ಪ್ರಜಾ ನಾಯಕ ಸುದ್ದಿ ಜಗಳೂರು :- ರಾಜಕೀಯದಲ್ಲಿ ಒಂದು ಪಕ್ಷವನ್ನು ದೃಢವಾಗಿ ನಂಬಿ ಪಕ್ಷ ತಾಯಿಯಿದ್ದಂತೆ ಎಂದು ಶಾಸಕ ಬಿ ದೇವೇಂದ್ರಪ್ಪ ಹೇಳಿಕೆ ನೀಡಿದರು
ಪಟ್ಟಣದ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ವಿವಿಧ ಪಕ್ಷ ದಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು
ರಾಜಕೀಯದಲ್ಲಿ ಪಕ್ಷ ಎಂಬುವುದು ತಾಯಿಯಿದ್ದಂತೆ ದೃಢ ವಾಗಿ ನಂಬಿ ಒಂದು ಪಕ್ಷಕ್ಕೆ ಸೀಮಿತವಾಗಿರಿ ಪಕ್ಷ ಕಾರ್ಯಕರ್ತರಿಗೆ ಮುಖಂಡರಿಗೆ ಉನ್ನತ ಸ್ಥಾನ ನೀಡುವುದು ಖಚಿತವಲ್ಲದೆ ಘನತೆ ಗೌರವ ಹೆಚ್ಚಿಸುತ್ತದೆ ಎಂದು ಕಾಂಗ್ರೆಸ್ ಸೇರ್ಪಡೆ ಯಾದ ಕಾರ್ಯ ಕರ್ತರನ್ನು ಉದ್ದೇಶಿಸಿ ಕಿವಿ ಮಾತು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿದ್ದು ಮೂವತ್ತು ನಲವತ್ತು ವರ್ಷಗಳಿಂದ ಪಕ್ಷ ಕ್ಕಾಗಿ ದುಡಿದು ವಿಧಾನಸಭೆ ಚುನಾವಣೆಯಲ್ಲಿ ಯಾರೋ ಒಬ್ಬರ ಕಾರಣಕ್ಕೆ ಅಥವಾ ವಿವಿಧ ರಾಜಕೀಯ ಬೆಳವಣಿಗೆಗಳ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ದೂರಾ ತಳ್ಳಿ ಹೋಗಿದ್ದೀರಿ, ಆದರೆ ನನಗೆ ಅಸಮಾಧನವಿಲ್ಲ ಕಾಂಗ್ರೆಸ್ ಪಕ್ಷದಲ್ಲಿ ನಾನು ಚಿಕ್ಕ ಕೂಸಾಗಿ ಪಕ್ಷ ನಂಬಿದಕ್ಕೆ, ನಾನು ಶಾಸಕನಾಗಿ ಆಯ್ಕೆ ಯಾದೆ ಎಂದರಲ್ಲದೆ ಪುನಃ ಕಾಂಗ್ರೆಸ್ ಪಕ್ಷ ಸಿದ್ದಾಂತದ ಒಪ್ಪಿ ತತ್ವಾದರ್ಶಗಳನ್ನು ಅಪ್ಪಿ ಕೊಂಡು ಪಕ್ಷಕ್ಕೆ ಸೇರ್ಪಡೆಯಾದ ನಿಮ್ಮವೆ ಹೃದಯಪೂರ್ವಕ ಧನ್ಯವಾದಗಳು ತಿಳಿಸಿ ಮುಂದೆ ಲೋಕಸಭೆ ಚುನಾವಣೆಗೆ ಎಲ್ಲಾ ಮುಖಂಡರು ಕಾರ್ಯಕರ್ತ ರು ಸನ್ನದ್ಧರಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಅಗತ್ಯವಿದ್ದು ಇಂದಿನಿಂದಲೆ ಪಕ್ಷ ಸಂಘಟನೆಯಲ್ಲಿ ತೊಡಗಿಕೂಳ್ಳಿ ಎಂದರು.
ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾಗದಿದ್ದರೆ ರಾಜ್ಯದಲ್ಲಿ ಬರ ಕ್ಷಮದಲ್ಲಿ ಬಡವರ ಮನೆಯಲ್ಲಿ ಅನ್ನ ಬೆಯುತಿರಲಿಲ್ಲ, ನೆಮ್ಮದಿಯಿಂದಿರಲು ಆಗುತಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಕುರಿತು ಕಾರ್ಯಕರ್ತರು ಮುಖಂಡರ ಗಮನಕ್ಕೆ ತಂದರು.
ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಮಾತ ನಾಡಿ, ಕೆಪಿಸಿಸಿ ಆದೇಶದ ಪ್ರಕಾರ ಈ ಹಿಂದೆ ಬೇರೆ ಪಕ್ಷಕ್ಕೆ ಹೋದವರ ನ್ನು ಕರೆತರಲು ಆದೇಶವಿದ್ದು, ಆದೇಶದಂತೆ ಮುಂದೆ ಪಕ್ಷಕ್ಕೆ ಚ್ಯುತಿ ಬರದಂತೆ ಹಲವು ಮುಖಂಡರು ಕಾರ್ಯಕರ್ತರನ್ನು ಪಕ್ಷ ಸೇರ್ಪ ಡೆ ಮಾಡಲಾಗುತ್ತಿದೆ.ಟಿಕೆಟ್ ಸಿಗದವರು ಒಂದು ಪಕ್ಷವಾದರೇನು, ಇನ್ನೋಂದು ಪಕ್ಷಕ್ಕೆ ಹೋಗಿ ಟಿಕೆಟ್ ಗಿಟ್ಟಿಸಿಕೊಂಡು ಚುನಾವಣಗೆ ಸ್ಪರ್ಥಿಸುತ್ತಾರೆ. ಟಿಕೆಟ್ ಸಿಗಲಿಲ್ಲ ವೆಂದರೆ ಪಕ್ಷೇತರರಾಗಿ ಸ್ಪರ್ಧಿಸು ತ್ತಾರೆ. ಆದರೆ ಮುಖಂಡರು, ಕಾರ್ಯಕರ್ತರು ಭವಿಷ್ಯ ಮಾತ್ರ ನಾಯಕರಂತಿ ರುವುದಿಲ್ಲ ಆದ್ದರಿಂದ ಪಕ್ಷ ಉತ್ತಮ ಸ್ಥಾನ ಗೌರವ ನೀಡುತ್ತದೆ ಪಕ್ಷವನ್ನು ಯಾರು ಉಲ್ಲಂಘಿಸದೆ ಪಕ್ಷದ ನೆರಳಲ್ಲಿ ಬೆಳೆಯರಿ ಎಂದು ಕಿವಿ ಮಾತು ಹೇಳಿದರು.
ದೇಶ ಅಪಾಯದಲ್ಲಿದೆ ದೇಶ ರಕ್ಷಿಸುವುದು ಕಾಂಗ್ರೆಸ್ ಕಾರ್ಯ ಕರ್ತರ ಜವಾಬ್ದಾರಿಯಾಗಿದೆ ಮೋದಿಯಿಂದ ನಯ ಪೈಸೆ ಒಳಿತಾ ಗಿಲ್ಲ 70% ದೇಶ ಮಾರಟವಾಗಿದೆ ಖಾಸಗಿಕರಣವಾಗಿತ್ತಿದೆ. ಬಿಜೆಪಿ ಅವಧಿಯಲ್ಲಿ ದೇಶಕ್ಕೆ ಕಾಂಗ್ರೆಸ್ ಪಕ್ಷ ಮಾತ್ರ ರಕ್ಷಣೆ ನೀಡುವುದಕ್ಕೆ ಸಾಧ್ಯ ಎಂದರಲ್ಲದೆ ಮುಂದೆ ಬರುವ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ಗ್ಯಾರಂಟಿ ಯೋಜನೆಗಳು ಅಹಿಂದಕ್ಕೆ ಮಾತ್ರ ಸೀಮಿತವಲ್ಲ ಎಲ್ಲಾ ಬಡವರ್ಗದವರ ಪಾಲಿನ ದೇವರು ಸಿದ್ದರಾಮಯ್ಯ ಎಂದರು ಅಲ್ಲ ದೆ ಕಾಂಗ್ರೆಸ್ ಪಕ್ಷ ಬಿಟ್ಟು ಹೋದವರು 30- 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದವರು ಅವರ ಪಕ್ಷ ಸೇರ್ಪಡೆ ಹೊಸತನವಿಲ್ಲ ಎಂದರು. ಕಾರ್ಯಕರ್ತರಲ್ಲಿ ನಾಯಕರಲ್ಲಿ ಒಡಕಿದ್ದರೆ ಪಕ್ಷದ ಭವಿಷ್ಯ ಕ್ಕೆ ಕೊಡಲಿ ಪೆಟ್ಟು ಬೀಳದಂತೆ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಕೈ ಬಲ ಪಡಿಸಿಕೊಳ್ಳಬೇಕಿದೆ
ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನಕಾರ್ಯದರ್ಶಿ ಕೀರ್ತಿ ಕುಮಾರ್ ಮಾತನಾಡಿ,ಕಳೆದ ವಿಧಾನಸಭಾ ಕ್ಷೇತ್ರದಿಂದ ಯಾವು ದೋ ಕಾರಣದಿಂದ ಪಕ್ಷದಿಂದ ದೂರ ಉಳಿದಿದ್ದ ಮುಖಂಡರು ಕಾರ್ಯಕರ್ತರು ಸ್ವತಃ ಪಕ್ಷದ ಸಿದ್ದಾಂತಗಳು ಒಪ್ಪಿ ಬರುತ್ತಿದ್ದು ಪಕ್ಷ ಸೇರ್ಪಡೆ ಆಗುತ್ತಿರುವುದು ಹರ್ಷ ವ್ಯಕ್ತಪಡಿಸಿದರಲ್ಲದೆ ಲೋಕಸಭೆ ಚುನಾವಣೆಯ ಅಭ್ಯರ್ಥಿ ಯಾರಾದರೇನು ನಾವು ಅವರಿಗೆ ಶಕ್ತಿ ನೀಡುವ ಕೆಲಸವನ್ನು ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷ ಸಂಘಟಿಸಬೇಕು ಅಲ್ಲದೆ ಈ ಬಾರಿ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದೆ ಬರುತ್ತದೆ ಎಂದು ಭವಿಷ್ಯ ನುಡಿ ದರು.
ಇದೇ ವೇಳೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇ ಸ್ವಾಮಿ ಗೌಡ್ರು. ನಾಗರತ್ನಮ್ಮ ಮಲ್ಲೇಶಪ್ಪ.ಯು ಜಿ ಶಿವಕುಮಾರ್. ಮೊಬೈಲ್ ಮಂಜುನಾಥ್.ಜಮ್ಮಾಪುರ ರಂಗಪ್ಪ.ತಾನಜಿ ಗೂಸಾಯಿ.ಗಿರೀಶ್ ಒಡೆಯರ್.ಹಾಫೀಜ್ ಸೇರಿದಂತೆ 150 ಕ್ಕೂ ಹೆಚ್ಚು ಮುಖಂಡರು ಕಾರ್ಯ ಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡರು
ಜಗಳೂರು ತಾಲೂಕು ಎಸ್. ಸಿ ವಿಭಾಗದ ಅಧ್ಯಕ್ಷರನ್ನಾಗಿ ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ ಮಹೇಶ್ವರ ಪ್ಪ.ಬ್ಲಾಕ್ ಕಾಂಗ್ರೆಸ್ ಎಸ್ ಟಿ ವಿಭಾಗದ ಅಧ್ಯಕ್ಷ ಮಡ್ರ ಳ್ಳಿ ಗಿರೀಶ್. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ಗುರುಸಿದ್ದನ ಗೌಡ.ಕೆಚ್ಚನಹಳ್ಳಿ ಹರೀಶ್ ಗೌಡ. ಬ್ಲಾಕ್ ಕಾಂಗ್ರೆಸ್ ಜಂಟಿ ಕಾರ್ಯ ದರ್ಶಿ ರಮೇಶ್. ಯುವ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಮಕ್ ಸೂದ್.ಯುವ ಕಾಂಗ್ರೆಸ್ ಎಸ್.ಟಿ ಘಟಕ ಕಾರ್ಯದರ್ಶಿ ಕೆಳಗೂಟೆ ಬದ್ರಿಣ್ಣ. ಸೇರಿ ದಂತೆ ವಿಧದ ಘಟಕಗಳಿಗೆ ನೇಮಕಾತಿ ಆದೇಶ ಪತ್ರ ನೀಡಿದರು.
