ವಿಶೇಷ ವರದಿ
ಪ್ರಜಾ ನಾಯಕ ಸುದ್ದಿ ಜಗಳೂರು -: ರಾಜ್ಯದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿ ಗೆ ತರಲಾಗಿದ್ದು,ಆಗಸ್ಟ್ ನ ಒಂದು ತಿಂಗಳ ಹಣವು ಯಜಮಾನಿ ಯ ರ ಖಾತೆಗೆ ಜಮೆ ಆಗಿದ್ದರು,ಆಧಾರ್ ಪಾಸ್ ಬುಕ್,ಪಡಿತರ ಚೀಟಿಯಲ್ಲಿ ಕೆಲವು ತಾಂತ್ರಿಕ ದೋಷವಿರುವ ಮಹಿಳೆಯರ ಖಾತೆ ಗೆ ಇನ್ನೂ ಹಣ ಬಾರದೆ ಇರುವುದು ಆತಂಕಕೆ ಎಡೆ ಮಾಡಿದೆಯ ಲ್ಲ ದೆ.ನನ್ನ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ ಏನ್ ಆಗಿದೆ ಸಮ ಸ್ಯೆ ಎಂದು ಆಧಾರ್ ಕಾರ್ಡ್ ಪಾಸ್ ಬುಕ್ ಹಿಡಿದು ಗ್ರಾಮ್ ಒನ್ ಕೇಂದ್ರಗಳು, ಬ್ಯಾಂಕ್, ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾ ಣ ಇಲಾಖೆ ಅಲೆದಾಡುವುದು ಮಹಿಳೆಯರಿಗೆ ತಪ್ಪಿಲ್ಲ.
ಹೌದು ಜಗಳೂರು ತಾಲೂಕಿನ ಹಲವು ಮನೆ ಯಾಜಮಾನಿ ಯರ ಖಾತೆಗೆ ಹಣ ಜಮೆಯಾಗದ ಕಾರಣ ನಿತ್ಯವು ಪರಿತಾಪಿಸುವಂತಾ ಗಿದೆ.
ತಾಲೂಕಿನಲ್ಲಿ ಅರ್ಹರೆಂದು ಗುರುತಿಸಿಲಾದ 37300 ಮಹಿಳಾ ಫಲಾನುಭವಿಗಳಲ್ಲಿ 35487 ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಿದ್ದು, 33852 ಜನರ ಖಾತೆಗೆ ಹಣ ಜಮೆಯಾಗಿದೆ.3313 ಫಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದ ಹಣ ಜಮೆ ಯಾಗಿ ಲ್ಲ.ಅಂತಹ ಫಲಾನುಭವಿಗಳಿಗೆ ತಾಂತ್ರಿಕ ಕಾರಣ ಸರಿಪಡಿಸಿ ಕೊ ಳ್ಳಲುಇಲಾಖೆಯವರು ಕೆರೆ ಮೂಲಕ ಗಮನಕ್ಕೆ ತಂದಿದ್ದಾರೆ ಅಲ್ಲ ದೆ 244 ಫಲಾನುಭವಿಗಳಿಗೆ ಪೇಮೆಂಟ್ ರಿಜೆಕ್ಟ್ ಆಗಿದೆ.
ಪಡಿತರ ತಿದ್ದುಪಡಿ ಗ್ರಹಲಕ್ಷ್ಮೀ ಯೋಜನೆಗೆ ಅರ್ಜಿ ಸ್ವೀಕಾರ ನಕಾ ರ :- ಹೌದು ತಾಲೂಕಿನಲ್ಲಿ ಸಾವಿರಾರು ಅರ್ಹ ಫಲಾನುಭವಿ ಗಳು ಇನ್ನೂ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಪಡಿತ ರ ಚೀಟಿಯಲ್ಲಿ ಯಜಮಾನಿಯ ಸ್ಥಳದಲ್ಲಿ ಪುರುಷರು,ಮರ ಣ ಹೊಂದಿ ದ್ದ ಯಾಜಮಾನಿಯರನ್ನು ಕಾರ್ಡ್ನಲ್ಲಿ ಹೊಸದಾಗಿ ಡಿಲಿಟ್ ಮಾಡಿ ಸಿ ಕಾರ್ಡ್ ತಿದ್ದುಪಡಿ ಮಾಡಿಸಿದ್ದವರಿಗೆ ಗೃಹಲಕ್ಷ್ಮಿ ಯೋಜನೆಯ ಸಾಪ್ಟವೇರ್ ನಲ್ಲಿ ಅರ್ಜಿ ತೆಗೆದುಕೊಳ್ಳಿತ್ತಿಲ್ಲ ಈ ಫಲಾನುಭವಿ ಗಳು ವಾರಕ್ಕೆ ನಾಲ್ಕೈದು ಬಾರಿ ಅರ್ಜಿ ಸಲ್ಲಿಸಲು ಗ್ರಾಮ್ ಒನ್ ಕೇಂದ್ರಗ ಳಿಗೆ ಭೇಟಿ ನೀಡುತ್ತಿದ್ದರು ಪ್ರಯೋಜನ ವಿಲ್ಲ.
ತಾಂತ್ರಿಕ ಕಾರಣವಿರುವ ಫಲಾನುವಿಗಳಿಗೆ ಬಾರದ ಹಣ :- ತಾಲೂಕಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಆಧಾ ರ್ ಕಾರ್ಡ್,ಬ್ಯಾಂಕ್ ಪಾಸ್ ಬುಕ್ ಹಾಗೂ ಪಡಿತರ ಚೀಟಿಗ ಳಲ್ಲಿ ಫಲಾನುಭವಿಗಳ ಹೆಸರು ಒಂದೆಯಾಗಿರಬೇಕು, ಒತ್ತಕ್ಷರಗಳು ಮಿಸ್ ಆದರೂ ಡಿಬಿಟಿಯಲ್ಲಿ ಡಾಟಾ ಮಿಸ್ ಮ್ಯಾಚ್ ಆಗಿ ಖಾತೆಗೆ ಹಣ ಜಮೆಯಾಗಿಲ್ಲ ಅಲ್ಲದೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಎನ್ ಪಿ ಸಿ ಐ ಆಗದೆ ಹಲವು ತಾಂತ್ರಿಕ ಕಾರಣ ಇರುವವರಿಗೆ ಹಣ ಜಮೆಯಾಗಿಲ್ಲ.ಇಂತಹ ಸಮಸ್ಯೆ ಎದುರಿಸುವವರಿಗೆ ಇಲಾಖೆ ಯಿಂದ ಕರೆ ಮಾಡಿ ಸರಿಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ನನ್ನ ಖಾತೆ ಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎರಡು ತಿಂಗ ಳಿ ದ ಗ್ರಾಮ್ ಓನ್ ಕೇಂದ್ರಕ್ಕೆ ಬ್ಯಾಂಕ್ ಗೆ ಅಲೆದಾಡಿ ಸಾಕ್ಕಾಗಿದೆ ಸ್ವಾ ಮಿ ಎಲ್ಲಾ ಸರಿ ಇದ್ದರು ಹಣ ಬರುತ್ತಿಲ್ಲ ಎಂದು ಕೆಲ ಮಹಿಳೆ ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ
ಕಾರ್ಡ್ ತಿದ್ದುಪಡಿ ಮಾಡಿಸಿದವರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸಲಾಗುತ್ತಿಲ್ಲ ಕಾರಣ ಆಹಾರ ಇಲಾಖೆ ಸಾಪ್ಟ ವೇರ್ ನಿಂದ ಗೃಹಲಕ್ಷ್ಮಿ ಸಾಪ್ಟವೇರ್ ಗೆ ಫಲಾನುಭವಿಗಳ ಡಾಟಾ ವರ್ಗಾ ವಣೆ ಯಾಗಬೇಕಿದೆ ಅಲ್ಲಿಯವರೆಗೂ ತಾಳ್ಮೆ ಯಿಂದ ಅರ್ಜಿ ಸಲ್ಲಿ ಸುವವ ರು ಕಾಯಬೇಕಿದೆ ಅರ್ಜಿ ಸಲ್ಲಿ ಸಲು ಸರ್ಕಾರ ಕೊನೆ ದಿನ ನಿಗದಿ ಮಾಡಿಲ್ಲ. ತಾಂತ್ರಿಕ ಕಾರಣ ಎದುರಿಸುವವರಿ ಗೆ ಇಲಾಖೆ ಯಿಂದ ಕೆರೆ ಮಾಡಿ ಸರಿಪಡಿಸಲು ಸೂಚಿಸಲಾಗಿದೆ. ಗೃಹಲಕ್ಷೀ ಯೋಜನೆ ಕುರಿತು ಏನೇ ಸಮಸ್ಯೆ ಗಳಿದ್ದರು ಫಲಾನುಭ ವಿಗಳು ಇಲಾಖೆ ಸಂಪರ್ಕಿಸಿ.
–ಬಿರೇಂದ್ರಕುಮಾರ್,ಸಹಾಯಕ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಗಳೂರು.