ಪ್ರಜಾ ನಾಯಕ ಸುದ್ದಿ ಜಗಳೂರು :- ಪ್ರಸಕ್ತ ಸಾಲಿನ ಜಿಲ್ಲೆಯಾ ದ್ಯಂತ ಶೇ.40ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ರೈತರು ಪರ್ಯಾಯ ತಳಿಯ ಬೆಳೆಗಳಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸಲಹೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಕೆಂಪೆಗೌಡ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ನೂತನ ಸರಕಾರದ ನಿರ್ದೇಶನದಂತೆ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜೂನ್ ಅಂತ್ಯದ ವೇಳೆಗೆ 173 ಮಿ.ಮೀ ವಾಡಿಕೆಯ ಮಳೆಯಾಗಬೇಕಿತ್ತು. ಆದರೆ 105ಮಿ.ಮೀ ಮಾತ್ರ ಮಳೆಬಿದ್ದಿದೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಜಮೀನಿನಲ್ಲಿ ಬಿತ್ತನೆಕಾರ್ಯ ವಿಳಂಬವಾಗಿದೆ.ಆದ್ದರಿಂದ ಶಿವಮೊಗ್ಗ ಸಂಶೋಧನಾ ಸಂಸ್ಥೆಯ ತಜ್ಞರೊಂದಿಗೆ ಸಭೆ ನಡೆಸಿ ನಂತರ ಯಾವ ತಳಿಯ ಪರ್ಯಾಯ ಬೆಳೆಗೆ ಸೂಕ್ತ ಎಂಬುದನ್ನು ರೈತರಿಗೆ ತಿಳಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 29,400ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕವಿದೆ. 40,000ಮೆಟ್ರಿಕ್ ಟನ್ ಸಂಗ್ರಹವಿದೆ.41 ,000 ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆಯಷ್ಟು ಶೇಖರಣೆಯಿದೆ.ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಯಾವುದೇ ಕೊರತೆಯಿಲ್ಲ ಎಂದು ಮಾಹಿತಿ ನೀಡಿದರು.
ಭದ್ರಾ ನೀರು 137.7 ಅಡಿ ಮಟ್ಟದಲ್ಲಿ ಹರಿಯತ್ತಿದೆ.ಯಾವುದೇ ಕುಡಿಯುವ ನೀರಿನ ಸಮಸ್ಯೆ,ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿಲ್ಲ.ತಾಲೂಕಿನ 57 ಕೆರೆ ತುಂಬಿಸುವ ಯೋಜನೆ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು.ಕೆರೆಗಳಿಗೆ ಶೀಘ್ರ ನೀರು ಹರಿಯಲಿವೆ.ಆದ್ದರಿಂದ ಯಾವುದೇ ಅನಾಹುತಗಳು ಜರುಗದಂತೆ ಮುಂಜಾಗ್ರತವಾಗಿ ಕೆರೆಗಳ ಸ್ಥಿತಿಗತಿ ಪರಿಶೀಲನೆಗೆ ತಹಶೀಲ್ದಾರ್ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪ್ರಕೃತಿ ಹಾನಿಗೆ ಪರಿಹಾರ:- ಜಿಲ್ಲೆಯಲ್ಲಿ ಮೇ.20 ರಂದು ಸುರಿದ ಆನೇಕಲ್ಲು ಸಹಿತ ಮಳೆಗೆ 800 ಹೆಕ್ಟರ್ ಪ್ರದೇಶದ ಜಮೀನು ಹಾನಿಗೊಳಗಾಗಿತ್ತು.ಈಗಾಗಲೆ ಪರಿಹಾರ ಒದಗಿಸಲಾಗಿದೆ. ತಾಲೂಕಿನ ಅಣಬೂರು ಗ್ರಾಮದಲ್ಲಿ ಸಿಡಿಲು ಬಡಿದ ಸಾವನ್ನಪ್ಪಿದ ಇಬ್ಬರು ಯುವಕರಿಗೆ ಹಾಗೂ ಎರಡು ಜಾನುವಾರುಗಳಿಗೆ ಪರಿಹಾರ ನೀಡಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮು ದಾಯದ ಮುಖಂಡರಾದ ಕುರಿ ಜಯಣ್ಣ ಇವರು ಮಾನ್ಯ ಜಿಲ್ಲಾ ಧಿಕಾರಿಗಳಿಗೆ ಹೂವಿನ ಹಾರ ಮತ್ತು ಶಾಲು ಹಾಕಿ ಸನ್ಮಾನಿಸಿದರು ನಮ್ಮ ಸಮುದಾಯದ ಬಹುದಿನಗಳ ನಿವೇಶನದ ಬೇಡಿಕೆಯನ್ನು ಜಿಲ್ಲಾಧಿಕಾರಿಗಳಾದ ಶಿವಾನಂದ ಕಾಪಶಿ ಸಾಹೇಬ್ರು ಹಾಗೂ ತಹಸಿಲ್ದಾರ್ ಸಂತೋಷ್ ಕುಮಾರ್. ಸಮಾಜ ಕಲ್ಯಾಣ ಇಲಾಖೆ ಯ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪ ಅವರು ನಮಗೆ ನಿವೇಶನ ಕೊಡಿಸುವಲ್ಲಿ ಸರ್ಕಾರದ ಮಟ್ಟದಲ್ಲಿ ಬಹಳಷ್ಟು ಶ್ರಮ ಹಾಕಿ ನಮಗೆ ನ್ಯಾಯ ಕೊಡಿಸಿದಂತಾಗಿದೆ ಎಂದು ಹೇಳಿದರು
ಇದೇ ವೇಳೆ ಪಟ್ಟಣ ಪಂಚಾಯಿತಿ ಕಾರ್ಯಾಲಯ,ಬಿಳಿಚೋಡು ನಾಡಕಛೇರಿ ಕಟ್ಟಡ ಕಾಮಗಾರಿ,ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಕುರಿತು ಸಮಾಲೋಚನಾ ಸಭೆ ನಡೆಸಿದರು.
ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್,ಸಮಾಜ ಕಲ್ಯಾಣ ಇಲಾಖೆಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ತೋಟ ಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ,ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಸಾಧಿಕ್ ವುಲ್ಲಾ,ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಅಸ್ಮಾ,ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.