ಪ್ರಜಾ ನಾಯಕ ಸುದ್ದಿ ಜಗಳೂರು :- ಮಹಿಷಾಸುರ ದ್ರಾವಿಡ ದೊರೆ ಯಾಗಿದ್ದು.ಮನುವಾದಿಗಳು ರಾಕ್ಷಸನಿಗೆ ಹೋಲಿಕೆಮಾಡಿ ನೈಜ ಇತಿಹಾಸ ತಿರುಚಿದ್ದಾರೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಮುಖಂಡ ಕಾನನಕಟ್ಟೆ ಪ್ರಭು ಆರೋಪಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆ ನೇತೃತ್ವ ದಲ್ಲಿ ಮಹಿಷಾ ದಸರಾ ಉತ್ಸವಕ್ಕೆ ಬೆಂಬಲಿಸಿ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಸಲ್ಲಿಸಿ ಮೇಣದ ಬತ್ತಿ ಬೆಳಗಿ ಸಂಭ್ರಮಿಸಿ ನಂತರ ಪ್ರಗತಿ ಪರ ಮುಖಂಡ ಹಾಗೂ ಪ್ರಾಂಶುಪಾಲ ಎ.ಡಿ.ನಾಗಲಿಂಗಪ್ಪ ಮಾತ ನಾಡಿ
ಮನುವಾದಿಗಳಿಂದ ತಿರುಚಲ್ಪಟ್ಟ ಇತಿಹಾಸ ಅಳಿಸಿ ನೈಜ್ಯ ಇತಿ ಹಾಸವನ್ನು ಜಗತ್ತಿಗೆ ತಿಳಿಸಬೇಕಿದೆ. ದೇವರು ಧರ್ಮದ ಹೆಸರಿನಲ್ಲಿ ದಲಿತ ದಮನಿತರನ್ನು ಶೋಷಣೆ ಗೆ ಒಳಪಡಿಸಿ ವಿಕೃತಿ ಮೆರೆದ ಮತಾಂದರಿಗೆ ಹೋರಾಟದ ಮೂಲಕ ಉತ್ತರ ನೀಡುತ್ತೇವೆ.
ದಲಿತರ ನಿಜವಾದ ಗ್ರಂಥ ಸಂವಿಧಾನವಾಗಬೇಕಿದೆ.ಮಹಾ ಬೌದ್ದ ಬಿಕ್ಕು ದಕ್ಷಿಣ ರಾಜ್ಯವನ್ನು ಕಟ್ಟಿ ಆಳಿದ ದಲಿತರ ದೊರೆ ಮಹಿಷಾ ಆಡ ಳಿತ ಮಾಡಿದ ಇತಿಹಾಸ ಬುದ್ದರ ತ್ರಿಪಿಟಿಕಗಳಲ್ಲಿ ಉಲ್ಲೇಖ ವಾಗಿದೆ. ಮಹಿಷಾರ ಹೆಸರಿನಿಂದಲೇ ಮೈಸೂರು ರಾಜ್ಯ ಹೆಸರಿಸಲ್ಪ ಟ್ಟಿದ್ದೆ ಇಷ್ಟಿದ್ದರು ಮನುವಾದಿಗಳು ವೈದ್ದಿಕ ಶಾಹಿಗಳು ದಲಿತ ಎಂಬ ಕಾರಣಕ್ಕೆ ಇತಿಹಾಸ ತಿರುಚಿ ಪುರಾಣ ಅಂತೆ ಕಂತೆ ಕಟ್ಟಿದವರಿ ಗೆ ಇಂದು ಮಹಿಷಾ ಉತ್ಸವ ನಡೆದ ದೇಶಕ್ಕೆ ಬೆಳಕು ಚೆಲ್ಲಲಾಗಿದೆ ಎಂದ ರು.ಮೈಸೂರಿನ ಅಸ್ಮಿ ತೆಯ ಉಳಿವಿಗಾಗಿ ಮಹಿಷಾಸುರ ದಸರಾ ಉತ್ಸವಕ್ಕೆ ಪ್ರಗತಿಪರ ಮನಸ್ಸುಗಳು ಮುಂದಾಗಬೇಕು. ಇತಿಹಾಸವನ್ನು ತಿಳಿಯಲಾರದ ವರು ಇತಿಹಾಸ ಸೃಷ್ಠಿಸಲಾರರು ಎಂಬಂತೆ ದಲಿತ ಯುವ ಸಮೂ ಹಕ್ಕೆ ದ್ರಾವಿಡ ಸಂಸ್ಕೃತಿಯ ವಾಸ್ತ ವ ಇತಿಹಾಸ ತಿಳಿಸಬೇಕಿದೆ ಎಂದು ತಿಳಿಸಿದರು.