” ಮೊನ್ನೆ ನೆಡದ ಬಿಜೆಪಿ ಪಕ್ಷದ ಸಭೆಯಲ್ಲಿ ಯಾರೋ ಇಬ್ಬರು 1 ಲಕ್ಷ ಮತ ಹಾಕಿಸುವೆ ಎಂದು ಬಿಜೆಪಿ ರಾಜ್ಯ ನಾಯಕರಿಗೆ ತಿಳಿಸಿ ದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಬರದೆ ಹೋಗಿದ್ದರೆ ಇಬ್ಬರು ಶಾಸಕರಾಗುತ್ತಿರಲಿಲ್ಲ ಎಂದು ಹೆಸರೇಳದೆ ಮಾಜಿ ಶಾಸಕರನ್ನು ಮಾತಿನಲ್ಲಿಯೇ ಕೆ.ಪಿ ಪಾಲಯ್ಯ ಕುಟುಕಿದರು”
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಶೀರ್ ಅಹ ಮದ್,ಮಂಜುನಾಥ್,ಸಿ.ತಿಪ್ಪೇ ಸ್ವಾಮಿ.ಗುತ್ತಿದುರ್ಗ ರುದ್ರೇಶ್, ಪಲ್ಲಾಗಟ್ಟೆ ಶೇಖರಪ್ಪ. ಮಾಳಮ್ಮನಹಳ್ಳಿ ವೆಂಕಟೇಶ್.ಶಿವನಗೌಡ. ಓಮಣ್ಣ.ದೇವಿಕೆರೆ ಗುರು ಸಿದ್ದಪ್ಪ. ಪಟ್ಟಣ ಪಂಚಾಯಿತಿ ಸದಸ್ಯರಾ ದ ರವಿ ಕುಮಾರ್.ರಮೇಶ್ ರೆಡ್ಡಿ.ಮಹಮ್ಮದ್ ಆಲಿ.ವೀರೇಂದ್ರ ಪಾಟೀಲ್.ನರೇನಹಳ್ಳಿ ಕುಮಾರ್ ನಾಯ್ಕ್.ಮಾಜಿ ಪಟ್ಟಣ ಪಂಚಾ ಯತಿ ಅಧ್ಯಕ್ಷರಾದ ಮಂಜುನಾಥ್.ಕುಮಾರ್.ಗೊಲ್ಲರಹಟ್ಟಿ ರಮೇಶ್.ಮರೇನಹಳ್ಳಿ ಬಸವ ರಾಜು.ಮಹಮ್ಮದ್ ಗೌಸ್.ಸಿ.ಆರ್ ತಿಮ್ಮಣ್ಣ .ಹಟ್ಟಿ ತಿಪ್ಪೇಸ್ವಾಮಿ.ಮಾರುತಿ.ಗಿಡ್ಡನ ಕಟ್ಟೆ ತಿಪ್ಪೇಸ್ವಾಮಿ. ಅಮದ್ ಅಲಿ.ಕಣ್ವ ಕುಪ್ಪೆ ಲೋಕೇಶ್ ಹಲವು ಕಾಂಗ್ರೆಸ್ ಕಾರ್ಯ ಕರ್ತರು ಸಭೆಯಲ್ಲಿ ಪಾಲ್ಗೋಂಡಿದ್ದರು.
0 Today: 3