆಯುವ ಬಗ್ಗೆ ಬಹಳ ವ್ಯತ್ಯಾಸ ವಿದೆ ಈ ಕಾರ್ಯಕ್ರಮ ದಿಂದ ವಿದ್ಯಾರ್ಥಿ ಮತ್ತು ಜನರಲ್ಲಿ ದೇಶಭಕ್ತಿ ಮೂಡಿಸಲಾಗುತ್ತಿ ದೆ ನಮ್ಮ ದೇಶದ ಯೋಧರು ಮತ್ತು ಸೇನೆಗಳು ನಮ್ಮ ಸಾರ್ವಜನಿಕರಿಗೆ ಎಷ್ಟು ಸೇವೆ ಮಾಡುತ್ತಿದೆ ಎಂದು ಮಕ್ಕಳ ಲ್ಲಿ ಅರಿವು ಮೂಡಿಸಲಾಗುತ್ತದೆ
ಶಾಲಾ ಮಕ್ಕಳಲ್ಲಿ ಪೊಲೀಸ್ ಎಂದರೆ ಒಂದು ಭಯವಿರುತ್ತದೆ ಅದನ್ನು ದೂರ ಮಾಡಿ ನಮ್ಮ ಪೊಲೀಸ್ ಠಾಣೆಯಲ್ಲಿ ಎಲ್ಲಾ ಕಚೇರಿಗಳಲ್ಲಿ ಹೇಗೆ ದಿನನಿತ್ಯ ಕೆಲಸ ನಡೆಯುತ್ತದೆ ಅದೇ ರೀತಿ ನಮ್ಮ ಠಾಣೆಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಮಕ್ಕಳಿಗೆ ತೋರಿಸುವ ಸಲುವಾಗಿ ಪೊಲೀಸ್ ಠಾಣೆಯು ಕೂಡ ಒಂದು ಸರ್ಕಾರಿ ಕಚೇರಿ ಎಂದು ತೋರಿಸುವ ಸಲುವಾಗಿ ಈ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
“ಪೊಲೀಸರಿಗೆ ತಪ್ಪು ಮಾಡಿದವರು ಹೆದರಬೇಕು ವಿನಹ ತಪ್ಪು ಮಾಡದೆ ಇರುವವರು ಎದುರುವ ಅವಶ್ಯಕತೆ ಇಲ್ಲ ನಮ್ಮ ಪೊಲೀಸ್ ಠಾಣೆಯಲ್ಲಿ ಬಂದೂಕುಗಳು.ವಾಕಿ ಟಾಕಿ ಸೇರಿದಂತೆ ಕೆಲವೊಂದು ವಸ್ತುಗಳನ್ನು ಮಕ್ಕಳಿಗೆ ಪ್ರತಿ ತಿಂಗಳ ಗುರುವಾರ ತೋರಿಸಲಾಗುವುದು”
ಶ್ರೀನಿವಾಸ್ ರಾವ್ ಪೋಲಿಸ್ ಇನ್ಸ್ಪೆಕ್ಟರ್ ಜಗಳೂರು
ಈ ಸಂದರ್ಭದಲ್ಲಿ ಶಾಲೆ ಶಿಕ್ಷಕರಾದ ಅಬ್ದುಲ್ ರಜಾಕ್. ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ನಾಗಭೂಷಣ್. ಮಾರುತಿ. ಗಿರೀಶ್. ಸೇರಿದಂತೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು