ಪ್ರಜಾ ನಾಯಕ ಸುದ್ದಿ ಜಗಳೂರು :- ನಾನೊಬ್ಬ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವೆ ಎಂದು ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಯುವ ಘಟಕ,ತಾಲೂಕು ಉಸ್ತುವಾರಿ,ಕೆಪಿಸಿಸಿ ಸದ ಸ್ಯನಾಗಿರುವೆ.ಇಂದಿಗೂ ಕಾಂಗ್ರೆಸ್ ಪಕ್ಷದ ನಿರ್ದೇಶನದಂತೆ ಹಲವಾರು ಕಾರ್ಯಕ್ರಮಗಳ ಯಶಸ್ವಿಗೆ ಪ್ರಾಮಾಣಿಕವಾಗಿ ಪಾ ಲ್ಗೊಂ ಡಿ ರುವೆ.ಹಾಗೂ ಭಾರತ್ ಜೊಡೋ ಯಾತ್ರೆಯಲ್ಲಿ ಸಕ್ರಿಯ ವಾಗಿ ಭಾಗವಹಿಸಿರುವೆ ನನ್ನ ಪಕ್ಷ ನಿಷ್ಠೆ ,ಸೇವೆ,ಹಿರಿಯತನವನ್ನು ಗುರುತಿಸಲಿ ಹಾಗಾಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ದಿಂ ದ ನಾನು ಒಬ್ಬ ಆಕಾಂಕ್ಷಿಯಾಗಿರುವೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನ ದಡಿಯಲ್ಲಿ ಪಕ್ಷದ ನಿರ್ಣಯಕ್ಕೆ ಬದ್ದನಾಗಿರುವೆ.ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಅವರು ನಮ್ಮ ಸಿದ್ದಾಂತದಲ್ಲಿದ್ದಾರೆ ಇದ್ದಾರೆ ಎಂದು ಹೇಳಿದರು.
ಬರ ಎದುರಿಸುವಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಆಡಳಿ ತ ವೈಫಲ್ಯ :- ಜಿಲ್ಲೆಯ 6 ತಾಲೂಕುಗಳಲ್ಲಿ ಬರ ಘೋಷಣೆ ಯಾಗಿದೆ. ಅ ಲ್ಲದೆ ಕೇಂದ್ರದಿಂದ ಅಶೋಕ ಕುಮಾರ್ ಅವರ ನೇತೃತ್ವದ ತಂಡ ತಾಲೂಕಿಗೆ ಆಗಮಿಸಿದಾಗ ಜಿಲ್ಲಾ ಸಂಸದರು ಭಾಗವಹಿಸಿ ಲ್ಲ.ವರ ದಿಯಂತೆ ಬರದಿಂದ ರಾಜ್ಯದಲ್ಲಿ ₹37000 ಕೋಟಿ ನಷ್ಟ ವಾಗಿದೆ. ಶೇ.50 ಶೀಘ್ರ ಪರಿಹಾರಕ್ಕೆ ಕೇಂದ್ರದ ಲ್ಲಿನ ಆಡಳಿತ ಬಿಜೆ ಪಿ ಸರ ಕಾರಕ್ಕೆ ಒತ್ತಡ ತಂದಿಲ್ಲ.ಬಿಜೆಪಿ ನೇತೃತ್ವದಲ್ಲಿ ಪ್ರಸಕ್ತ ವಾಗಿ ಬರ ಅಧ್ಯಯನ ಅಪ್ರಸ್ತುತ ಮತ್ತು ಪ್ರಚಾರಕ್ಕಾಗಿ ಬರ ಅಧ್ಯ ಯನ ಮಾಡು ತ್ತಿದೆ ಇದು ಅವರ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾ ಗಿದೆ ಎಂದು ಆರೋಪಿಸಿದರು.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮ ಅವರು ಮಧ್ಯ ಪ್ರದೇಶದ ಧಿಮಾನಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯ ರ್ಥಿಯಾಗಿ ಸ್ಪರ್ಧಿಸಿದ್ದಾರೆ.ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಂಚರಾಜ್ಯ ಚುನಾವಣಾ ಗೆಲುವಿನ ಸಂಚಿನಲ್ಲಿದ್ದಾರೆ.ಈ ಮಧ್ಯೆ ಕರ್ನಾಟಕಕ್ಕೆ ಬರಪರಿಹಾರ ವಿಳಂಬವಾಗುತ್ತದೆ.ರೈತರ ಹೆಸರಿನಲ್ಲಿ ರಾಜಕಾರಣ ಮಾಡುವವರಿಂದ ರೈತರ ಬದುಕು ಕಂಗಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.