ಪ್ರಜಾ ನಾಯಕ ಸುದ್ದಿ ಜಗಳೂರು :- ಶೋಷಿತ ಸಮುದಾಯಗ ಳಿಗೆ ಸಹಸ್ರಾರು ವರ್ಷಗಳಿಂದ ಶಿಕ್ಷಣವನ್ನು ನಿರಾಕರಿಸಲಾಗಿದ್ದು, ಸ್ವಾತಂತ್ರ್ಯ ನಂತರದ ಸಂವಿಧಾನ ಜಾರಿಯಾದ ನಂತರ, ಕಳೆದ 70 ವರ್ಷ ಗಳಿಂದ ಮಾತ್ರ ಶಿಕ್ಷಣ ಸಿಗುತ್ತಿದೆ. ಶಿಕ್ಷಣವನ್ನೇ ಅಸ್ತ್ರವಾಗಿಸಿ ಕೊಂಡು ದಮನಿತ ಸಮುದಾಯಗಳು ಸಮಾಜದ ಮುಖ್ಯ ವಾಹಿನಿ ಗೆ ಬರಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿ ಹೊಳೆ ಹೇಳಿದರು.
ಪಟ್ಟಣದ ಬಯಲು ರಂಗ ಮಂದಿರದಲ್ಲಿ ಬುಧವಾರ ಕರ್ನಾ ಟಕ ಎಸ್.ಸಿ, ಎಸ್.ಟಿ. ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಶೋಷಣೆಯನ್ನು ನಾವೇ ಮಾಡಿಕೊಳ್ಳುತ್ತೇವೆ.ಬೇರೆ ಯಾರೂ ಮಾಡುವುದಿಲ್ಲ. ಮೂಢನಂಬಿಕೆಗಳನ್ನು ಪೋಷಣೆ ಮಾಡುವವರು ನಾವೇ, ಸೈಲೆಂಟ್ ಕಿಲ್ಲರ್ ರೀತಿಯಲ್ಲಿ ಅದು ನಮಗೆ ಗೊತ್ತಾಗುವು ದಿಲ್ಲ.ಯಾವುದು ಶೋಷಣೆ,ಯಾವುದು ಮೂಡ ನಂಬಿಕೆ ಎನ್ನುವು ದನ್ನು ಅರ್ಥಮಾಡಿಕೊಳ್ಳಬೇಕು. ಮೌಢ್ಯದಿಂದ ಹೊರಬಂದು ಶಿಕ್ಷ ಣ ಪಡೆದಲ್ಲಿ ಮಾತ್ರ ಬಾಬಾ ಸಾಹೇಬ್ ಅವರ ಸಂವಿಧಾನಕ್ಕೆ ಗೌರ ವ ಕೊಟ್ಟಂತಾಗುತ್ತದೆ. ಎಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಂತು ಸಂವಿ ಧಾನದ ಮಾರ್ಗ ದಲ್ಲಿ ನಡೆದಾಗ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ಶೋಷಿತರು ಸರ್ಕಾರದ ಸವಲತ್ತುಗಳನ್ನು ಪಡೆಯಲು ಯಾವಾಗ ಲೂ ಬಹಳ ಕಷ್ಟವಾಗುತ್ತದೆ. ಯಾವುದೇ ಸರ್ಕಾರದ ಆದೇಶಗಳು ಜಾರಿಯಾದರೂ ಅವುಗಳಲ್ಲಿ ಸಣ್ಣಪುಟ್ಟ ಲೋಪಗಳು,ತಿದ್ದುಪಡಿಗ ಳು ಕಾಣಸಿಕೊಂಡು ಸವಲತ್ತುಗಳು ತಲುಪಬೇಕಾದಲ್ಲಿ ವರ್ಷಗಟ್ಟ ಲೆ ವಿಳಂಬವಾಗುತ್ತದೆ. ಈ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನ ಮ್ಮ ಸರ್ಕಾರ ಸಂವಿಧಾನ ಪೀಠಿಕೆಗಳನ್ನು ಶಾಲಾಕಾಲೇಜುಗಳಲ್ಲಿ ಓದುವ ಕಾರ್ಯಕ್ರಮ ರೂಪಿಸಿದೆ. ಎಲ್ಲರೂ ಸಂವಿಧಾನ ಪೀಠಿಕೆ ಓದಿದಲ್ಲಿ ಸಾಕಷ್ಟ ಸಮಸ್ಯೆಗಳು ಪರಿಹಾರ ಕಾಣುತ್ತವೆ. ಸಿದ್ದರಾಮ ಯ್ಯ ಸರ್ಕಾರ ನಿಮ್ಮ ಸಮಸ್ಯೆ ಗಳಿಗೆ ಸದಾ ಸ್ಪಂದಿಸಲಿದೆ. ನೀವು ನ ಮ್ಮ ಬೆನ್ನುಹತ್ತಿದಲ್ಲಿ, ಒತ್ತಡ ಹೇರಿದಲ್ಲಿ ಮಾತ್ರ ನಿಮ್ಮ ಬೇಡಿಕೆಗಳು ಈಡೇರಲು ಸಾಧ್ಯ . ನಿಮ್ಮ ಚಟುವಟಿಕೆಗಳು ನಿರಂತರವಾಗಿರಲಿ ಎಂದು ಜಾರಕಿಹೊಳಿ ಸಲಹೆ ನೀಡಿದರು.
ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಶೋಷಿತರು,ದುರ್ಬಲರ ಏಳ್ಗೆಗಾಗಿ ಬುದ್ಧ, ಬಸವ, ಅಂಬೇಡ್ಕರ್ ಅವರ ಮಾನವೀಯ ತತ್ವಗಳ ನೆಲೆಗಟ್ಟಿನಲ್ಲಿ ಸಮಾಜ ನಿರ್ಮಾಣಕ್ಕೆ ಸತೀಶ ಜಾರಕಿಹೊ ಳಿ ಅವರು ಕಂಕಣಬದ್ಧರಾಗಿ ಶ್ರಮಿಸುತ್ತಿದ್ದಾರೆ. ಮಾನವಬಂಧುತ್ವ ವೇದಿಕೆಯ ಮೂಲಕ ರಾಜ್ಯದ ಉದ್ದಗಲಕ್ಕೆ ಸಮಾಜವನ್ನು ಸಂಘ ಟಿಸುತ್ತಿದ್ದಾರೆ. ಇಡೀ ರಾಜ್ಯ ಅವರ ಜನಪರ ಕಾರ್ಯಗಳನ್ನು ಗಮ ನಿಸುತ್ತಿದೆ. ಸಮಾನತೆಯ, ಶೋಷಣೆ ಮುಕ್ತ ಸಮಾಜಕ್ಕಾಗಿ ಶ್ರೇಷ್ಟ ಸಂವಿಧಾನ ನೀಡಿದ ಅಂಬೇಡ್ಕರ್ ಅವರು ಎಲ್ಲರಿಗೆ ಮಾದರಿಯಾ ಗಬೇಕು ಪತ್ರಕರ್ತರು ನೇರ ನಿಷ್ಠೂರವಾಗಿ ವರದಿ ಬಿತ್ತರಿಸಿ ಸಮಾ ಜಕ್ಕೆ ಮಾದರಿಯಾಗಬೇಕು ಅವರ ನೆರವಿಗೆ ನಾನು ಸದಾ ಸಿದ್ಧನಿರು ತ್ತೇನೆ ಡಾ. ಬಿ ಆರ್ ಅಂಬೇಡ್ಕರ್ ರವರ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಕರ್ನಾಟಕ ಎಸ್ ಸಿ ಎಸ್ ಟಿ ಪತ್ರಿಕ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದ ಅಭಿವೃದ್ಧಿಗೆ ನಾನು ಸದಾ ಸಿದ್ಧನಿರುತ್ತೇನೆ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ ತಾಲ್ಲೂಕಿನಲ್ಲಿ ಸಾಕ ಷ್ಟು ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ. ಸಮಾ ಜದ ಅಕು ಡೊಂಕುಗ ಳನ್ನು ತಿದ್ದಲಿ. ತಾಲ್ಲೂಕಿನಲ್ಲಿ ಹಾದು ಹೋಗುವ ಅರಬಾವಿ-ಚಳ್ಳ ಕೆರೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆ ಗೇರಿಸಲು ಹಾಗೂ ತಾಲ್ಲೂಕಿನ ಪ್ರಮುಖ ಸೇತುವೆ ಮತ್ತು ರಸ್ತೆಗಳಿ ಗೆ ಲೋಕೋಪಯೋಗಿ ಸಚಿವರು ಅನುದಾನ ನೀಡಲಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ ನಮ್ಮ ಜಗಳೂ ರು ತಾಲೂಕಿನಲ್ಲಿ ಕರ್ನಾಟಕ ಎಸ್ ಸಿ ಎಸ್ ಟಿ ಪತ್ರಿಕ ವರದಿಗಾರ ರ ಕ್ಷೇಮಾಭಿವೃದ್ಧಿ ಸಂಘದ ಸಮಾವೇಶ ನಡೆಯುತ್ತಿರುವುದು ಸಂ ತೋಷದ ವಿಷಯ ನಮ್ಮ ಧೀಮಂತ ನಾಯಕರಾದ ರಾಜ್ಯ ಕಂಡ ಅತ್ಯುತ್ತಮ ರಾಜಕಾರಣಿ ಹಾಗೂ ಎಲ್ಲಾ ಜನಾಂಗದ ಆಶಾಕಿರಣ ರಾಜಕೀಯ ದ್ರುವ ತಾರೆ ಸತೀಶ್ ಜಾರಕಿಹೊಳೆ ಅಣ್ಣನವರು ನ ಮ್ಮ ಜಗಳೂರು ಜಗಳೂರು ತಾಲೂಕಿಗೆ ಆಗಮಿಸಿದ್ದಾರೆ ಎಂದರೆ ಒಳ್ಳೆದಾಗುತ್ತದೆ ನಮ್ಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದವರು ಹೆಚ್ಚಾಗಿದ್ದಾರೆ ನಮ್ಮ ಕ್ಷೇತ್ರಕ್ಕೆ ಒಳ್ಳೆಯ ಅಭಿವೃದ್ಧಿ ಕಾರ್ಯಗ ಳನ್ನು ಶಾಸಕ ದೇವೇಂದ್ರಪ್ಪ ಇವರಿಂದ ಮಾಡಿಸಲಿ ಈ ಸಂಘ ಸತೀಶ್ ಜಾರಕಿಹೊಳಿ ಉದ್ಘಾಟನೆ ಮಾಡಿದ್ದರಿಂದ ಮುಂದೊಂ ದು ದಿನ ದೊಡ್ಡ ಸಂಘಟನೆಯಾಗಿ ಅರಮನೆಗೆ ಎಂದರು
ನಂತರ ಮಾಯಕೊಂಡ ಶಾಸಕ ಬಸವಂತಪ್ಪ ಮಾತನಾಡಿ ನಾನು ನೋಡಿದ ಹಾಗೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗ ಡದ ಪತ್ರಿಕೆಗಳನ್ನು ನೋಡುವುದೇ ಬಹಳ ಕಷ್ಟ ನಾನು ಕೂಡ ಬಸ್ಟ್ಯಾಂ ಡ್ ಗಳಲ್ಲಿ ಹಂಚಿದ್ದೇನೆ ರಾಜ್ಯ ಮಟ್ಟದಲ್ಲಿ ನಮಗೆ ಹೆಸರು ಬೇಕೆಂದರೆ ನಾವು ಮೊದಲು ವಿದ್ಯಾವಂತರಾಗಬೇಕು ಈಗಿನ ದಿನ ಮಾನಗಳಲ್ಲಿ ಪತ್ರಿಕ ಮಾಧ್ಯಮ ಪಟ್ಟ ಭದ್ರ ಹಿತ ಶಕ್ತಿಗಳ ಕೈಯಲ್ಲಿದೆ ಹಾಗಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಹೆಚ್ಚಿನ ವಿದ್ಯಾ ಭ್ಯಾಸ ಮಾಡಿ ಪತ್ರಿಕ ರಂಗಕ್ಕೆ ಬಂದು ಕಷ್ಟದಲ್ಲಿರುವವರ ಜನರ ನೋವಿಗೆ ಸ್ಪಂದಿಸಬೇಕು ಮತ್ತು ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪತ್ರಿಕೆಗಳಿಗೆ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಮುಖ್ಯ ಮಂತ್ರಿ ಗಳಿಗೆ ಒತ್ತಾಯಿಸುತ್ತೇನೆ ಎಂದರು
