ಪ್ರಜಾ ನಾಯಕ ಸುದ್ದಿ ನವ ದೆಹಲಿ -: ದೆಹಲಿಯಲ್ಲಿ ನಡೆದಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತುಗಳು ಸಂಪೂರ್ಣ ಗೊoಡಿದ್ದು, ನಾಳೆ 24 ಸಚಿವರ ಪ್ರಮಾಣವಚನ ಸ್ವೀಕಾರ ನಡೆಯಲಿದೆ.
ಸಚಿವರ ಪಟ್ಟಿ ಅಂತಿಮಗೊoಡಿದ್ದರೂ ಖಾತೆ ಹಂಚಿಕೆಯ ಹಗ್ಗ ಜಗ್ಗಾಟ ಮುಂದುವರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಆಪ್ತರಿಗೆ ಪ್ರಬಲ ಖಾತೆಗಳನ್ನು ಕೊಡಿಸಲು ವರಿಷ್ಠರ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಖಾತೆ ಹಂಚಿಕೆಯ ಕಗ್ಗಂಟು ಸಂಜೆಯೊಳಗೆ ಬಗೆಹರಿಯಲಿದೆ ಎಂದು ಹೇಳಲಾಗಿದೆ. ಕಳೆದ 2 ದಿನಗಳಿಂದ ದೆಹಲಿಯಲ್ಲಿ ಕಾಂಗ್ರೆ ಸ್ ವರಿಷ್ಠರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರಂತರ ಸಭೆಗಳನ್ನು ನಡೆ ಸಿದ ಬಳಿಕ ನೂತನ ಸಚಿವರ ಪಟ್ಟಿ ಅಂತಿಮಗೊoಡಿದೆ.
ಸಂಜೆಯೊಳಗೆ ನೂತನ ಸಚಿವರ ಪಟ್ಟಿಯನ್ನು ಹೈಕಮಾಂಡ್ ಬಿಡು ಗಡೆ ಮಾಡಲಿದೆ. ಪೂರ್ಣ ಪ್ರಮಾಣದಲ್ಲಿ ಸಂಪುಟ ರಚಿಸಲು ವರಿ ಷ್ಠರು ಒಪ್ಪಿಗೆ ನೀಡಿದ್ದು, ಅದರಂತೆ ನಾಳೆ 24 ಸಚಿವರ ಪ್ರಮಾಣ ವಚನ ನಡೆಯಲಿದೆ. ನೂತನ ಸಚಿವರು ನಾಳೆ ರಾಜಭವನದ ಗಾಜಿನ ಮನೆಯಲ್ಲಿ ನಾಳೆ ಬೆಳಿಗ್ಗೆ 11.45ಕ್ಕೆ ನಡೆಯುವ ಕಾರ್ಯ ಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯಪಾಲ ಥಾವರ್ ಚಂದ್ಗೆಲ್ಹೋಟ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸುವರು.
ಈ ಮೊದಲು 20 ಸ್ಥಾನಗಳಷ್ಟೇ ಭರ್ತಿ ಮಾಡಿ, 4 ಸ್ಥಾನಗಳನ್ನು ಖಾಲಿಬಿಡುವ ತೀರ್ಮಾನ ಮಾಡಲಾಗಿತ್ತಾದರೂ ಸಚಿವ ಪಟ್ಟಕ್ಕೆ ಪೈಪೋಟಿ ಹೆಚ್ಚಿದ ಹಿನ್ನೆಲೆಯಲ್ಲಿ ಬಾಕಿ ಇರುವ ಎಲ್ಲ 24 ಸ್ಥಾನ ಗಳನ್ನು ಭರ್ತಿ ಮಾಡುವ ತೀರ್ಮಾನಕ್ಕೆ ಹೈಕಮಾಂಡ್ ಅಸ್ತು ಎಂದಿದೆ. ಪಟ್ಟಿ ಅಂತಿಮ, ಖಾತೆಗೆ ಜಟಾಪಟಿ ಸಚಿವರ ಪಟ್ಟಿ ಬಹುತೇಕ ಅಂತಿಮಗೊoಡಿದ್ದರೂ ಖಾತೆ ಹಂಚಿಕೆಯ ಸರ್ಕಸ್ ಮುಂದುವರೆದಿದ್ದು, ಪ್ರಬಲ ಖಾತೆಗಳಿಗಾಗಿ ಹಲವು ಹಿರಿಯ ಸಚಿವರು ಪಟ್ಟು ಹಿಡಿದಿದ್ದಾರೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮ ಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಆಪ್ತರಿಗೆ ಒಳ್ಳೆಯ ಖಾತೆಗಳನ್ನು ಕೊಡಿಸಲು ಮುಂದಾಗಿದ್ದಾರೆ
ಹಾಗಾಗಿ, ಖಾತೆ ಹಂಚಿಕೆ ಕಗ್ಗಂಟಾಗಿದ್ದು,ಸಂಜೆಯೊಳಗೆ ವರಿಷ್ಠರು ಖಾತೆ ಹಂಚಿಕೆ ಸರ್ಕಸ್ಗೂ ಮುಕ್ತಿ ನೀಡಲಿದ್ದು, ಎಲ್ಲವೂ ಸಂಜೆ ಯೊಳಗೆ ಬಗೆಹರಿಯಲಿದೆ ಎಂದು ಕಾಂಗ್ರೆಸ್ನ ಉನ್ನತ ಮೂಲಗಳು ಹೇಳಿವೆ.
ಹಿರಿಯರಿಗೆ ಸ್ಥಾನ ಇಲ್ಲ: ಸಚಿವ ಸಂಪುಟ ವಿಸ್ತರಣೆ ಸಂದರ್ಭದ ಲ್ಲಿ ಕೆಲ ಹಿರಿಯರಿಗೆ ಸಚಿವ ಸ್ಥಾನ ಕೈತಪ್ಪುವುದು ನಿಶ್ಚಿತವಾಗಿದ್ದು, ಹಿರಿಯ ಶಾಸಕರಾದ ಆರ್.ವಿ ದೇಶ್ಪಾಂಡೆ, ದಿನೇಶ್ಗುಂಡೂ ರಾವ್, ಅಪ್ಪಾಜಿ ನಾಡಗೌಡ,ಟಿ.ಬಿ. ಜಯಚಂದ್ರ,ಬಿ.ಕೆ. ಹರಿ ಪ್ರಸಾದ್ ಇವರುಗಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.
ಆದರೂ ಇವರುಗಳು ಸಚಿವ ಪಟ್ಟಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಸಂಪುಟದಲ್ಲಿ ಅವಕಾಶ ಸಿಗದ ಹಿರಿಯ ಶಾಸಕರಿಗೆ ಮುಂದೆ ಅವಕಾಶ ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದೆ.