ಪ್ರಜಾ ನಾಯಕ ಸುದ್ದಿ ಜಗಳೂರು :- ನಾಡ ದೊರೆ ರಾಜ ವೀರ ಮದಕರಿನಾಯಕ ಜಯಂತಿಯನ್ನು ಕಡ್ಡಾಯ ಆಚರಣೆಗೆ ಸರಕಾರ ಆದೇಶಿಸಬೇಕು ಎಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ವಕೀಲ ಬಸವರಾಜ್ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜವೀರ ಮದಕರಿ ನಾಯಕ ಯುವವೇದಿಕೆ ಹಾಗೂ ಕರ್ನಾಟಕ ಎಸ್ ಸಿ ಎಸ್ ಟಿ ಪತ್ರಿಕಾ ವರ ದಿಗಾರರ ಸಂಘ ,ನಾಯಕ ಸಮಾಜದ ನೇತೃತ್ವದಲ್ಲಿ ಹಮ್ಮಿಕೊಂಡಿ ದ್ದ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಸುಮಾರು ಮೂರು ಶತಮಾನಗಳ ಹಿಂದೆ ಚಿತ್ರದುರ್ಗದ ಕಲ್ಲಿನ ಕೋಟೆ,ಕೊತ್ತಲುಗಳನ್ನು ನಿರ್ಮಿಸಿ ಸಮರ್ಥ ಆಡಳಿತ ನೀಡಿದಂತ ಹ ರಾಜವೀರ ಮದಕರಿನಾಯಕನ ಸ್ಮಾರಕಗಳು ಇಂದಿಗೂ ಐತಿ ಹಾಸಿಕ ಸ್ಥಳ ವಾಗಿವೆ.ಸಂವಿಧಾನ ರಚನೆಯ ಪೂರ್ವದಲ್ಲಿ ಸಾಮ್ರಾ ಜ್ಯ ವಿಸ್ತರಣೆಗಾಗಿ ಯುದ್ದ,ಸಾವು,ನೋವುಗಳು ಸಂಭವಿಸುತ್ತಿದ್ದವು ಆದರೆ ಅದನ್ನೇ ವೈಭವೀಕರಿಸಿ ತಳಸಮುದಾಯದ ರಾಜರುಗಳ ಕೊಡುಗೆಗಳನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ತಿರುಚುವ ಹು ನ್ನಾರ ನಡೆಯುತ್ತಿದೆ.ವೀರ ಮದಕರಿನಾಯಕನ ಶೌರ್ಯ ಪರಾ ಕ್ರಮಗಳು,ಆಡಳಿತ ವೈಖರಿ ಆಧುನಿಕ ಯುಗದ ಯುವ ಪೀಳಿಗೆಗೆ ಪಸರಿಸಬೇಕು ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ಸರಿ ಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾಯಕ ಸಮಾಜದ ಮುಖಂಡ ಕಾನನಕಟ್ಟೆ ಪ್ರಭು ಮಾತನಾಡಿ, ರಾಜವೀರ ಮದಕರಿನಾಯಕ ಪಾಳೆಗಾರರಲ್ಲಿ ಸುಭದ್ರ ಆಡಳಿತ ದೊಂದಿಗೆ ಎಲ್ಲಾ ವರ್ಗದ ಜನತೆಗೆ ಸಮಾನತೆ ಕಲ್ಪಿಸಿದ್ದರು.ಅಲ್ಲದೆ ಅವರ ಆಡಳಿತಾವಧಿಯಲ್ಲಿ ನ ಸಾಂಸ್ಕೃತಿಕ,ಸಾಹಿತ್ಯ,ಕಲೆಮತ್ತು ವಾಸ್ತುಶಿಲ್ಪ,ಕೆರೆಗಳ ಹಾಗೂ ಪುಷ್ಕರಣಿಗಳು ಇಂದಿಗೂ ಅವಿಸ್ಮರ ಣೀಯ ಎಂದರು.
ನಾಯಕ ಸಮಾಜದ ಮಾಜಿ ಕಾರ್ಯದರ್ಶಿ ಬಿ.ಲೊಕೇಶ್ ಮಾತ ನಾಡಿ,ರಾಜ್ಯವನ್ನಾಳಿದ ಶೋಷಿತ ಸಮಾಜಗಳಿಗೆ ಆಡಳಿತ ಸರಕಾರ ಗಳು ಸಂವಿಧಾನ ಬದ್ದ ಹಕ್ಕುಗಳನ್ನು ಸಮರ್ಪಕ ಜಾರಿಗೊಂಡು ಶೈಕ್ಷಣಿಕ,ರಾಜಕೀಯ,ಸಾಮಾಜಿಕ,ಆರ್ಥಿಕ ವಾಗಿ ಮುಖ್ಯವಾಹಿನಿಗೆ ತರಬೇಕಿದೆ.ತಾಲೂಕಿನಲ್ಲಿ ವಾಲ್ಮೀಕಿಜಯಂತಿ ಆಚರಣೆಯ ಜೊತೆ ಗೆ ವೀರಮದಕರಿನಾಯಕ ಜಯಂತಿ ಆಚರಿಸುವ ಮೂಲಕ ಜನ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಯಕ ಸಮಾಜದ ತಾಲೂಕ ಅಧ್ಯಕ್ಷ ಬಡಯ್ಯ ರಾಜ ವೀರ ಮದಕರಿನಾಯಕ ಯುವ ವೇದಿಕೆ ಗೌರವ ಅಧ್ಯಕ್ಷ ರೇವಣ್ಣ,ಅಧ್ಯಕ್ಷ ಚಿಕ್ಕಮ್ಮನಹಟ್ಟಿ ಮಂಜುನಾಥ್,ವಕೀಲರಾದ ಆರ್. ಓಬಳೇಶ್, ತಿಪ್ಪೇಸ್ವಾಮಿ,ಬಡಯ್ಯ,ಕಾಟಜ್ಜ, ಉಪಾಧ್ಯಕ್ಷ ರಾಜಪ್ಪ ವ್ಯಾಸಗೊಂಡನಹಳ್ಳಿ,ಮಾದಿಹಳ್ಳಿ ಮಂಜು ನಾಥ್, ಶ್ರೀನಿ ವಾಸ್,ರಮೇಶ್,ಗುಡ್ಡದಲಿಂಗಣ್ಣನಹಳ್ಳಿ ನಾಗರಾಜ್, ಮರೇನಹಳ್ಳಿ ಕುಮಾರ್ ತಿಮ್ಮೇಶ್ ಪ್ರವೀಣ್ ನಾಗರಾಜ,ಗೋಗುದ್ದು ತಿಪ್ಪೇ ಸ್ವಾಮಿ.ಗುತ್ತಿದುರ್ಗ ರುದ್ರೇಶ್,ಗೊಲ್ಲರಹಟ್ಟಿ ರಮೇಶ್ ,ನಾಗೇಶ್ ಸೇರಿದಂತೆ ಇದ್ದರು.