ಪ್ರಜಾ ನಾಯಕ ಸುದ್ದಿ ಜಗಳೂರು :- ಬಿಜೆಪಿ ಪಕ್ಷದ ಆಡಳಿತ ದಿಂದ ಸಂವಿಧಾನ ಪ್ರಜಾಪ್ರಭುತ್ವಕ್ಕೆ ದಕ್ಕೆ ಉಂಟಾಗಿದೆ. ಸಂವಿಧಾನ,ಸಾಮಾಜಿಕ ನ್ಯಾಯದಮೇಲೆ ನಂಬಿಕೆಯಿಟ್ಟವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಜಗಳೂರು ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು ಬಿಜೆಪಿ ಪಕ್ಷದಿಂದ ಸಂವಿಧಾನದ ಒಂದೂ ಹೇಳಿಕೆಗಳಿಲ್ಲ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಧರ್ಮಾತೀತ,ಜಾತ್ಯಾತೀತ ಸಮಾನತೆಯ ವಿರುದ್ದ ಸಂಘ ಪರಿವಾರವಿದೆ. ವಿವೇಕಾನಂದರ ಹೇಳಿಕೆಯಂತೆ ಪುರೋಹಿತ ಶಾಹಿ,ಮನುವಾದಿಗಳನ್ನು ಬೆಂಬಲಿಸುವವರಿಂದ ದೇಶಕ್ಕೆ ಶಾಪ ಎಂದಿದ್ದಾರೆ ಎಂದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಶೇ.17.15 ಪರಿಶಿಷ್ಟ ವರ್ಗ 6.95 ಸೇರಿ ಶೇ.24.1 ರಷ್ಟು ಪರಿಶಿಷ್ಠ ಸಮುದಾಯದವರು ವಾಸ ವಾಗಿದ್ದಾರೆ. ನಾನು ಮುಖ್ಯಮಂತ್ರಿಯಾದ ನಂತರ ವಿವಿಧ ಸಮುದಾಯಗಳ ಜನ ಸಂಖ್ಯೆಗಳಿಗನು ಗುಣವಾಗಿ ಎಸ್.ಇ.ಪಿ ಟಿ.ಎಸ್.ಪಿ ಕಾನೂನು ಜಾರಿಗೊಳಿಸಿದೆ.ಆದರೆ ಬಿಜೆಪಿ ಯವರು ದೇಶದ ಯಾವ ರಾಜ್ಯದಲ್ಲಿ ಪರಿಶಿಷ್ಠ ಸಮುದಾಯದ ಪರ ಏಕೆ ಕಾನೂನು ಜಾರಿಗೊಳಿಸಿಲ್ಲ ಹಾಗಾದರೆ ಸಮುದಾಯ ದವರು ಏಕೆ ಬಿಜೆಪಿಗೆ ಮತನೀಡಬೇಕು ಎಂದು ಪ್ರಶ್ನಿಸಿದರು.
ಪ್ರಧಾನಿ ಅವರ ಸಬ್ ಕಾಸಾಥ್ ಸಬ್ ಕಾ ವಿಕಾಸ್ ಎಂದು ಹೇಳು ವವರು.ಶೋಷಿತರಿಗೆ ಸಾಮಾಜಿಕ ನ್ಯಾಯ ಸಿಕ್ಕಿದೆನಾ? ಬಿಜೆಪಿ ಪಕ್ಷದ ಆಡಳಿತದಲ್ಲಿ 5 ವರ್ಷದಲ್ಲಿ ಪರಿಶಿಷ್ಠ ಸಮುದಾಯದವರಿಗೆ 27 ಸಾವಿರ ಕೋಟಿ ಮಾತ್ರ ಆದರೆ ನಮ್ಮ ಕಾಂಗ್ರೆಸ್ ಆಡಳಿತಾವಧಿ ಯಲ್ಲಿ 88ಸಾವಿರ ಕೋಟಿ ಅನುದಾನ.ಇದು ರಾಜಕೀಯ ಇಚ್ಛಾ ಶಕ್ತಿ ಬದ್ದತೆ ಅಗತ್ಯ ಎಂದುರು
