✍️ವರದಿ -: ಹೆಚ್.ಬಾಬು ಮರೇನಹಳ್ಳಿ
ಪ್ರಜಾ ನಾಯಕ ಸುದ್ದಿ ಜಗಳೂರು -: ಪಟ್ಟಣದ ಮುಖ್ಯ ರಸ್ತೆಗಳಾ ದ ಮಹಾತ್ಮ ಗಾಂಧೀಜಿ ವೃ ತ್ತಾ.ಡಾ.ಬಿ.ಆರ್ ಅಂಬೇಡ್ಕರ್ ವೃತ್ತ ಚಳ್ಳ ಕೆರೆ ಸೇರಿದಂತೆ ಇತರೆ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಮತ್ತು ಪಾದ ಚಾರಿಗಳಿಗೆ ಬಿಡಾಡಿದ ನಗಳಿಂದ ಬಹಳ ಕಿರಿಕಿರಿಯಾ ಗುತ್ತಿ ದೆ ಎಂದು ಸಾರ್ವಜನಿಕ ಆ ರೋಪಿಸುತ್ತಿದ್ದಾರೆ ಆದರೆ ಇಲ್ಲಿನ ಪಟ್ಟ ಣ ಪಂಚಾಯತಿಯವರು ಗೊತ್ತಿದ್ದು ಗೊತ್ತಿಲ್ಲದಂತೆ ಜಾಣ ಮೌನ ವಹಿ ಸಿರುವುದು ಸಾರ್ವ ಜ ನಿಕರಿಗೆ ಯಕ್ಷ ಪ್ರಶ್ನೆಯಾಗಿದೆ
ಪಟ್ಟಣದ ಮುಖ್ಯ ರಸ್ತೆಯಲ್ಲಿ ಬಿಡಾಡಿ ದನಗಳ ಜೊತೆ ಒಂದು ಗೂ ಳಿ ಉಂಡಾಡಿ ಗುಂಡಾನಂತೆ ಮೆರೆಯುತ್ತಿದೆ ಅದು ಹಣ್ಣಿನ ಅಂಗ ಡಿ. ತರಕಾರಿ ಅಂಗಡಿಗಳಿಗೆ ಲಗ್ಗೆ ಇಡುತ್ತದೆ ಆ ಗೂಳಿ ಅಜಾನು ಬಾ ಹು ದೇಹ ಹೊಂದಿರುವ ಅಹಂಕಾರವೋ..ನನ್ನನ್ನು ಮೀರಿಸು ವರ್ಯಾ ರಿಲ್ಲ ಎಂಬ ದರ್ಪವೋ ಗೋತ್ತಿಲ್ಲ. ಆದರೆ ಆನೆ ನಡೆದಿದ್ದೆ ದಾರಿಯ ಲ್ಲ ನಾನು ನಡೆದಿದ್ದೇದಾರಿ ಎನ್ನುವಂತೆಗುರಾಯಿಸುತ್ತಾ… ಕೆಂಗಣ್ಣಿ ನಿಂದ ಕೆಕ್ಕರಿಸುತ್ತಾ..
ಹೂಂಕರಿಸುತ್ತಾ… ಠೇಂಕರಿಸುತ್ತಾ…ಇತರೇ ಬಿಡಾಡಿಗಳ ದನ ಗಳ ಮೇಲೆ ಗುಟುರು ಹಾಕಿ ತನ್ನ ಬಾಹು ಬಲಿಯಂತಹ ಕೊಬ್ಬಿದ್ದ ಕೊಂ ಬಗಳಿಂದ ಗುಮ್ಮತ್ತಿರುವುದು ಸಹಜವಾಗಿದೆ.ಇದರ ಉಪಟಳಕ್ಕೆ ಇ ತರೇ ಬಿಡಾಡಿ ದನಗಳು ಹೆದರಿ ಬೆದರಿ ಬೆಂಡಾಗಿ ಹೋಗಿವೆ .ಅಪ್ಪಿ ತಪ್ಪಿ ಇದರ ತಂಟೆಗೆ ಇತರೆ ದನಗಳು ಹೋಗುವುದಿಲ್ಲ .ಇದರ ಅಕ್ಕ ಪಕ್ಕ ಸುಳಿಯುವುದು ಇಲ್ಲ . ದುಷ್ಠನ ಕಂಡರೆ ದೂರು ಇರು ಅಂತ ರಲ್ಲಾ ಯಾಕೆ ಬೇಕೆ ನಮಗೆ ಇಲ್ಲದ ಉಸಾಬರಿ, ಬಡಪಾಯಿ ಜೀವ ಬದುಕಿದಾರಯ್ತು ಜೀವ ಉಳಿಸಿಕೊಂಡರೆ ಈ ಊರಲ್ಲ ಮುಂದಿನ ಊರು ಅಂತ ಭಯದಲ್ಲಿ ಇತರೆ ದನಗಳು ಪಟ್ಟಣದಲ್ಲಿ ಜೀವನ ಸಾ ಗಿಸು ತ್ತೇವೆ. ಇನ್ನೂ ಪಟ್ಟಣದ ನಾಗರೀಕರಿಗೆ ಈ ಗೂಳಿ ಗೋ ಳೋ ಯ್ದು ಕೊಳ್ಳುತ್ತಿದೆ.
ಬೆಳಿಗ್ಗೆಯಿಂದ ಸಂಜೆ ಅವರಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಎ ಲ್ಲಿಂ ದರಲ್ಲಿ ಮಲಗಿಕೊಳ್ಳುವ ಮೂಲಕ ಅಲ್ಲಲ್ಲಿ ತನ್ನ ಪುಂಡಾ ಟಿಕೆ ಮೆರೆದು ಸಂಜೆಯಾಗುತ್ತಿದ್ದಂತೆ ದಿನನಿತ್ಯ ತನ್ನ ಡೊಳ್ಳು ಹೊಟ್ಟೆ ತುಂ ಬಿಸಿಕೊಳ್ಳಲು ಪರದಾಡುವ ಮೂಲಕ . ಸಿಕ್ಕ ಸಿಕ್ಕದನ್ನೆ ಮುಕ್ಕುತ್ತಿದೆ. ಹಣ್ಣಿನ ಅಂಗಡಿ, ತರಕಾರಿ ಅಂಗಡಿಗಳ ಲ್ಲಿನ ಮಾಲೀಕರು ಅತ್ತಿತ್ತ ನೋಡುತ್ತಿದ್ದಂತೆ ಭರ್ಜಿರಿಯಾಗಿ ತರಕಾರಿಯನ್ನು ಬಾಚಿ ಬಾಯಿ ಯಲ್ಲಿ ಹಾಕಿಕೊಳ್ಳುತ್ತದೆ.ಇದನ್ನು ಕಂಡ ಮಾಲೀಕರು ಕೆಲವೊಮ್ಮೆ ಛಡಿ ಏಟು ಕೊಟ್ಟರು ಅದು ತನ್ನ ಚಾಳಿ ಬಿಡದೆ ತಿನ್ನುತ್ತಿರುವುದು ಇದರ ವೃತ್ತಿಯಾಗಿದೆ ಆದರೆ ಈ ಗೂಳಿ ಜಗ್ಗುತ್ತಿರಲಿಲ್ಲ.!ಬಗ್ಗುತ್ತಿಲ್ಲ.!
