ಬೆಂಗಳೂರು: ಮಾ.1ರೊಳಗೆ 7ನೇ ವೇತನ ಆಯೋಗ, ಹಳೆ ಪಿಂಚಣಿ ಯೋಜನೆ ಜಾರಿ ಮಾಡದಿದ್ರೆ ಅನಿರ್ದಿಷ್ಟಾವಧಿ ಕೆಲಸಕ್ಕೆ ಗೈರಾಗಿ ಮುಷ್ಕರಕ್ಕೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿದೆ.
2022ರ ಜುಲೈ ನಿಂದಲೇ ಶೇ 40ರಷ್ಟು ಫಿಟ್ಮೆಂಟ್ ನೀಡಬೇಕು, ಎನ್ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡಬೇಕು ಈ ಎರಡೂ ಬೇಡಿಕೆ ಈಡೇರಿಸದೇ ಇದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
7ನೇ ವೇತನ ಆಯೋಗದಿಂದ ಮಧ್ಯಂತರ ವರದಿ ಪಡೆದು, ಫಿಟ್ಮೆಂಟ್ ನೀಡಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.ಅನ್ಯ ರಾಜ್ಯಗಳಲ್ಲಿ ಜಾರಿ ಮಾಡಿದಂತೆ ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೆ ತರಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಈ ಎರಡೂ ಬೇಡಿಕೆ ಈಡೇರಿಸಲು ಏಳು ದಿನಗಳ ಸಮಯ ಇದೆ. ಬೇಡಿಕೆ ಈಡೇರದಿದ್ದರೆ ಎಲ್ಲ ಸರ್ಕಾರಿ ನೌಕರರು, ನಿಗಮ ಮತ್ತು ಮಂಡಳಿಗಳ ಹಾಗೂ ಅನುದಾನಿತ ಸಂಸ್ಥೆಯ ಎಲ್ಲ ನೌಕರರು ಕೆಲಸಕ್ಕೆ ಗೈರಾಗಲಿದ್ದಾರೆ.ಗೈರಾಗಲಿದ್ದಾರೆ. 7 ನೇ ವೇತನ ಆಯೋಗ ವರದಿಯನ್ನು ಕೇವಲ ಒಂದು ದಿನದಲ್ಲಿ ತರಿಸಿಕೊಂಡು ಜಾರಿ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಾಧ್ಯವಿದೆ. ಹೀಗಾಗಿ ನಾವು ಇನ್ನೂ ಏಳು ದಿನ ಕಾಯುತ್ತೇವೆ. ಮಾ.1 ನಂತರ ಎಲ್ಲಾ ಸರ್ಕಾರಿ ಕೆಲಸಕ್ಕೆ ಗೈರಾಗುತ್ತೇವೆ ಎಂದು ಗಡುವು ನೀಡಿದಾರೆ .