ಬಸವರಾಜ್ ಬೊಮ್ಮಾಯಿ ಅವರ ಶೇ.40 ಪರ್ಸಂಟೇಜ್ ಸರಕಾರ ಎಂಬುದು ಗುತ್ತಿಗೆದಾರರು ನೊಂದು ಹೇಳಿದ ಮಾತು.ಪಿ.ಎಸ್.ಐ ನೇಮಕಾತಿ ಲಂಚ ಪ್ರಕರಣ,ಭ್ರಷ್ಟಾಚಾರದ ಕುರಿತು ಅನುದಾನ ರಹಿತ ಸಂಸ್ಥೆಗಳ ಅಧ್ಯಕ್ಷ ಹೇಳಿಕೆ ಸುಳ್ಳಾ? ಮಾಡಾಳ್ ವಿರುಪಾಕ್ಷಪ್ಪ ನವರ ಪುತ್ರನ ಲೋಕಾಯುಕ್ತರಿಗೆ ಸಿಕ್ಕಿರುವುದಕ್ಕೆ ಸಾಕ್ಷಿಬೇಕಾ? ಹಾಗಾದರೆ ತಂದೆ ಶಾಸಕ ಹಾಗೂ ಸಚಿವರು ಎಷ್ಟು ಪಡೆದಿರ ಬಹುದು ಇದನ್ನು ಮನಗಾಣಬೇಕು.7 ಕೆಜಿ ಅಕ್ಕಿ ವಿತರಣೆ ಇಳಿಕೆಯನ್ನು ಯಡಿಯೂರಪ್ಪನವರಿಗೆ ಪ್ರಶ್ನಿಸಿದರೆ ಕೋವಿಡ್ ನೆಪ ಹೇಳಿದರು.ಅಲ್ಲದೆ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ.ಇಂತಹವರಿಂದ ರಾಜ್ಯದ ಉಳಿವು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಗಳೂರಿಗೆ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ 15 ಸಾವಿರ ಮನೆಗಳನ್ನು ನೀಡಿದ್ದೆವು.ಅಲ್ಲದೆ ಬಿಜೆಪಿ ಆಡಳಿತ ಸರಕಾರ ನಾವು ಮಂಜೂರು ಮಾಡಿದ ಕಾಮಗಾರಿಗಳ ಉದ್ಘಾಟನೆಗೆ ಸೀಮಿತ ವಾಗಿದ್ದಾರೆ ಇಂದಿರಾ ಕ್ಯಾಂಟಿನ್ ಮುಚ್ವಿದ್ದಾರೆ ಮಿಸ್ಟರ್ ರಾಮಚಂದ್ರ ಎಲ್ಲಿದ್ದೀಯಾ ಇಂದಿರಾ ಕ್ಯಾಂಟಿನ್ ಎಲ್ಲಪ್ಪ ಎಂದು ಲೇವಡಿ ಮಾಡಿದರು.
ಪಕ್ಷದಲ್ಲಿ ಆಕಾಂಕ್ಷಿಗಳಾಗುವುದು ತಪ್ಪಲ್ಲ ಹೈಕಮಾಂಡ್ ನವರು ಟಿಕೇಟ್ ಕೊಟ್ಟ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದು ಪ್ರಮುಖ ವಾಗಿದೆ.
” ಜಗಳೂರು ಕ್ಷೇತ್ರವನ್ನು ಮೂರು ಬಾರಿ ಸಮೀಕ್ಷೆ ನಡೆಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಯಾರ ಪರ ವರದಿ ಆಗಮಿಸುತ್ತಿದೆಯೋ ಅವರಿಗೆ ಟಿಕೇಟ್ ಖಚಿತ ಎಲ್ಲ ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟಿ ನಿಂದ ಬಿಜೆಪಿ ಹಾಲಿ ಶಾಸಕರನ್ನು ಸೋಲಿಸಿ ಎಂದು ಕರೆ ನೀಡಿದರು.”
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮಾತನಾಡಿ,ಬೆಳಗಾಂ ನಿಂದ ಉದ್ಘಾಟನೆಯಾದ ಪ್ರಜಾಧ್ವನಿ ಕಾರ್ಯಕ್ರಮ ವಿವಿಧ ಜಿಲ್ಲೆ ಗಳಲ್ಲಿ ಜನತೆಯ ಯಶಸ್ವಿ ಬೆಂಬಲದಿಂದ ತಮ್ಮ ಕ್ಷೇತ್ರದಲ್ಲಿದೆ.ಪ್ರತಿ ಜಿಲ್ಲೆಯಲ್ಲಿಯೂ ಇಂದಿನ ಕಾರ್ಯಕ್ರಮ ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಬಹುಮತದಿಂದ ಗೆಲುವಿಗೆ ಕೈಗನ್ನಡಿ ಯಾಗಿದೆ. ದಾವಣಗೆರೆ ಜಿಲ್ಲೆಯ 7 ಕ್ಷೇತ್ರ ಗಳಲ್ಲೂ ಕಾಂಗ್ರೆಸ್ ಪಕ್ಷದ ಜಯಭೇರಿ ನಿಶ್ಚಿತ .ಕಾಂಗ್ರೆಸ್ ಪಕ್ಷದವರು ಕೇವಲ ಅಧಿಕಾರಕ್ಕಾಗಿ ಮಾತ್ರವಲ್ಲ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಕಲ್ಪಿಸುವ ಹಾಗೂ ದೇಶಕ್ಕಾಗಿ ತ್ಯಾಗ ಬಲಿದಾನದ ಪ್ರತೀಕದ ಸಿದ್ದಾಂತವಿದೆ .ದೇಶದಲ್ಲಿ ಭ್ರಷ್ಟಾಚಾರದ ಕೂಪದಲ್ಲಿರುವ ಬಿಜೆಪಿಗೆ ಯಾವುದೇ ಸಿದ್ದಾಂತವಿಲ್ಲ,ಜನವಿರೋಧಿ ನೀತಿಗಳ ಜಾರಿಗೊಳಿಸಿದ ಫಲವಾಗಿ ಜನಸಂಕಲ್ಪಯಾತ್ರೆನಾ? ಎಂದು ಪ್ರಶ್ನಿಸಿದ ಅವರು,ಅಮಿತ್ ಷಾ,ಮೋದಿ ನೂರು ಬಾರಿ ಕರ್ನಾಟಕಕ್ಕೆ ಆಗಮಿಸಿದರೂ ಬಿಜೆಪಿ ಸೋಲು ಖಚಿತ,ಅಳಿ ತಪ್ಪಿದ ಡಂಬಲ್ ಇಂಜಿನ್ ಸರಕಾರ ಕಿತ್ತೊಗೆಯಲು ಜನ ಸಂಕಲ್ಪಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಅಧಿಕ ಜನಸಂಖ್ಯೆ ಬೆಂಬಲ ವ್ಯಕ್ತ ಪಡಿಸಿದ್ದು.ಕಾಂಗ್ರೆಸ್ ಅಲೆ ಬೀಸಿದೆ.ಜಿಲ್ಲೆಯ ಪ್ರತಿ ಕ್ಷೇತ್ರ ಗೆಲುವು ಸಾಧಿಸಲು ಉತ್ತಮ ಅಭ್ಯರ್ಥಿಗಳಿಗೆ ಟಿಕೇಟ್ ಅಗತ್ಯ ವಿದೆ . ಕಾಂಗ್ರೆಸ್ ಸೋಲಿಗೆ ಕಾರಣ ಕಾಂಗ್ರೆಸ್ ಪಕ್ಷದವರಾಗಿದ್ದು. ಟಿಕೇಟ್ ಸಿಗದಿದ್ದವರು ಬೇಸರವಾಗದೆ.ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಕೈಜೋಡಿಸಬೇಕು ಎಂದು ಆಕಾಂಕ್ಷಿಗಳಿಂದ ವಾಗ್ದಾನ ಪಡೆದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ನಾನು ಶಾಸಕ ನಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ₹3330 ಕೋಟಿ ಅನುದಾನದಲ್ಲಿ ವಿಧಾನ ಸಭಾ ಕ್ಷೇತ್ರ ಅಪ ರೂಪದ ಕೊಂಡಕುರಿ ನಾಡು ಏಷ್ಯಾ ಖಂಡದಲ್ಲಿ ವನ್ಯಜೀವಿ ಧಾಮವಾಗಿದೆ.ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆ.ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ 57 ಕೆರೆ ತುಂಬಿಸುವ ಯೋಜನೆಗೆ ಸಿರಿಗೆರೆ ಶ್ರೀ ಗಳ ಆಶೀರ್ವಾದ ತರಳಬಾಳು ಹುಣ್ಣಿಮೆ ಸಂದರ್ಭ ದಲ್ಲಿ ₹ 250 ಕೋಟಿ ಬಜೆಟ್ ನಲ್ಲಿ ಮೀಸಲಿಟ್ಟಿದ್ದು ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಎಂಬುದನ್ನು ನಾವು ಮರೆಯ ಬಾರದು. ಜಗಳೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಿರ ಬಹುದು ಆದರೆ ನಾವೆಲ್ಲರೂ ಒಂದೇ ಕುಟುಂಬದವರಾಗಿದ್ದು ಯಾರಿಗೆ ಟಿಕೇಟ್ ಸಿಗಲಿ.