ಪ್ರಜಾ ನಾಯಕ ಸುದ್ದಿ ದಾವಣಗೆರೆ : ಸಾಮಾನ್ಯವಾಗಿ ದೊಡ್ಡ ಸಭೆ, ಸಮಾರಂಭ ಮುಗಿದ ಮೇಲೆ ಇಡೀ ವಾತಾವರಣ ಕಲುಶಿತ ಗೊಂಡಿರುತ್ತದೆ. ಅದನ್ನು ಸ್ವಚ್ಛ ಮಾಡಲು ಸಾಕಷ್ಟು ಪೌರ ಕಾರ್ಮಿಕ ರು ಬೇಕು..ಅದರಲ್ಲೂ ಎಂಜಲು ತಟ್ಟೆಘಿ, ಲೋಟ ಹೀಗೆ ಎಲ್ಲವನ್ನೂ ತೆಗೆಯಲು ಯಾರಿಗಾದರೂ ಒಂಚೂರು ಹಿಂಜರಿಕೆ ಯಾಗುತ್ತದೆ…ಆದರೆ ಬಿಜೆಪಿ ನಾಯಕರು ಮೋದಿ ಮಹಾಸಂಗಮ ಯಾತ್ರೆಯಲ್ಲಿ ಜನರು ಊಟ ಮಾಡಿ ಬಿಸಾಡಿದ್ದ ತಟ್ಟೆಗಳನ್ನು ಸ್ವಚ್ಛ ಮಾಡುವ ಮೂಲಕ ಮೋದಿ ಹೇಳಿದ ಮಾತುಗಳನ್ನು ಚಾಚು ತಪ್ಪದೇ ಕೆಲಸ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಹಾಗೂ ಅವರ ತಂಡ ಮಹಾಯಾತ್ರೆಗೆ ಬಂದಿದ್ದ ಜನರು ಬಿಸಾಡಿದ್ದ ಎಂಜಲು ತಟ್ಟೆ ಯನ್ನು ತಾವೇ ಭಾನುವಾರ ಸ್ವತಃ ಸ್ವಚ್ಛಗೊಳಿಸಿದರು. ಬೆಳ್ಳಂ ಬೆಳ್ಳಗ್ಗೆ ಮೋದಿ ಮಹಾಸಮಾವೇಶಕ್ಕೆ ಹೋದ ಬಿಜೆಪಿ ನಾಯಕರು ಊಟ ಮಾಡಿದ ತಟ್ಟೆಗಳನ್ನು ಸಂಗ್ರಹಿಸಿದರು. ಅಲ್ಲದೇ ಅವುಗಳು ಪರಿಸರಕ್ಕೆ ಧಕ್ಕೆಯಾಗಬಾರದೆಂದು ನಾಶಪಡಿಸಿದರು. ಈ ಮೂಲಕ ಮೋದಿ ವಾಕ್ಯವನ್ನು ಕ್ರಿಯೆ ಮೂಲಕ ಮಾಡಿ ತೋರಿಸಿದ ಕಾರಣ ಇತರರಿಗೂ ಮಾದರಿಯಾಗಿದ್ದಾರೆ.
ಸಮಾನ್ಯವಾಗಿ ಮನೆಯಲ್ಲಿ ಊಟ ಮಾಡಿದ ಎಂಜಲು ತಟ್ಟೆಯನ್ನು ತೆಗೆಯೋದು ಕಷ್ಟಘಿ, ಅಂತಹದ್ದರಲ್ಲಿ ಲಕ್ಷಾಂತರ ಜನರು ಬಿಸಾಡಿದ ತಟ್ಟೆ, ಲೋಟವನ್ನು ತೆಗೆದು ಈ ತಂಡ ಜನ ಮಾಸದಲ್ಲಿ ಉಳಿಯಿತು. ಈ ಮೂಲಕ ಪರಿಸರ ಕಾಳಜಿ ಜತೆ ಜನರ ಆರೋಗ್ಯ ಕಾಪಾಡುವಲ್ಲಿ ಈ ಕೆಲಸ ತೃಪ್ತಿ ತಂದಿದೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿಶ್ವನಾಥ್, ಶಿವಪ್ರಕಾಶ್ ಸೇರಿದಂತೆ ಇತರರು ಇದ್ದರು.