ನಂತರ ದಾವಣಗೆರೆ ಜಿಲ್ಲೆಯ ಟಿವಿ9 ವರದಿಗಾರರ ಬಸವರಾಜ್ ದೊಡ್ಡಮನಿ ಮಾತನಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪತ್ರಿ ಕಾ ಸಂಘದ ಉದ್ಘಾಟನೆಗೆ ಸಚಿವ ಸತೀಶ್ ಜಾರಕಿಹೊಳೆ ಅವರ ನ್ನು ಕರೆಸಿರುವುದು ಬಹಳ ಒಳ್ಳೆಯದು ಇವರು ರಾಜ್ಯದಲ್ಲಿ ಮನವು ಬಂದದ್ದು ವೇದಿಕೆಯ ಮೂಲಕ ಬುದ್ಧ ಬಸವ ಅಂಬೇಡ್ಕರ್ ಎಂಬ ತತ್ವ ಸಿದ್ಧಾಂತಗಳ ಅಡಿಯಲ್ಲಿ ಕೆಲಸ ಮಾಡುವ ಸಚಿವರ ಅಂದರೆ ತಪ್ಪಾಗಲಾ ರದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಈ ಸಂಘ ದೊಡ್ಡ ಮಟ್ಟದಲ್ಲಿ ಹೊರ ಹೊಮ್ಮಲಿದೆ ಎಂದು ಅಭಿನಂದಿಸಿದರು
ಇದೇ ವೇಳೆ ಸರಿಗಮಪ ಖ್ಯಾತಿಯ ಗಾಯಕರಾದ ಅಶ್ವಿನ್ ಶರ್ಮ. ದಿಯಾ ಹೆಗಡೆ. ಮುತ್ತುರಾಜ್ ಇವರಿಂದ ರಸಮಂಜರಿ ಕಾರ್ಯ ಕ್ರಮ ಆಯೋಜಿಸಲಾಗಿತ್ತು
ಈ ಸಂದರ್ಭದಲ್ಲಿ ಕೂಡ್ಲಿಗಿ ಶಾಸಕ ಎನ್.ಟಿ ಶ್ರೀನಿವಾಸ್. ಕೆಪಿಸಿಸಿ ಎಸ್.ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ. ಕೆಪಿಸಿಸಿ ಸದಸ್ಯ ಕಲ್ಲೇಶ ರಾಜ್ ಪಟೇಲ್. ಶಂಶೀರ್ ಆಹಮ್ಮದ್. ಎ.ಬಿ. ರಾಮಚಂದ್ರಪ್ಪ, ಅನಂತನಾಯ್ಕ್. ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್. ಹಿರಿ ಯ ಪತ್ರಕರ್ತ ಬಸವರಾಜ್ ದೊಡ್ಡಮನಿ. ಎನ್.ಟಿ ಎರಿಸ್ವಾಮಿ, ಡಾಕ್ಟರ್ ಪಿ ಎಸ್ ಅರವಿಂದನ್.ಮುಖಂಡರಾದ ಬರ್ಕತ್ ಅಲಿ ಹನುಮಂತಪುರ.ಪಿಂಜಾರ ಸಮಾಜದ ಅಧ್ಯಕ್ಷ ಪರ್ವೀಜ್. ಪಿಜಾ ರ ಸಮಾಜದ ಸಹ ಕಾರ್ಯದರ್ಶಿ ನಜೀರ್ ಅಹ್ಮದ್ ಮರನಹಳ್ಳಿ. ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ ಮಹೇ ಶ್ವರಪ್ಪ ,ಕಾನನಕಟ್ಟೆ ಪ್ರಭು,ಎಸ್.ಸಿ.ಎಸ್.ಟಿ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ್. ಗೌರವಾಧ್ಯಕ್ಷ ಸಿ ಬಸವರಾಜ್. ಕಾರ್ಯ ದರ್ಶಿ ಮಂಜಣ್ಣ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು