ಪ್ರಜಾ ನಾಯಕ ಸುದ್ದಿ ಜಗಳೂರು :- ಕೆಪಿಸಿಸಿ ಕಿಸಾನ್ ವಿಭಾಗದ ರಾಜ್ಯ ಕಾರ್ಯದರ್ಶಿ ಯಾಗಿ ಡಿ.ಕುಮಾರ್ ಮರೇನಹಳ್ಳಿ ಅವರು ನೇಮಕವಾಗಿದ್ದು ತಕ್ಷಣದಿಂದ ಜಾರಿಗೆ ಬರುವಂತೆ ಕಿಸಾನ್ ಕಾಂಗ್ರೆ ಸ್ ವಿಭಾಗದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಬೆಂಗಳೂರು ಕೆಪಿಸಿಸಿ ಕಚೇರಿಯ ಲ್ಲಿ ಆದೇಶ ಪತ್ರ ನೀಡಿ ತಿಳಿಸಿದರು.
ನಂತರ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿ ಹೊ ಳೆ ಆದೇಶ ಪ್ರತಿ ವಿತರಿಸಿ ಲೋಕಸಭಾ ಚುನಾವಣೆ ಸಮೀಪಿ ಸುತ್ತಿದ್ದು ರಾಜ್ಯ ಜಿಲ್ಲಾ ವಿಧಾನ ಸಭಾ ವಾರು ಪಕ್ಷ ಸಂಘಟನೆ ಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸಿ ಮುಂಬರು ವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಬ ರಲು ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿ ದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತ ನಾಡಿ ಕಾಂಗ್ರೆಸ್ ಪಕ್ಷ ಯುವಕರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡ ಲಿದೆ ತಮ್ಮ ಸ್ನಾನಗಳಿಗೆ ಅಂಟಿಕೊಳ್ಳದೆ ಸಾಮಾನ್ಯ ಕಾರ್ಯಕರ್ತ ರಂತೆ ಎಲ್ಲರ ನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಯಲ್ಲಿ ತೊಡಗಿಸಿ ಕೊ ಳ್ಳಿ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗ ಜಂಟೀ ಕಾರ್ಯ ದರ್ಶಿ ಗುತ್ತಿದುರ್ಗ ರುದ್ದೇಶ್ ದೊಣ್ಣೆಹಳ್ಳಿ ಗ್ರಾ.ಪಂ.ಅಧ್ಯಕ್ಷ ತಿಪ್ಪೇ ಸ್ವಾಮಿ,ಕಾಂಗ್ರೆಸ್ ಮುಖಂಡ ಡಿ.ಬಿ.ಹಳ್ಳಿ ನಾಗೇಶ್,ದಲಿತ ಮು ಖಂಡ ಬಿ.ಸತೀಶ್, ಸೇರಿದಂತೆ ಹಲವರು ಇದ್ದರು.