ಜಗಳೂರು/ಬೆಂಗಳೂರು ಸುದ್ದಿ:- ನಂಜುoಡಪ್ಪ ವರದಿ ಅನುಸಾರ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಜಗಳೂರು ವಿಧಾನ ಸಭಾ ಕ್ಷೇತ್ರದ ನೀರಾವರಿ ಅಭಿವೃದ್ಧಿಗೆ 640 ಕೋಟಿ ವೆಚ್ಚದ 57 ಕೆರೆ ತುಂಬಿಸುವ ಯೋಜನೆ ವಿಳಂಬವಾಗುತ್ತಿದೆ ಎಂದು ಸದಸನದಲ್ಲಿ ಗುರುವಾರ ಶಾಸಕ ಬಿ.ದೇವೇಂದ್ರಪ್ಪ ಪ್ರಸ್ತಾಪ ಮಾಡಿದರು.
ರಾಜ್ಯಪಾಲರ ಭಾಷದ ಮೇಲಿನ ವಂದನಾ ನಿರ್ಣಯದ ಚರ್ಚೆ ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಜಗಳೂರು ವಿಧಾನ ಸಭಾ ಕ್ಷೇತ್ರದ 224 ಕ್ಷೇತ್ರಗಳಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರ ವಾಗಿದೆ. ಯಾವುದೇ ನದಿಮೂಲಗಳಿಲ್ಲ. ಮಳೆಯನ್ನೇ ಆಶ್ರಯ ವನ್ನು ಇಟ್ಟುಕೊಂಡಿದೆ. ಇಂತಹ ಸಂದರ್ಭದಲ್ಲಿ 2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ರವರು ಕ್ಷೇತ್ರದ ಅಭಿವೃದ್ಧಿ ಗೆ ಸಿರಿಗೆರೆ ಜಗದ್ಗುರುಗಳಾದ ಡಾ ಶಿವಮೂರ್ತಿಶಿವಾಚಾರ್ಯ ಸ್ವಾಮೀಜಿ ಯ ಕನಸಿನ ಕೂಸಾಗಿರುವ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಆಶಯದಂತೆ 640 ಕೋಟಿ ರೂ. ಯೋಜನೆ ಪ್ರಾರಂಭವಾಗಿದೆ.
ನೀರು ಬಿಡಿ ಅಂದರೆ ರೀಲು ಬಿಡುವ ಕೆಲಸ ಆಗುತ್ತಿದೆ:- ಯೋಜನೆ ಆರಂಭವಾಗಿ 6 ವರ್ಷಗಳೇ ಕಳೆದಿವೆ. 2023ನೇ ಇಸವಿ ಬಂದರೂ ಕಾಮಗಾರಿ ಪೂರ್ಣಗೊಂಡಿಲ್ಲ. 57 ಕೆರೆಗಳಿಗೆ ನೀರು ಬರುತ್ತದೆ ಎಂದು ಈಗಾಗಲೇ ಎರಡು ಶಾಸಕರು ಆಯ್ಕೆ ಯಾಗಿ ಹೋಗಿದ್ದಾರೆ. ಕರ್ನಾಟಕ ನೀರಾವರಿ ನಿಗದಮದ ಅಧಿಕಾರಿಗಳೇ ನೀರು ರ್ರಿ, ನೀರು ಬಿಡಿ ಅಂದರೆ ರೀಲು ಬಿಡುವ ಕೆಲಸ ಮಾಡುತ್ತಿದ್ದಾರೆ. ಸಂಬoಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ನೀರು ಬಿಡುವ ವ್ಯವಸ್ಥೆ ಮಾಡಿ ಎಂದರು.
ಜವಾನನನ್ನು ಆಯ್ಕೆ ಮಾಡಿದ ಕ್ಷೇತ್ರ:- ರಾಜ್ಯದ 224 ಕ್ಷೇತ್ರಗಳ ಪೈಕಿ ಕಟ್ಟ ಕಡೆಯ ಜವಾನನಾಗಿದ್ದ ನನ್ನನ್ನು ಕಾಂಗ್ರೆಸ್ ಪಕ್ಷ ಗುರ್ತಿಸಿ ಟಿಕೆಟ್ ನೀಡಿದ್ದು, ಜಗಳೂರು ಕ್ಷೇತ್ರದ ಜನರು ಜವಾನನಾದ ನನ್ನನ್ನು ಆಯ್ಕೆ ಮಾಡಿ ವಿಧಾನ ಸಭೆಗೆ ಕಳುಹಿಸಿದ್ದಾರೆ. ವಿಧಾನ ಸಭೆಗೆ ಆಯ್ಕೆಯಾದರೆ ಯಾವ ರೀತಿ ಕ್ಷೇತ್ರದ ಅಭಿವೃದ್ಧಿಯಾಗ ಲಿದೆ, ಅವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂಬ ನಿರೀಕ್ಷೆಯನ್ನು ಸಹ ಇಟ್ಟು ಕೊಂಡಿದ್ದಾರೆ.
ಆದರೆ ಜನ ನನ್ನ ಮೇಲೆ ಭರವಸೆಯಿಟ್ಟು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಯಾಗ ಬೇಕಾ ದರೆ 57 ಕೆರೆ ಏತ ಕಾಮಗಾರಿ ಪೂರ್ಣಗೊಂಡರೆ ಮಾತ್ರ ಸಾಧ್ಯ. ಇನ್ನು ಏಳು ಕಿ.ಮೀ. ಪೈಪ್ಲೈನ್ ಕಾಮಗಾರಿ ಬಾಕಿ ಉಳಿದಿದೆ. ಅದು ಪೂರ್ಣಗೊಂಡರೆ 34 ಕೆರೆಗಳಿಗೆ ನೀರು ಹರಿಸಬಹುದು. ನೀರಾವರಿ ನಿಗಮದ ಅಧಿಕಾರಿಗಳು ಕಾಮಗಾರಿಗೆಯನ್ನು ತುರ್ತಾ ಗಿ ಪೂರ್ಣಗೊಳಿಸಬೇಕಿದೆ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.