ಹೀಗೆ ಇಡೀ ದಿನ ತಿಂದು ತೇಗಿದರೂ ಸಂತೃಪ್ತಿ ಕಾಣದ ಈ ಗೂಳಿ ಸಂಜೆಯಾಗುತ್ತಿದ್ದಂತೆ ಪಟ್ಟಣದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ನಾ ಗರೀಕರು ಪಾರ್ಕಿಂಗ್ ಮಾಡುತ್ತಿದ್ದ ಬೈಕ್ಗಳಲ್ಲಿನ ಸೈಡ್ಬ್ಯಾಗ್ ಇ ದು ಟಾರ್ಗೇಟ್ ಮಾಡಿ ಕಾರ್ಯಾಚರಣೆ ಗಿಳಿದರೆ ಮೀಸ್ ಆ ಗೋ ಛಾನ್ಸೆ ಇಲ್ಲ. ಬಾಳೆಹಣ್ಣು, ಬ್ರೆಡ್ ಇತರೇ ಬ್ಯಾಗ್ನಲ್ಲಿ ಏನೇ ಇರಲಿ ಬಾಯಿ ಹಾಕಿದರೆ ಮುಗಿ ಯಿತು. ಶಿವಾ ಅಂತ ಗಂಟಲಲ್ಲಿ ಇಳಿಸಿ ಕೊಂಡು ಬಿಡುತ್ತದೆ . ಸಾರ್ವಜನಿಕರು ಏಯ್..ಏಯ್.. ಎನ್ನುತ್ತಿ ದ್ದಂತೆ ಮತ್ತೊಂದು, ಇನ್ನೊಂದು ಬೈಕ್ನ ಬ್ಯಾಗಿಗೆ ಕನ್ನ ಹಾಕುವ ಮೂಲಕ ನಾಗರೀಕರಿಗೆ ಠಕ್ಕರ್ ನೀಡುವ ಮೂಲಕ. ಸಾರ್ವಜನಿ ಕರಿಗೆ ನೆಮ್ಮದಿಗೆ ಭಂಗವೆನಿಸಿತ್ತು. ಈ ಬಗ್ಗೆ ನಾಗರೀಕರು ಪಟ್ಟಣ ಪಂಚಾಯಿತಿಗೆ ದೂರು ಹೇಳಿದ್ದರು.ಪ್ರಯೋಜನವಾಗಿಲ್ಲ.
ದಿನನಿತ್ಯ ಈ ಬಿಡಾಡಿ ದನಗಳಿಂದ ಪಾದಾಚಾರಿಗಳು ದ್ವಿಚಕ್ರ ವಾಹ ನ ಸವಾರರು ಮತ್ತು ಕಾರಿನ ಸವಾರರು ಆಟೋಸವಾರ ರು. ಗೂಡ ಅಂಗಡಿ ಮಾಲೀಕರು ಒಂದಲ್ಲ ಒಂದು ಅಪಘಾತಕ್ಕೆ ಈಡಾಗಿ ಆಸ್ಪ ತ್ರೆ ಸೇರಿ ಚಿಕಿತ್ಸೆ ಪಡೆದುಕೊಂಡ ಉದರಣೆಗಳು ಬಹಳಷ್ಟಿದೆ
ಆದರೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಇದೇ ಮುಖ್ಯ ರಸ್ತೆಯಲ್ಲಿ ಓಡಾಡಿದರು ರಸ್ತೆಯ ಉದ್ದಗಲಕ್ಕೂ ಎಲ್ಲಿಂದರಲ್ಲಿ ಬಿ ಡಾಡಿ ದನಗಳು ಮಲಗುವುದನ್ನು ಕಂಡರೂ ಕಾಣದಂತೆ ಜಾಣ ಮೌನ ವಹಿಸಿ ಬಿಟ್ಟಿದ್ದಾರೆ..
ಹಾಗಾದರೆ ಒಟ್ಟಾರೆ ಹೇಳಬೇಕೆಂದರೆ ಪಟ್ಟಣದಲ್ಲಿ ಒಂದುಗುಂಡಾ ಗೂಳಿ ನಾನೇ ಶ್ರೇಷ್ಠ. ನಾನು ಮಾಡಿದ್ದಲ್ಲ ಸರಿ. ನನ್ನಷ್ಟು ಬೇರೆಯ ವರಿ ಗೆ ಯಾರಿಗೂ ಶಕ್ತಿ ಇಲ್ಲ. ಬೇರೆ ದನಗಳನ್ನು ಈ ಹೀಳಿಸುವು ದು.ಬೇರೆ ದನಗಳನ್ನು ಓಡಿಸಿಕೊಂಡು ಕೊಂಬಿ ನಿಂದ ಗುದ್ದುವು ದು. ಹೀನಾಯವಾಗಿರುವ ಬಿಡಡಿಗಳನ್ನು ಹೊಟ್ಟೆ ತುಂಬಿಸಿ ಕೊಳ್ಳ ಲು ಬಿಡುವುದಿಲ್ಲ.ಬೇರೆ ದನಗಳ ಕಾಲು ಎಳೆಯುವ ಶಾಳಿ ಈ ಗುಂ ಡ ಗೂಳಿಗಿದೆ. ಬೇರೆ ಬಿಡಾಡಿ ದನಗಳನ್ನು ಕಂಡರೆ ಅಸೂ ಯೆ ಪಡುವು ದೇ ಈ ಗುಂಡಾಗೂಳಿ ಕಾಯಕ. ನಾನೇ ನನ್ನಿಂದಲೇ ನಾ ನೇ ಶ್ರೇಷ್ಠ ಎಂದು ಮೆರೆಯುತ್ತಿರುವ ಈ ಗೂಳಿಗೆ ಪಟ್ಟಣ ಪಂಚಾಯಿತಿಯವ ರು ದನಗಳ ಮಾಲೀಕರಿಗೆ ನೋಟಿಸ್ ಕೊಡು ತ್ತಾರೋ ಅಥವಾ ಗೋ ಶಾಲೆಗೆ ಕಳಿಸುತ್ತಾರೋ ಇಲ್ಲವೋ ಎಂದು ಕಾದು ನೋಡ ಬೇಕಾಗಿದೆ.