ನಂತರ ಮಾನವ ಬಂಧುತ್ವ ವೇದಿಕೆ ರಾಜ್ಯ ಮುಖಂಡ ಕಾನನಕಟ್ಟೆ ಪ್ರಭು ಮಾತನಾಡಿ ಐತಿಹಾಸಿಕ ದಾಖಲೆಗಳನ್ನು ಅಧ್ಯಯನಮಾಡಿ ದಾಗ ಮಹಿಷಾಸುರ ಅರಸನ ಇತಿಹಾಸದಿಂದ ಮೈಸೂರು ಎಂದು ನಾಮಕರಣವಾಯಿತು.ಮೂಲ ನಿವಾಸಿಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಭಾಗವಾಗಿದ್ದು ಮೈಸೂರು ದಸರಾಕ್ಕಿಂತ ಮಹಿಷಾ ದಸರಾ ಉತ್ಸವಕ್ಕೆ ಬೆಂಬಲಿಸಬೇಕು ಎಂದು ಕರೆ ನೀಡಿದರು.
ಪ್ರಗತಿಪರ ಹೊರಾಟಗಾರ ಹಾಗೂ ವಕೀಲ ಆರ್.ಓಬಳೇಶ್ ಮಾತ ನಾಡಿ ,ದೇಶದಲ್ಲಿ ಧರ್ಮ ದೇವರುಗಳ ಹೆಸರಿನಲ್ಲಿ ದಲಿತ ಶೋಷಿತ ಸಮುದಾಯದ ಮಹಾನೀಯರನ್ನು ಮರೆಮಾಚಿದ್ದಾರೆ. ವಿಕೃತ ಮನ ಸ್ಸುಗಳ ಮತಾಂಧತೆ ಹೋಗಲಾಡಿಸಲು ಸಂಘಟಿತ ಹೊರಾಟ ಅನಿವಾರ್ಯ.ದೇಶಕ್ಕೆ ಪವಿತ್ರವಾದ ಧರ್ಮಗ್ರಂಥ ಸಂವಿ ಧಾನವಾಗ ಬೇಕಿದೆ.ಪುರಾಣ ಕಟ್ಟು ಕಥೆಗಳ ವೈಭವೀಕರಣ ಸ್ಥಗಿತ ಗೊಂಡು ವೈ ಚಾರಿಕ,ವೈಜ್ಞಾನಿಕತೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆ ಮುಖಂಡರಾದ ಬಿ. ಲೋಕೇ ಶ್,ಉಪನ್ಯಾಸಕ ಕಾಮಗೇತನಹಳ್ಳಿ ನಿಂಗಪ್ಪ, ಚಿಕ್ಕಮ್ಮನ ಹಟ್ಟಿ ಮಂಜ ಣ್ಣ, ವ್ಯಾಸಗೊಂಡನಹಳ್ಳಿ ಎಂ.ರಾಜಪ್ಪ, ಬಿ.ಸತೀಶ್, ಮಾದಿಹಳ್ಳಿ ಮಂಜಪ್ಪ, ಧನ್ಯಕುಮಾರ್,ಕುಬೇಂದ್ರಪ್ಪ ,ಹರೀಶ್ ರೆಡ್ಡಿ, ಶಿವಲಿಂಗಪ್ಪ, ಪೂಜಾರಿ ಸಿದ್ದಪ್ಪ,ವಕೀಲ ಹನುಮಂತ ಪ್ಪ. ಶಿಕ್ಷಕರಾದ ಲೋಕೇಶ್.ತಿಪ್ಪೇಸ್ವಾಮಿ,ಲೋಕೇಶ್, ನೀಲಕಂಠಪ್ಪ ಸೇರಿದಂತೆ ಹಲವರು ಇದ್ದರು