ಮುಂದಿನ ಭವಿಷ್ಯಕ್ಕಾಗಿ ವೈಮನಸ್ಸು ತೊರೆದು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸ ಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯದ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,ದೇಶದ ಸುಭೀಕ್ಷೆಗೆ ಕಾಂಗ್ರೆಸ್ ಪಕ್ಷದ ಆಡಳಿತ ಅಗತ್ಯವಿದೆ .ಜಗಳೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿರುವ 6 ಜನರಲ್ಲಿ ನಾನೊಬ್ಬನಾಗಿ ಅರ್ಜಿಸಲ್ಲಿಸಿರುವೆ ವರಿಷ್ಠರ ನಿರ್ಧಾರಕ್ಕೆ ಬದ್ದನಾಗಿರುವೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತನಾಗಿ ದಶಕಗಳಿಂದ ಸೇವೆ ಪರಿಗಣಿಸಿ ಅನ್ಯಾಯವಾಗದಂತೆ ನನಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ನಂತರ ಚಿಕ್ಕಮನಟ್ಟಿ ಬಿ ದೇವೇಂದ್ರಪ್ಪ ಮಾತನಾಡಿ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಐದು ಜನ ಅಭ್ಯರ್ಥಿಗಳಿದ್ದೇವೆ ಈ ಐದು ಜನರಲ್ಲಿ ಯಾರಿಗೂ ಆದರೂ ಟಿಕೆಟ್ ಕೊಟ್ಟರೆ ನಾವು ದುಡಿಯಲು ಸದಾ ಸಿದ್ದರಿದ್ದೇವೆ ನಮ್ಮ ಕಾಂಗ್ರೆಸ್ ಪಕ್ಷ 2023ರಲ್ಲಿ ಅಧಿಕಾರಕ್ಕೆ ಬಂದರೆ ಮೂರು ಪ್ರಮುಖ ಯೋಜನೆಗಳಾದ ಪ್ರತಿ ಮನೆಗೆ 100 ಯೂನಿಟ್ ವಿದ್ಯುತ್ ಉಚಿತ .ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿ ಉಚಿತವಾಗಿ ಕೊಡಲು ನಮ್ಮ ಸರ್ಕಾರ ಈಗಾಗಲೇ ಗ್ಯಾರಂಟಿ ಕೊಡುವ ಮುಖಾಂತರ ಘೋಷಿಸಿದೆ ಅದರಂತೆ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ನೀವು ಮತ ಹಾಕುವ ಮೂಲಕ ಆಶೀರ್ವಾದ ಮಾಡಬೇಕು ತಿಳಿಸಿದರು
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ವಕ್ತಾರ ಡಿ.ಬಸವರಾಜ್, ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಸಗೋಡು ಜಯಂಸಿಂಹ,ಪ್ರಕಾಶ್ ರಾಥೋಡ್,ಜಯದೇವ ನಾಯ್ಕ,ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ,ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್,ಯುವ ಕಾಂಗ್ರೆಸ್ ನ ರಕ್ಷಾ ರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಬಸವಪುರ ರವಿಚಂದ್ರ ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಲೊಕೇಶ್,ತಿಪ್ಪೇಸ್ವಾಮಿ ಗೌಡ,ಯು ಜಿ ಶಿವಕುಮಾರ್ ,ಬೈರೇಶ್,ಓಮಣ್ಣ.ಹನುಮಂತಪ್ಪ, ಶಿವಕುಮಾರ್ ಸ್ವಾಮಿ. ಕರಿಬಸನಗೌಡ ,ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.