ಪಟ್ಟಣದಲ್ಲಿ ಬಿಡಾಡಿ ದನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿ ದ್ದರೂ ಕೂಡ ಪಟ್ಟಣ ಪಂಚಾಯಿತಿ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಪತ್ರಿಕೆ ಮೂಲಕ ಆಗ್ರಹಿಸುತ್ತಿದ್ದಾರೆ.
” ಈಗಲಾದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಚ್ಚೆ ತ್ತು ಈ ಬಿಡಾಡಿ ದನಗಳ ಮಾಲೀಕರಿಗೆ ನೋಟಿಸ್ ಕೊಡುವ ಮೂಲ ಕ ದನಗಳ ಅವಳಿಯನ್ನು ಕಡಿಮೆ ಮಾಡುತ್ತಾರೋ ಇಲ್ಲವೋ ಗೋ ಶಾಲೆಗೆ ಕಳಿಸುತ್ತಾ ರೊ ಅಥವಾ ಯಾವುದಾ ದರೂ ಒಬ್ಬ ವ್ಯಕ್ತಿಯ ಪ್ರಾಣ ಹೋಗುವವರೆಗೂ ಕಣ್ಮುಚ್ಚಿ ಕುಳಿತು ಕೊಳ್ಳುತ್ತಾರೆ ಗೊತ್ತಿಲ್ಲ”
– ಸರ್ಕಲ್ ಕಾಟಜ್ಜ ಸಾರ್ವಜನಿಕರು ಚಿಕ್ಕಮ್ಮನಹಟ್ಟಿ
” ಈಗಾಗಲೇ ಈ ಬಿದಾಡಿ ದನಗಳ ಬಗ್ಗೆ ಎರಡು ಮೂರು ಬಾ ರಿ ಸಭೆ ನಡೆಸಿದ್ದೇವೆ.ದನಗಳು ರಸ್ತೆ ಮಧ್ಯಭಾಗದಲ್ಲಿ ಮಲಗು ವು ದು ನನ್ನ ಗಮನಕ್ಕೆ ಬಂದಿದೆ ನಾನು ನೋಡಿ ದ್ದೇನೆ ಶೀಘ್ರ ದಲ್ಲಿ ಯೇ ದನ ಗಳ ಮಾಲೀಕರಿಗೆ ನೋಟಿಸ್ ನೀಡಲಾಗು ವುದು ಮ ತ್ತು ನಮ್ಮ ಪಟ್ಟಣ ಪಂಚಾಯಿತಿಯಿಂದ ಕಸ ಸಂಗ್ರ ಹಣೆ ಮಾಡು ವ ವಾಹನಗ ಳಿಂದ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡ ಲಾಗುವುದು ಇಲ್ಲ ವಾದಲ್ಲಿ ಆ ದನಗಳನ್ನು ಹಿಡಿದು ಗೋಶಾಲೆಗೆ ಕಳಿಸು ವ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗುವುದು ”
– ಲೋಕ್ಯ ನಾಯ್ಕ್ ಮುಖ್ಯಧಿಕಾರಿಗಳು ಪ.ಪಂ ಜಗಳೂರು