ಪ್ರಜಾ ನಾಯಕ ಸುದ್ದಿ ಜಗಳೂರು :- ಕೇಂದ್ರ ಸರ್ಕಾರದ ಬರ ಅಧ್ಯ ಯನ ತಂಡ ಅಕ್ಟೋಬರ್ 7 ಶನಿವಾರ ರಂದು ಜಗಳೂರು ತಾಲ್ಲೂ ಕಿನಲ್ಲಿ ಬರ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಲಿದ್ದು, ತಾಲ್ಲೂಕಿನ ಮಳೆ, ಬೆಳೆಯ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಲಿದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳನ್ನೊಳಗೊಂಡ ಮೂರು ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ಕೇಂದ್ರ ಜಲ ಆಯೋಗದ ನಿರ್ದೇಶಕ ವಿ. ಆಶೋಕ್ ಕುಮಾರ್ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧೀ ನ ಕಾರ್ಯದರ್ಶಿ ಸಂಗೀತ ಕುಮಾರ್.ಎಂ,ಎನ್,ಸಿ.ಎಫ್.ಸಿ ಉಪ ನಿರ್ದೇಶಕ ಕರಣ್ ಚೌದರಿ ಹಾಗೂ ರಾಜ್ಯ ಸರ್ಕಾರದ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ಮುಖ್ಯಸ್ಥರು ಹಾಗೂ ತಾಲ್ಲೂಕಿನವ ರೇ ಆದ ಡಾ. ಜಿ.ಎಸ್ ಶ್ರೀನಿವಾಸರೆಡ್ಡಿ ಅವರನ್ನೊಳಗೊಂಡ ಅಧಿ ಕಾರಿಗಳ ತಂಡ ತಾಲ್ಲೂಕಿನ ವಿವಿಧೆಡೆ ಬರದ ಸ್ಥಿತಿಗತಿಯನ್ನು ಪರಿಶೀಲಿಸಲಿದೆ.
ಚಿತ್ರದುರ್ಗದಿಂದ ರಾಷ್ಟ್ರೀಯ ಹೆದ್ದಾರಿ-50 ಮೂಲಕ ತಾಲ್ಲೂಕಿನ ದೊಣೆಹಳ್ಳಿ ಮಾರ್ಗವಾಗಿ ಜಗಳೂರು ಪಟ್ಟಣಕ್ಕೆ ಆಗಮಿಸುವ ತಂಡ ಇಲ್ಲಿನ ಪ್ರವಾಸಿಮಂದಿರದಲ್ಲಿ ಬೋಜನ ಸೇವಿಸಲಿದ್ದಾರೆ. ಈ ಸಮಯದಲ್ಲಿ ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಾಲ್ಲೂಕಿನ ಮಳೆ, ಬೆಳೆಯ ಬಗ್ಗೆ ವಿವರವಾದ ಪವ ರ್ ಪಾಯಿಂಟ್ ಪ್ರಾತ್ಯಕ್ಷಿಕೆಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ಪ್ರಸ್ತುಪಡಿಸಲಿದ್ದಾರೆ.
ನಂತರ ದೊಣೆಹಳ್ಳಿ, ಭರಮಸಮುದ್ರ, ತಾಯಿಟೊಣೆ, ಹಿರೇಮಲ್ಲ ನಹೊಳೆ,ಸಿದ್ದಿಹಳ್ಳಿ, ಮುಸ್ಟೂರು ಮುಂತಾದ ಹಳ್ಳಿಗಳು ಹಾಗೂ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಪರಿಶೀಲನೆ ನಂತರ ದೊಣೆಹಳ್ಳಿಯಿಂದ ಹೆದ್ದಾರಿ ಮಾರ್ಗವಾಗಿ ನೇರವಾಗಿ ಚಿತ್ರದುರ್ಗದ ಮೂಲಕ ಬೆಂಗಳೂರಿಗೆ ಕೇಂದ್ರ ಸರ್ಕಾರ ದ ಅಧಿಕಾರಿಗಳ ತಂಡ ತೆರಳಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು, ತಹಶೀಲ್ದಾರ್ ಅರುಣ ಕಾರಗಿ,ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್, ತೋಟ ಗಾರಿಕೆ ಸಹಾಯಕ ನಿರ್ದೇಶಕ ತೋಟಯ್ಯ ಅವರು ತಂಡದೊಂದಿ ಗೆ ಭಾಗವಹಿಸಲಿದ್ದಾರೆ.
ಕೇಂದ್ರ ಬರ ಅಧ್ಯಯನ ತಂಡ ಆಗಮುಸತ್ತಿರುವ ಕಾರಣ ಶಾಸಕ ಬಿ. ದೇವೇಂದ್ರಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರು ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಗಳೂರು ತಾಲ್ಲೂಕಿಗೆ ಬರ ಅಧ್ಯನ ತಂಡ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಬಿ. ದೇವೇಂದ್ರಪ್ಪ ಮತ್ತು ಜಿಲ್ಲಾಧಿಕಾರಿ ಎಂ. ವಿ. ವೆಂಕಟೇಶ್ , ತಹಶೀಲ್ದಾರ್ ಅರುಣ ಕಾರಗಿ, ಎಡಿಎ ಮಿಥು ನ್ ಕಿಮಾವತ್, ಎಡಿಎಚ್ ತೋಟಯ್ಯ ವಿವಿಧೆಡೆ ಭೇಟಿ ನೀಡಿ ಬೆಳೆಗಳ ಬಗ್ಗೆ ಪರಿಶೀಲಿಸಿದರು