ಪ್ರಜಾ ನಾಯಕ ಸುದ್ದಿ ಬೆಂಗಳೂರು:-ಕಾoಗ್ರೆಸ್ನ ಜೋಡೆತ್ತುಗಳಾ ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸಲಿದ್ದು, ಈ ಇಬ್ಬರು ತಲಾ ಎರಡೂವರೆ ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗ ಲಿದ್ದಾರೆ. ಮೊದಲ ಅವಧಿಯ ಎರಡೂವರೆ ವರ್ಷಕ್ಕೆ ಸಿದ್ದ ರಾಮಯ್ಯ ಮುಖ್ಯಮಂತ್ರಿ ಯಾಗಲಿದ್ದು,
ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಕಾರ್ಯಾ ಭಾರ ನಿಭಾಯಿಸುವರು. ನೂತನ ಮುಖ್ಯಮಂತ್ರಿಯ ಆಯ್ಕೆ ಕಗ್ಗಂಟಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪಟ್ಟು ಸಡಿಲಿಸದೆ ನಾ ನೇ ಮುಖ್ಯಮಂತ್ರಿ ಎಂಬ ತಮ್ಮ ನಿಲುವನ್ನು ಸಡಿಲಿಸದೇ ಇದ್ದದ್ದು ಹೈಕಮಾಂಡ್ಗೆ ತಲೆನೋವು ತಂದಿತ್ತು. ಈ ಇಬ್ಬರನ್ನೂ ಸಮಾ ಧಾನಪಡಿಸಿ ಸರ್ವಸಮ್ಮತವಾದ ರಾಜಿ ಸೂತ್ರವನ್ನು ಹೈಕಮಾಂಡ್ ರೂಪಿಸಿ ಅದರಂತೆ ತಲಾ 30 ತಿಂಗಳ ಕಾಲ ಮುಖ್ಯಮಂತ್ರಿ ಹುದ್ದೆ ಯ ಅಧಿಕಾರ ಹಂಚಿಕೆಯ ತೀರ್ಮಾನವನ್ನು ಮಾಡಿದ್ದು, ಇದಕ್ಕೆ ಇಬ್ಬರು ನಾಯಕರು ಸಮ್ಮತಿಸಿರುವುದು ಮುಖ್ಯಮಂತ್ರಿ ಆಯ್ಕೆಯ ಪ್ರಹಸನಗಳಿಗೆ ತೆರೆ ಬಿದ್ದಂತಾಗಿದೆ.
ಮೊದಲ ಅವಧಿಗೆ ಸಿದ್ದು ಸಿಎಂ-ಡಿಕೆಶಿ ಡಿಸಿಎಂ ಹೈಕಮಾಂಡ್ನ ಸಂಧಾನ ಸೂತ್ರದಂತೆ ಮೊದಲ ಎರಡೂವರೆ ವರ್ಷಗಳ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದು, ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗುವರು. ಎರಡೂವರೆ ವರ್ಷಗಳ ನಂತರ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ರವರಿಗೆ ಪಟ್ಟ ಬಿಟ್ಟುಕೊಡು ವರು. ಕೊನೆಯ ಎರಡೂವರೆ ವರ್ಷಕ್ಕೆ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಯಾಗುವರು.
ಇಂದು ಶಾಸಕಾಂಗ ಸಭೆ ಅಧಿಕೃತ ಘೋಷಣೆ:- ಬೆಂಗಳೂರಿನಲ್ಲಿ ಇಂದು ಸಂಜೆ 7 ಗಂಟೆಗೆ ಕೆಪಿಸಿಸಿಯ ನೂತನ ಕಚೇರಿ ಇಂದಿರಾ ಭವನದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಹೈಕಮಾಂಡ್ನ ಸೂತ್ರದ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟು ಅಧಿಕಾರ ಹಂಚಿಕೆಯ ತೀರ್ಮಾನ ವನ್ನು ಅಧಿಕೃತ ವಾಗಿ ಪ್ರಕಟಿಸಿ ನಂತರ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದ ರಾಮಯ್ಯರವರನ್ನು ಆಯ್ಕೆ ಮಾಡುವ ತೀರ್ಮಾನವನ್ನು ಕೈ ಗೊಳ್ಳಲಾಗುತ್ತದೆ.
ಸೋನಿಯಾ ಮಧ್ಯ ಪ್ರವೇಶ ಎಲ್ಲವೂ ಸುಗಮ:- ಕಳೆದ 4 ದಿನ ಗಳಿಂದ ದೆಹಲಿಯಲ್ಲಿ ಮುಖ್ಯಮಂತ್ರಿ ಗಾದಿಯ ಆಯ್ಕೆಗೆ ಹಲವು ಸರಣಿ ಸಭೆಗಳು ನಡೆದವಾದರೂ ಒಮ್ಮತದ ತೀರ್ಮಾನ ಸಾಧ್ಯ ವಾಗದೆ ಮುಂದೇನು ಎಂಬ ಚಿಂತೆ ಹೈ ಕಮಾಂಡ್ನನ್ನು ಕಾಡಿತ್ತು. ಕೊನೆಗೆ ಸೋನಿಯಾಗಾಂಧಿ ಅವರು ರಂಗಪ್ರವೇಶಿಸಿ ಡಿ.ಕೆ. ಶಿವ ಕುಮಾರ್ ಹಾಗೂ ಸಿದ್ದರಾಮಯ್ಯ ರವರ ಜತೆ ನಿನ್ನೆ ತಡರಾತ್ರಿ ದೂರವಾಣಿಯಲ್ಲಿ ಮಾತನಾಡಿದ ನಂತರ ಈ ಇಬ್ಬರು ನಾಯಕರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗುವ ಮನಃಸ್ಥಿತಿಗೆ ಬಂದರು.
ಹೈಕಮಾಂಡ್ನ ಅಧಿಕಾರ ಹಂಚಿಕೆಯ ಸೂತ್ರಕ್ಕೂ ಒಲ್ಲದ ಮನಸ್ಸಿ ನಿಂದಲೇ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಗಾದಿಯ ಜಟಾಪಟಿಗೆ ತೆರೆ ಬಿದ್ದಂತಾಗಿದೆ.
ಉಪಾಹಾರ ಸಭೆ, ಒಮ್ಮತ:- ಹೈಕಮಾಂಡ್ನ ಸಂಧಾನ ಸೂತ್ರದ ಬಗ್ಗೆ ಇಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಗಳಾದ ಕೆ.ಸಿ. ವೇಣುಗೋಪಾಲ್ ದೆಹಲಿಯ ತಮ್ಮ ನಿವಾಸ ದಲ್ಲಿ ಉಪಾಹಾರ ಸಭೆಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರನ್ನು ಆಹ್ವಾನಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರoಣದೀಪ್ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಇಬ್ಬರ ನಡುವೆ ಒಮ್ಮತ ಮೂಡಿಸಿ ಹೈಕಮಾಂಡ್ ಸಂಧಾನಸೂತ್ರವನ್ನು ಮನವರಿಕೆ ಮಾಡಿಕೊಟ್ಟರು.
ಈ ಉಪಾಹಾರ ಸಭೆಯ ನಂತರ ಸಿದ್ದರಾಮಯ್ಯ-ಡಿಕೆಶಿ ಒಂದೇ ಕಾರಿನಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ನಿವಾಸಕ್ಕೆ ತೆರಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂಬ ಸಂದೇಶ ರವಾನಿಸಿದರು.
ಎರಡನೇ ಬಾರಿಗೆ ಸಿದ್ದು ಸಿಎಂ-:ಕಾಂಗ್ರೆಸ್ ಹೈಕಮಾಂಡ್ನ ತೀರ್ಮಾನಕ್ಕೆ ಮೊದಲ ಎರಡೂವರೆ ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಲಿರುವ ಸಿದ್ದರಾಮ ಯ್ಯರವರು 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಯಾಗಿ ಅಧಿಕಾರ ನಡೆಸಲಿದ್ದಾರೆ. ಈ ಮೊದಲು 2013ರ ಚುನಾವಣೆಯಲ್ಲಿ ಕಾಂಗ್ರೆ ಸ್ ಪಕ್ಷ ಬಹು ಮತ ಗಳಿಸಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯರವರು ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಅಧಿ ಕಾರದ ಗದ್ದುಗೆಯಲ್ಲಿದ್ದರು. ನಂತರ 2018ರಲ್ಲಿ ಕಾಂಗ್ರೆಸ್ ಪಕ್ಷ ಸೋತು ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದಾಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಈಗ 2023ರ ಚುನಾವಣೆ ಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿದ್ದು, ಈಗ ಸಿದ್ದರಾಮ ಯ್ಯ 2ನೇ ಬಾರಿ ಮುಖ್ಯಮಂತ್ರಿ ಗಾದಿ ಅಲಂಕರಿಸಿದ್ದಾರೆ.
ಡಿಕೆಶಿ ಮೊದಲ ಬಾರಿಗೆ ಡಿಸಿಎಂ:- ರಾಜ್ಯರಾಜಕಾರಣದಲ್ಲಿ 35 ವರ್ಷಕ್ಕೂ ಹೆಚ್ಚು ಕಾಲ ರಾಜಕಾರಣದಲ್ಲಿ ಸಕ್ರಿಯರಾಗಿ 8ನೇ ಬಾರಿಗೆ ವಿಧಾನಸಭೆಗೆ ಸತತವಾಗಿ ಆಯ್ಕೆಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿದ್ದಾರೆ. ಈ ಹಿಂದೆ ಎಸ್.ಎಂ ಕೃಷ್ಣ, ಸಿದ್ದರಾಮಯ್ಯ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ ಶಿವಕುಮಾರ್ ಸಚಿವರಾಗಿ ಪ್ರಬಲ ಖಾತೆಗಳನ್ನು ನಿಭಾಯಿಸಿ ದ್ದರು. ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷರಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನ ವನ್ನು ಗೆಲ್ಲಲು ಡಿ.ಕೆ ಶಿವಕುಮಾರ್ ಮಹತ್ವದ ಪಾತ್ರ ವಹಿಸಿದ್ದರು.
ಖರ್ಗೆ ಎದುರು ಒಗ್ಗಟ್ಟು ಪ್ರದರ್ಶನ-: ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಹಗ್ಗ ಜಗ್ಗಾಟ ಕೊನೆಗೂ ಪೂರ್ಣ ವಿರಾ ಮ ಬಿದ್ದಿದೆ. ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಒಗ್ಗಟ್ಟು ಪ್ರದರ್ಶಿಸಿದರು. ಕಾಂಗ್ರೆಸ್ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿವೇಣು ಗೋಪಾಲ್ ನಿವಾಸದಲ್ಲಿ ಮುಖಾಮುಖಿಯಾಗಿದ್ದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಉಪಹಾರ ಕೂಟ ಸಭೆಯ ಬಳಿಕ ನೇರವಾಗಿ ಒಂದೇ ಕಾರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ ಒಗ್ಗಟ್ಟು ಪ್ರದರ್ಶಿಸಿದರು.ಸಿದ್ದರಾಮಯ್ಯ ಮತ್ತು ಡಿಕೆ ಶಿವ ಕುಮಾರ್ ಅವರ ಕೈಯನ್ನು ಮೇಲ ಕ್ಕೆ ಎತ್ತುವ ಮೂಲಕ ಕಾಂಗ್ರೆ ಸ್ ಪಕ್ಷ ನಾವು ಒಂದು ಎನ್ನುವುದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಪ್ರದರ್ಶಿಸಿದ್ದಾರೆ
ರಾಹುಲ್ ಗಾಂಧಿ ಭೇಟಿ:- ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ ಅವರ ಸಹಕಾರ ಮತ್ತು ಆಶೀರ್ವಾದ ಪಡೆದ ನಂತರ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು ಇದೇ ವೇಳೆ ಚುನಾವಣೆ ಸಮಯದಲ್ಲಿ ರಾಜ್ಯದ ಜನರಿಗೆ ನೀಡಿದ ಐದು ಭರವಸೆಗಳು ಸೇರಿದಂತೆ ಎಲ್ಲ ಭರವಸೆಗಳನ್ನು ಈಡೇರಿಸಿ ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