ಪ್ರಜಾ ನಾಯಕ ಸುದ್ದಿ ಬೆಂಗಳೂರು :- ಮುಖ್ಯಮಂತ್ರಿ ಸಿದ್ದರಾಮ ಯ್ಯರವರು ತಮ್ಮ ಸಚಿವಸಂಪುಟಕ್ಕೆ 24 ಮಂದಿ ಸಚಿವರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಂಪುಟ ವಿಸ್ತರಿಸಿದ್ದು, ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದಿದೆ. ರಾಜ ಭವನದ ಗಾಜಿನ ಮನೆಯಲ್ಲಿ ಇಂದು ಬೆಳಿಗ್ಗೆ ನಡೆದ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆ ಯ ಪ್ರತಿಜ್ಞೆಯನ್ನು ಬೋಧಿಸಿದರು.
ಇಂದು ಸಚಿವರಾಗಿ ಹೆಚ್.ಕೆ ಪಾಟೀಲ್, ಕೃಷ್ಣಭೈರೇಗೌಡ, ಎನ್. ಚೆಲುವರಾಯ ಸ್ವಾಮಿ, ಕೆ. ವೆಂಟೇಶ್, ಡಾ. ಹೆಚ್.ಸಿ ಮಹದೇವ ಪ್ಪ,ಈಶ್ವರ ಖಂಡ್ರೆ, ಕೆ.ಎನ್ ರಾಜಣ್ಣ, ದಿನೇಶ್ ಗುಂಡೂರಾವ್, ಶರಣ ಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್, ಆರ್.ಬಿ ತಿಮ್ಮಾಪುರ, ಎಸ್.ಎಸ್ ಮಲ್ಲಿಕಾರ್ಜುನ, ಶಿವರಾಜ ತಂಗಡಗಿ, ಡಾ. ಶರಣ್ ಪ್ರಕಾಶ್ ಪಾಟೀಲ್, ಮಂಕಾಳುವೈದ್ಯ, ಲಕ್ಷ್ಮಿ ಆರ್. ಹೆಬ್ಬಾಳ್ಕರ್, ರಹೀಂಖಾನ್, ಡಿ. ಸುಧಾಕರ್, ಸಂತೋಷ್ ಲಾಡ್, ಎನ್. ಎಸ್ ಬೋಸರಾಜು, ಭೈರತಿಸುರೇಶ್, ಮಧುಬಂಗಾರಪ್ಪ, ಡಾ. ಎಂ.ಸಿ ಸುಧಾಕರ್, ಬಿ.ನಾಗೇಂದ್ರ ಇವರುಗಳು ಪ್ರಮಾಣ ವಚನ ಸ್ವೀಕರಿಸಿದರು. ಎಲ್ಲ24 ಮಂದಿ ನೂತನ ಸಚಿವರು ಸಂಪುಟ ದರ್ಜೆ ಸಚಿವರಾಗಿದ್ದಾರೆ,
ಕಳೆದ ಶನಿವಾರ ಮೇ 20ರಂದು ಮುಖ್ಯಮಂತ್ರಿಯಾಗಿ ಸಿದ್ದರಾಮ ಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆಶಿವಕುಮಾರ್ ಇಂದು 24 ಸಚಿವರು ಪದಗ್ರಹಣದ ಮೂಲಕ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿದೆ. ನೂತನ ಸಚಿವರ ಪದಗ್ರಹಣ ಕಾರ್ಯ ಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವಸಂಪುಟದ ಸದಸ್ಯರುಗಳು, ಶಾಸಕ ರುಗಳು, ಸಂಸದರು ಉಪಸ್ಥಿತರಿದ್ದರು.
ರಾಜ ಭವನದ ಒಳಗಡೆ ಜನ ಜಾತ್ರೆ:- ನೂತನ ಸಚಿವರ ಪದ ಗ್ರಹಣ ನಡೆದ ರಾಜಭವನದ ಒಳಗೆ ಪಾಸಿದ್ದವರಿಗಷ್ಟೇ ಪ್ರವೇಶಾ ವಕಾಶ ನೀಡಲಾಗಿತ್ತು. ಹಾಗಾಗಿ,ರಾಜಭವನದ ಹೊರಗೆ ಜನ ಜಾತ್ರೆಯೇ ಸೇರಿದ್ದು, ಕಾಂಗ್ರೆಸ್ ಪಕ್ಷದ ಪರವಾಗಿ ಜೈ ಕಾರದ ಘೋಷಣೆಗಳು ಮುಗಿಲು ಮುಟ್ಟಿದ್ದವು.ರಾಜಭವನದ ಹೊರಗಿನ ರಸ್ತೆಯಲ್ಲಿ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಿ ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಿಸಲು ಅನುಕೂಲ ಮಾಡಿಕೊಡಲಾಯಿ ತು. ರಾಜಭವನ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
” ಸಚಿವ ಸಂಪುಟದ ಎಲ್ಲ ಸಚಿವರಿಗೆ ಇಂದು ಸಂಜೆ ಇಲ್ಲ ನಾಳೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಹೇಳಿದರು. ದೇಶದ ದಿವಂಗತ ಪ್ರಧಾನಿ ಜವಹರ ಲಾಲ್ ನೆಹರೂರವರ ಪುಣ್ಯಸ್ಮರಣೆಯ ಅಂಗವಾಗಿ ವಿಧಾನಸೌಧ ದ ಮುಂಭಾಗದಲ್ಲಿರುವ ಅವರಪ್ರತಿಮೆಗೆ ಪುಷ್ಪ ನನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಚಿವರು ಗಳಿಗೆ ಇಂದು ಸಂಜೆ ಇಲ್ಲವೇ ನಾಳೆ ಖಾತೆ ಹಂಚಿಕೆ ಮಾಡುತ್ತೇನೆ ಎಂದರು. ಅಸಮಾಧಾನ ಇಲ್ಲ ಸಚಿವ ಸಂಪುಟದಲ್ಲಿ ಸ್ಥಾನ ಸಿಗ ದೇ ಇದ್ದುದಕ್ಕೆ ಯಾವಸಚಿವರು ನನ್ನ ಬಳಿ ಅಸಮಾಧಾನ ಹೊರ ಹಾಕಿಲ್ಲ. ಯಾರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕೇಳಿ ನೋಡೋಣ ಎಂದು ಮಾಧ್ಯಮದವರಿಗೆ ಮರುಪ್ರಶ್ನೆ ಹಾಕಿದರು. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಅವರನ್ನು ಮುಂದಿನ ದಿನಗಳಲ್ಲಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳೋಣ ಎಂಬ ಪ್ರಶ್ನೆಗೆ ನೋಡೋಣ ಎಂದಷ್ಟೇ ಉತ್ತರಿಸಿದರು.”