ಪ್ರಜಾ ನಾಯಕ ಸುದ್ದಿ ಬೆಂಗಳೂರು: ರಾಜ್ಯದ ನೂತನ ಮುಖ್ಯ ಮಂತ್ರಿಯಾಗಲಿರುವ ಸಿದ್ದರಾಮಯ್ಯ ಅವರಿಗೂ 13ನೇ ನಂಬರ್ ಗೂ ತುಂಬಾ ನಂಟಿದೆ.
ಅಂದ ಹಾಗೆ ಸಿದ್ದರಾಮಯ್ಯ ಅವರು 2013, ಮೇ 13ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ದ್ದರು. ಪೂರ್ಣಾವಧಿ ಅಧಿಕಾರವನ್ನೂ ಪೂರೈಸಿದ್ದರು. ಸಿದ್ದರಾಮ ಯ್ಯ ಈವರೆಗೆ 13 ಬಜೆಟ್ ಮಂಡಿಸಿದ್ದಾರೆ.
ಇದೀಗ ಕಳೆದ ಮೇ 10ರಂದು ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮೇ13ರಂದು ನಡೆದು ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಗೆದ್ದು, ಪ್ರಚಂಡ ಬಹುಮತ ಗಳಿಸಿದೆ.
ಎರಡನೇ ಬಾರಿಗೆ ಅವರು ಇದೇ 20ರಂದು ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ಕಳೆದ ಮೇ 13ರಂದು ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ
0 Today: 2